"ಓಂ ನಮೋ ವೆಂಕಟೇಶಾಯ" ಚಿತ್ರದ ಆಡಿಯೋ ಬಿಡುಗಡೆ
ನಟ ಅಕ್ಕಿನೇನಿ ನಾಗಾರ್ಜುನ ಅಭಿನಯದ ಬಹು ನಿರೀಕ್ಷಿತ ಚಿತ್ರ "ಓಂ ನಮೋ ವೆಂಕಟೇಶಾಯ" ಚಿತ್ರದ ಆಡಿಯೋ ಭಾನುವಾರ ಹೈದರಾಬಾದಿನಲ್ಲಿ ಬಿಡುಗಡೆ ಮಾಡಲಾಗಿದೆ.

ಹೈದರಾಬಾದ್: ನಟ ಅಕ್ಕಿನೇನಿ ನಾಗಾರ್ಜುನ ಅಭಿನಯದ ಬಹು ನಿರೀಕ್ಷಿತ ಚಿತ್ರ "ಓಂ ನಮೋ ವೆಂಕಟೇಶಾಯ" ಚಿತ್ರದ ಆಡಿಯೋ ಭಾನುವಾರ ಹೈದರಾಬಾದಿನಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಹಿಂದೆ ಅನ್ನಮಯ್ಯ ಮತ್ತು ಶ್ರೀರಾಮದಾಸು ಚಿತ್ರಗಳಂತಹ ಭಕ್ತಿ ಪ್ರಧಾನ ಚಿತ್ರ ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಕೆ.ರಾಘವೇಂದ್ರ ರಾವ್ ಅವರ ನಿರ್ದೇಶನವಿರುವ "ಓಂ ನಮೋ ವೆಂಕಟೇಶಾಯ" ಚಿತ್ರದ ಆಡಿಯೋವನ್ನು ವೈಕುಂಠ ಏಕಾದಶಿ ದಿನವಾದ ಇಂದು ಚಿತ್ರತಂಡ ಬಿಡುಗಡೆ ಮಾಡಿದೆ. ಹೈದರಾಬಾದಿನಲ್ಲಿ ವಿದ್ಯುಕ್ತವಾಗಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಆಡಿಯೋವನ್ನು ಬಿಡುಗಡೆ ಮಾಡಲಾದಗಿದ್ದು, ಚಿತ್ರರಂಗದ ಗಣ್ಯರು ಹಾಗೂ ಹಲವು ಉದ್ಯಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅನ್ನಮಯ್ಯ ಮತ್ತು ಶ್ರೀರಾಮದಾಸು ಚಿತ್ರಗಳ ಬಳಿಕ ನಟ ನಾಗಾರ್ಜುನ ಹಾಗೂ ನಿರ್ದೇಶಕ ರಾಘವೇಂದ್ರ ರಾವ್ ಅವರು ಮೂರನೇ ಬಾರಿಗೆ ಭಕ್ತಿ ಪ್ರಧಾನ ಚಿತ್ರ ನಿರ್ಮಾಣ ಮಾಡುತ್ತಿದ್ದು, "ಓಂ ನಮೋ ವೆಂಕಟೇಶಾಯ" ಚಿತ್ರ ತನ್ನ ಟ್ರೈಲರ್ ಮೂಲಕವೇ ಈಗಾಗಲೇ ಸಾಕಷ್ಟು ಸುದ್ದಿ ಮಾಡುವ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
"ಓಂ ನಮೋ ವೆಂಕಟೇಶಾಯ" ಹಾಥಿರಾಮ್ ಬಾಬಾ ಅವರ ಜೀವನಾಧರಿತ ಚಿತ್ರವಾಗಿದ್ದು, ಹಾಥಿರಾಮ್ ಬಾಬಾ ಪಾತ್ರದಲ್ಲಿ ನಟ ನಾಗಾರ್ಜುನ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇಶ್ವರ ಸ್ವಾಮಿ ಪಾತ್ರದಲ್ಲಿ ಹಿಂದಿಯ ಮಹಾಭಾರತ ಖ್ಯಾತಿಯ ಸೌರಭ್ ರಾಜ್ ಜೈನ್ ಅಭಿನಯಿಸಿದ್ದು, ಚಿತ್ರದ ಇತರೆ ಪಾತ್ರಗಳಲ್ಲಿ ನಟಿ ಅನುಷ್ಕಾ ಶೆಟ್ಟಿ, ಪ್ರಗ್ಯಾ ಜೈಸ್ವಾಲ್, ಹಾಸ್ಯ ನಟ ಬ್ರಹ್ಮಾನಂದಂ, ನಟ ಜಗಪತಿ ಬಾಬು ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದು, ಎಎಂಆರ್ ಸಾಯಿಕೃಪಾ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ.
ಚಿತ್ರವು ಮುಂಬರುವ ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


