ಸಿನಿಮಾ ಸುದ್ದಿ

ಬಾಹುಬಲಿ ಬಳಿಕ "ಮಹಾಭಾರತ"ದತ್ತ ರಾಜಮೌಳಿ ಚಿತ್ತ!

ಬಾಹುಬಲಿ-2 ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸಿರುವ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಮತ್ತೊಂದು ದೊಡ್ಡ ಬಜೆಟ್ ಚಿತ್ರದ ಮುನ್ಸೂಚನೆ ನೀಡಿದ್ದು, ಐತಿಹಾಸಿಕ ಮಹಾಭಾರತ ಕಥೆಯಾಧಾರಿತ ಚಿತ್ರವನ್ನು ಮಾಡುವ ಕುರಿತು ಚಿಂತನೆಯಲ್ಲಿ ತೊಡಗಿದ್ದಾರೆ.

ಬಾಹುಬಲಿ ಬಳಿಕ "ಮಹಾಭಾರತ"ದತ್ತ ರಾಜಮೌಳಿ ಚಿತ್ತ!
ಸಂಗ್ರಹ ಚಿತ್ರ
Published On :

ಹೈದರಾಬಾದ್: ಬಾಹುಬಲಿ-2 ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸಿರುವ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಮತ್ತೊಂದು ದೊಡ್ಡ ಬಜೆಟ್ ಚಿತ್ರದ ಮುನ್ಸೂಚನೆ ನೀಡಿದ್ದು, ಐತಿಹಾಸಿಕ ಮಹಾಭಾರತ ಕಥೆಯಾಧಾರಿತ ಚಿತ್ರವನ್ನು ಮಾಡುವ ಕುರಿತು ಚಿಂತನೆಯಲ್ಲಿ ತೊಡಗಿದ್ದಾರೆ.

ಈಗಾಗಲೇ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಅಭೂತಪೂರ್ವ ಯಶಸ್ಸು ಕಂಡಿದ್ದು, ಇದರ ಮುಂದುವರೆದ ಭಾಗ ಬಾಹುಬಲಿ-2 ಅಂತಿಮ ಹಂತದಲ್ಲಿದೆ. ಚಿತ್ರ ಇದೇ ಏಪ್ರಿಲ್ 28ರಂದು ತೆರೆ ಕಾಣುವ ಸಾಧ್ಯತೆ ಇದ್ದು,  ಇದರ ಬೆನ್ನಲ್ಲೇ ನಿರ್ದೇಶಕ ರಾಜಮೌಳಿ ಮತ್ತೊಂದು ದೊಡ್ಡ ಬಜೆಟ್ ಚಿತ್ರಕ್ಕೆ ಯೋಜನೆ ರೂಪಿಸಿದ್ದಾರೆ. ಮೂಲಗಳ ಪ್ರಕಾರ ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಇದು ಆತೀ ದೊಡ್ಡ ಬಜೆಟ್ ಚಿತ್ರವಾಗಿರಲಿದ್ದು, ಈ ಬಿಗ್ ಬಜೆಟ್  ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟರು ಹಾಗೂ ದಕ್ಷಿಣ ಭಾರತದ ಖ್ಯಾತ ನಟ ನಟಿಯರು ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಿರ್ದೇಶಕ ರಾಜಮೌಳಿ ಮಹಾಭಾರತ ಕಥೆಯಾಧಾರಿತ ಚಿತ್ರ ಮಾಡುವುದು ತಮ್ಮ ಜೀವನ ಅತ್ಯಂತ ದೊಡ್ಡ ಕನಸು, ಬಾಲಿವುಡ್ ಹಾಗೂ ದಕ್ಷಿಣ ಭಾರತದ  ಖ್ಯಾತ ನಟರನ್ನು ಹಾಕಿಕೊಂಡು ಚಿತ್ರ ಮಾಡಬೇಕು ಎಂಬುದು ನನ್ನ ಆಸೆ ಎಂದು ಹೇಳಿಕೊಂಡಿದ್ದರು.

ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿ ಚಿತ್ರ ನಿರ್ಮಾಣ ಮಾಡುವುದರಲ್ಲಿ ರಾಜಮೌಳಿ ಎತ್ತಿದ ಕೈ. ಹೀಗಾಗಿಯೇ ಅವರ ಯಮದೊಂಗ, ಮಗಧೀರ ಮತ್ತು ಇತ್ತೀಚಿನ ಬಾಹುಬಲಿ ಚಿತ್ರಗಳು ಅಭೂಕ ಪೂರ್ವ ಯಶಸ್ಸು  ಕಂಡಿದ್ದವು. ಇದೀಗ ಬಾಹುಬಲಿ-2 ಚಿತ್ರದ ಅಂತಿಮ ಹಂತದ ಕಾರ್ಯಗಳಲ್ಲಿ ರಾಜಮೌಳಿ ಬಿಸಿಯಾಗಿದ್ದು. ಈ ಚಿತ್ರ ತೆರೆಕಂಡ ಬಳಿಕ ತಮ್ಮ ಮುಂದಿನ ಯೋಜನೆ ಕುರಿತಂತೆ ಮಾಹಿತಿ ನೀಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.