ಬೆಂಗಳೂರಿನ ಅಂಡರ್ ವರ್ಲ್ಡ್ ಡಾನ್ ಜಯರಾಜ್ ಪಾತ್ರದಲ್ಲಿ ಉಪೇಂದ್ರ
ಮಮ್ಮಿ ಸೇವ್ ಮಿ ಚಿತ್ರದ ಯಶಸ್ಸಿನ ನಂತರ ಮತ್ತೊಂದು ಸಿನಿಮಾ ಮಾಡಲು ಹೊರಟಿರುವ ನಿರ್ದೇಶಕ ಲೋಹಿತ್ ಅಂಡರ್ ವರ್ಲ್ಡ್ ಡಾನ್ ಎಂ ಪಿ ಜಯರಾಜ್ ...

ಬೆಂಗಳೂರು: ಮಮ್ಮಿ ಸೇವ್ ಮಿ ಚಿತ್ರದ ಯಶಸ್ಸಿನ ನಂತರ ಮತ್ತೊಂದು ಸಿನಿಮಾ ಮಾಡಲು ಹೊರಟಿರುವ ನಿರ್ದೇಶಕ ಲೋಹಿತ್ ಅಂಡರ್ ವರ್ಲ್ಡ್ ಡಾನ್ ಎಂ ಪಿ ಜಯರಾಜ್ ಕುರಿತು ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ.
ಚಿತ್ರದ ಕುರಿತು ಜನವರಿ 15ರ ನಂತರ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ. ಅಗ್ನಿ ಶ್ರೀಧರ್ ಚಿತ್ರದಲ್ಲಿ ಪಾತ್ರ ಮಾಡಲಿದ್ದು, ಸ್ಕ್ರಿಪ್ಟ್ ತಯಾರಾಗುತ್ತಿದೆ. ಜಯರಾಜ್ ಪಾತ್ರವನ್ನು ಉಪೇಂದ್ರ ನಿರ್ವಹಿಸಲಿದ್ದಾರೆ.
ಅಂದುಕೊಂಡಂತೆ ಎಲ್ಲವೂ ಆದರೆ ಅಂದರ್ ಬಾಹರ್ ಚಿತ್ರ ನಿರ್ಮಿಸಿದ್ದ ಭಾಸ್ಕರ್ ಉಪೇಂದ್ರ ಅವರ 54ನೇ ಚಿತ್ರ ವನ್ನು ನಿರ್ಮಿಸಲಿದ್ದಾರೆ. ಚಿತ್ರದ ಬಗ್ಗೆ ಪ್ರಕಟಿಸಲು ಇದು ಸಮಯವಲ್ಲ, ಏಕೆಂದರೆ ಉಪೇಂದ್ರ ಅವರು ಹಲವು ಚಿತ್ರಗಳಿಗೆ ಸಹಿ ಮಾಡಿದ್ದಾರೆ . ಆದರೆ ಚಿತ್ರದಲ್ಲಿ ಪಾತ್ರ ಮಾಡು ಅವರು ಒಪ್ಪಿದ್ದಾರೆ.
1980ರ ದಶಕದ ಭೂಗತ ಜಗತ್ತಿನ ನೈಜ ಕಥೆಯನ್ನು ಅಗ್ನಿ ಶ್ರೀಧರ್ ಗಿಂತ ಚೆನ್ನಾಗಿ ವರ್ಣಿಸಲು ಮತ್ಯಾರಿಂದಲೂ ಸಾಧ್ಯವಿಲ್ಲ, ಹೀಗಾಗಿ ಅವರೇ ಸಂಭಾಷಣೆ ಬರೆಯುತ್ತಿದ್ದಾರೆ.
ಉಪೇಂದ್ರ ಸದ್ಯ ನಾಗಣ್ಣ ಅವರ ಕಣ್ಣೇಶ್ವರ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅದಾದ ನಂತರ ಕೆ. ಮಾದೇಶ ಅವರ ಉಪ್ಪಿ ರುಪಿ ಹಾಗೂ ಶಶಾಂಕ್ ಮತ್ತು ಮಂಜು ಮಾಂಡವ್ಯ ಅವರ ಮುಂದಿಮ ಚಿತ್ರಗಳಿಗೆ ಉಪೇಂದ್ರ ಸಹಿಹಾಕಿದ್ದಾರೆ.
ಇನ್ನೂ ಸ್ಯಾಂಡಲ್ ವುಡ್ ನಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಡಾನ್ ಜಯರಾಜ್ ಪುತ್ರ ಅಜಿತ್ ಜಯರಾಜ್ ತಮ್ಮ ತಂದೆಯ ಬಗ್ಗೆ ಒಂದು ಸಿನಿಮಾ ಮಾಡಬೇಕೆಂದು ಬಯಸಿದ್ದರು. ನನ್ನ ತಂದೆ ರೌಡಿಯಾಗಿದ್ದರೂ, ಹಲವರಿಗೆ ಅವರು ರಾಬಿನ್ ವುಡ್ ಆಗಿದ್ದರು ಎಂದು ಸಿಟಿ ಎಕ್ಸ್ ಪ್ರೆಸ್ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.
ತಾನು ಅಂಕಲ್ ಎಂದು ಭಾವಿಸಿರುವ ಅಗ್ನಿ ಶ್ರೀಧರ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿರುವುದು ತನಗೆ ಸಂತಸ ತಂದಿದೆ ಎಂದು ಅಜಿತ್ ಹೇಳಿದ್ದಾರೆ. ಇನ್ನೂ ಉಪೇಂದ್ರ ಅವರ ಚಿತ್ರ ನಿರ್ದೇಶಿಸುತ್ತಿರುವುಕ್ಕೆ ಲೋಹಿತ್ ಹರ್ಷ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


