ಮಹರ್ಶಾಲಾ ಅಲಿ ಆಸ್ಕರ್ ಪ್ರಶಸ್ತಿಗೆ ಭಾಜನರಾದ ಮೊದಲ ಮುಸ್ಲಿಂ ನಟ
ಆಸ್ಕರ್ ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಂ ನಟನೋರ್ವ ಪ್ರಶಸ್ತಿ ಪಡೆದಿದ್ದು, ಮೂನ್ ಲೈಟ್ ಚಿತ್ರದಲ್ಲಿನ ಅಮೋಘ ನಟನೆಗಾಗಿ ಮಹರ್ಶಾಲಾ ಅಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನ್ಯೂಯಾರ್ಕ್: ಆಸ್ಕರ್ ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಂ ನಟನೋರ್ವ ಪ್ರಶಸ್ತಿ ಪಡೆದಿದ್ದು, ಮೂನ್ ಲೈಟ್ ಚಿತ್ರದಲ್ಲಿನ ಅಮೋಘ ನಟನೆಗಾಗಿ ಮಹರ್ಶಾಲಾ ಅಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಿಯಾಮಿ ಸಮುದಾಯದ ಕುರಿತು ಬೆಳಕು ಚೆಲ್ಲುವ "ಮೂನ್ ಲೈಟ್" ಚಿತ್ರದಲ್ಲಿ ಮಹರ್ಶಾಲಾ ಅಲಿ ಅಮೋಘವಾಗಿ ಅಭಿನಯಿಸಿದ್ದರು. ಚಿತ್ರವನ್ನು ಬೆರ್ರಿ ಜೆಂಕಿನ್ಸ್ ನಿರ್ದೇಶಿಸಿದ್ದು, ಚಿತ್ರ 2016ರ ಅಕ್ಟೋಬರ್ 21ರಂದು ತೆರೆ ಕಂಡಿತ್ತು.
ಇನ್ನು ಈ ವಿಭಾಗಲ್ಲಿ ಸಾಕಷ್ಟು ಸ್ಪರ್ಧೆ ಇತ್ತು. ಪ್ರಮುಖವಾಗಿ ಖ್ಯಾತ ನಟರಾದ ಮೈಕಲ್ ಶ್ಯಾನೋನ್ (ನೋಕ್ಟರ್ನಲ್ ಅನಿಮಲ್ಸ್), ಜೆಫ್ ಬ್ರಿಡ್ಜಸ್ (ಹೆಲ್ ಆರ್ ಹೈ ವಾಟರ್), ಲುಕಾಸ್ ಹೆಡ್ಜಸ್ (ಮ್ಯಾಚೆಂಸ್ಟರ್ ಬೈ ದಿ ಸೀ) ಮತ್ತು ಭಾಫ್ಕಾ ಪ್ರಶಸ್ತಿ ವಿಜೇತ ದೇವ್ ಪಟೇಲ್ (ಲಯನ್) ಅವರು ತೀವ್ರ ಪೈಪೋಟಿ ನೀಡಿದ್ದರು. ಈ ಎಲ್ಲ ಘಟಾನುಘಟಿಗಳನ್ನು ಹಿಂದಿಕ್ಕಿ ಅಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


