ಶಿವಣ್ಣನಿಗೆ ಶ್ರೀಕಂಠ ಚಿತ್ರದೊಂದಿಗೆ ಹೊಸ ವರ್ಷ ಆರಂಭ
ಸ್ಯಾಂಡಲ್ವುಡ್ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅಭಿನಯದ ಶ್ರೀಕಂಠ ಚಿತ್ರ ಹೊಸ ವರ್ಷ ಆರಂಭದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರವಾಗಿದೆ...

ಸ್ಯಾಂಡಲ್ವುಡ್ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅಭಿನಯದ ಶ್ರೀಕಂಠ ಚಿತ್ರ ಹೊಸ ವರ್ಷ ಆರಂಭದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರವಾಗಿದೆ.
ಶ್ರೀಕಂಠ ಚಿತ್ರದ ಜತೆಗೆ ರಮೇಶ್ ಅರವಿಂದ್ ನಟನೆಯ 100ನೇ ಚಿತ್ರ ಪುಷ್ಪಕ ವಿಮಾನ ಸಹ ಅಂದೇ ಬಿಡುಗಡೆಯಾಗುತ್ತಿದ್ದು ಎರಡು ಚಿತ್ರಗಳು ಬಾಕ್ಸ್ ಆಫೀಸ್ ಸದ್ದು ಮಾಡಲಿದೆ ಎಂದು ನಟ ಆಶಿಸಿದರು.
ಶ್ರೀಕಂಠ ಚಿತ್ರದಲ್ಲಿ ಸಾಮಾನ್ಯ ಪ್ರಜೆಯಾಗಿ ಕಾಣಿಸಿಕೊಂಡಿದ್ದೇನೆ ಎಂದು ಶಿವಣ್ಣ ಹೇಳಿದ್ದಾರೆ. ಚಿತ್ರದಲ್ಲಿ ನಾಯಕನ ಸ್ಟೈಲ್ ಗಿಂತ ಸಾಮಾನ್ಯ ಪ್ರಜೆಯಂತೆ ಕಾಣಸಿಕೊಳ್ಳಬೇಕಿತ್ತು. ಹೀಗಾಗಿ ಅದಕ್ಕೆ ಬೇಕಂತ ರೀತಿಯಲ್ಲಿ ನಾನು ಬದಲಾಗಿದೆ ಎಂದು ಹೇಳಿದ್ದಾರೆ.
ನಿರ್ದೇಶಕ ಮಂಜು ಸ್ವರಾಜ್ ಚಿತ್ರಕಥೆಯನ್ನು ಸುಂದರವಾಗಿ ಹೆಣೆದಿದ್ದಾರೆ. ಚಿತ್ರ ಭಾವನಾತ್ಮಕತೆಯಿಂದ ಕೂಡಿದೆ ಎಂದು ಹೇಳಿದ್ದಾರೆ.
ಶ್ರೀಕಂಠ ಚಿತ್ರ ಶಿವಣ್ಣನ ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ
1. ರಬ್ಬರ್ ಚಪ್ಪಲಿಗಳನ್ನು ಬಳಸಿದ್ದಾರೆ.
2. ಸಾಹಸಸಿಂಹ ವಿಷ್ಣುವರ್ಧನ್ ಅವರ ಬಂಗಲೆಯನ್ನು ಬಳಿಸಿಕೊಳ್ಳಲಾಗಿತ್ತು.
3. ನೂತನ ಶರ್ಟ್ ಗಳನ್ನು ಬಳಸಿರುವ ಶಿವಣ್ಣ
4. ಸಾರ್ವಜನಿಕ ಪ್ರದೇಶಗಳಾದ ಆರ್ಎಂಸಿ ಯಾರ್ಡ್, ಯಶವಂತಪುರ ಲಾರಿ ಸ್ಟಾಂಡ್, ವಿಜಯನಗರ ಪ್ಲೇಓವರ್ ಕೇಳಗೆ ಚಿತ್ರದ ಶೂಟಿಂಗ್ ಮಾಡಲಾಗಿದೆ.
5. ಚಲಿಸುತ್ತಿದ್ದ ರೈಲಿನ ಕೇಳಗೆ ಮಲಗಿದ್ದ ಶಿವಣ್ಣ
6. ಸಂಚಾರಿ ದಟ್ಟಣೆ ಮಧ್ಯೆ ದಿವಂಗತ ನಟ ಅನಿಲ್ ಶಿವಣ್ಣ ಫೈಟ್
7. ರೋಪ್ ಬಳಸದೆ 60 ಅಡಿ ಬೆಟ್ಟ ಹತ್ತಿದ ಶಿವಣ್ಣ
8. ರ್ಯಾಪ್ ಸ್ಟೈಲ್ ಸಾಂಗ್ ಬಳಕೆ
9. ಓಂ ಚಿತ್ರದ ಬಳಿಕ ಅಂಬಾಸಿಡರ್ ಕಾರು ಬಳಸಿದ ಶಿವಣ್ಣ
ಅಂಬಾಸಿಡರ್ ಕಾರು ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


