ಚಿತ್ರನಟ ನಾಗಾರ್ಜುನ್ ಪುತ್ರ ಅಖಿಲ್ ಅಕ್ಕಿನೇನಿ ಮತ್ತು ಶ್ರಿಯಾ ಭೂಪಾಲ್ ವಿವಾಹ ರದ್ದು?
ಟಾಲಿವುಡ್ ಪ್ರಸಿದ್ದ ನಟ ನಾಗಾರ್ಜುನ್ ಪುತ್ರ ಅಖಿಲ್ ಅಕ್ಕಿನೇನಿ ಮತ್ತು ಉದ್ಯಮಿ ಜಿವಿಕೆ ರೆಡ್ಡಿ ಮೊಮ್ಮಗಳು ಶ್ರಿಯಾ ಭೂಪಾಲ್ ವಿವಾಹ ರದ್ದುಗೊಂಡಿದೆ ಎಂದು ...

ಹೈದರಾಬಾದ್: ಟಾಲಿವುಡ್ ಪ್ರಸಿದ್ದ ನಟ ನಾಗಾರ್ಜುನ್ ಪುತ್ರ ಅಖಿಲ್ ಅಕ್ಕಿನೇನಿ ಮತ್ತು ಉದ್ಯಮಿ ಜಿವಿಕೆ ರೆಡ್ಡಿ ಮೊಮ್ಮಗಳು ಶ್ರಿಯಾ ಭೂಪಾಲ್ ವಿವಾಹ ರದ್ದುಗೊಂಡಿದೆ ಎಂದು ಹೇಳಲಾಗಿದೆ.
ಅಕ್ಕಿನೇನಿ ನಾಗಾರ್ಜು ಮತ್ತು ಜಿವಿಕೆ ರೆಡ್ಡಿ ಅವರ ಕುಟುಂಬಗಳು ಮದುವೆಯನ್ನು ರದ್ದು ಪಡಿಸಿವೆ ಎಂಬ ಊಹಾ ಪೋಹದ ಮಾತುಗಳು ಕೇಳಿ ಬರುತ್ತಿವೆ.
ಅಖಿಲ್ ಮತ್ತು ಶ್ರಿಯಾ ಕಳೆದ ಡಿಸೆಂಬರ್ ನಲ್ಲಿ ಜಿವಿಕೆ ಹೌಸ್ ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವರ್ಷದ ಮೇ ತಿಂಗಳಲ್ಲಿ ಇಟಲಿಯಲ್ಲಿ ವಿವಾಹಕ್ಕೆ ದಿನಾಂಕ ನಿಗದಿ ಪಡಿಸಲಾಗಿತ್ತು.
ಹಲವು ಸೆಲಬ್ರೆಟಿಗಳು ಮದುವೆಗೆ ಇಟಲಿಗೆ ತೆರಳಲು ಈಗಾಗಲೇ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದರು. ಟಿಕೆಟ್ ಕ್ಯಾನ್ಸಲ್ ಮಾಡುವಂತೆ ಹೇಳಲಾಗಿದೆ ಎಂದು ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ.
ಅತಿಥಿಗಳಿಗೆ ತಾವು ಬುಕ್ ಮಾಡಿರುವ ಫ್ಲೈಟ್ ಟಿಕೆಟ್ ಕ್ಯಾನ್ಸಲ್ ಮಾಡಿಸುವಂತೆ ಎರಡು ಕುಟುಂಬದವರು ಕಳೆದ ಶನಿವಾರ ಹೇಳಿದ್ದಾರೆ. ಜೊತೆಗೆ ಎರಡು ಕುಟುಂಬಸ್ಥರು ತಾವು ಬುಕ್ ಮಾಡಿದ್ದ ಟಿಕೆಟ್ ಗಳನ್ನು ರದ್ದುಗೊಳಿಸಿದ್ದಾರೆ, ಆದರೆ ಕಾರಣ ಏನು ಎಂಬುದನ್ನು ಮಾತ್ರ ತಿಳಿಸಿಲ್ಲ.
ಇದೊಂದು ಅಂತಿಮ ಕ್ಷಣದ ನಿರ್ಧಾರವಾಗಿದೆ. ಈ ನಿರ್ಧಾರ ನಮಗೆಲ್ಲಾ ಅಚ್ಚರಿ ತಂದಿದೆ, ಕಳೆದ ವಾರದವರೆಗೂ ಎಲ್ಲವೂ ಸರಿಯಾಗಿತ್ತು ಎಂದು ಆಹ್ವಾನಿತರೊಬ್ಬರು ಹೇಳಿದ್ದಾರೆ.
ಇಟಲಿಯ ರೋಮ್ ನಲ್ಲಿ ವಿವಾಹಕ್ಕಾಗಿ ಸಿದ್ಧತೆಗಳು ಕೂಡ ಆರಂಭವಾಗಿತ್ತು. ದೊಡ್ಡ ಉದ್ಯಮಿಗಳು, ದಕ್ಷಿಣ ಭಾರತದ ಪ್ರಸಿದ್ಧ ಚಿತ್ರ ತಾರೆಯರು ಹಾಗೂ ಬಾಲಿವುಡ್ ಸ್ಟಾರ್ ಗಳು ಸೇರಿದಂತೆ ಸುಮಾರು 700 ಮಂದಿಗೆ ಆಹ್ವಾನ ನೀಡಲಾಗಿತ್ತು. ರೋಮ್ ನ ಅರಮನೆಯಲ್ಲಿ ಸಿದ್ಧತೆಗಳು ನಡೆಯುತ್ತಿದ್ದವು. ಅತಿಥಿಗಳಿಗೆ ಹೋಟೆಲ್ ಹಾಗೂ ರೆಸಾರ್ಟ್ ಬುಕ್ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಅಖಿಲ್ ಮತ್ತು ಶ್ರಿಯಾ ಕಳೆದ ಎರಡು ವರ್ಷಗಳಿಂದ ಪರಸ್ಪರ ಪರಿಚಿತರು. ಅಖಿಲ್ ತೆಲುಗಿನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರಿಯಾ ಭೂಪಾಲ್ ಕಾಜಲ್ ಅಗರ್ ವಾಲ್ , ಶ್ರಿಯಾ ಶರಣ್, ಶ್ರದ್ಧಾ ಕಪೂರ್ , ಅಲಿಯಾ ಭಟ್ ಸೇರಿದಂತೆ ಹಲವು ನಾಯಕರಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


