ಸಿನಿಮಾ ಸುದ್ದಿ

ನಟಿ ಭಾವನಾ ಅಪಹರಿಸಿ ಲೈಂಗಿಕ ಕಿರುಕುಳ, ಓರ್ವನ ಬಂಧನ

ಕನ್ನಡದ ಜಾಕಿ, ರೋಮಿಯೋ ಚಿತ್ರಗಳಲ್ಲಿ ಅಭಿನಯಿಸಿದ್ದ ಮಲಯಾಳಂ ನಟಿ ಭಾವನಾ ಅವರನ್ನು ಕಳೆದ ರಾತ್ರಿ ಕೆಲ ದುಷ್ಕರ್ಮಿಗಳು ಅಪಹರಣ ಮಾಡಿ

ನಟಿ ಭಾವನಾ ಅಪಹರಿಸಿ ಲೈಂಗಿಕ ಕಿರುಕುಳ, ಓರ್ವನ ಬಂಧನ
ಭಾವನಾ
Published On :

ಎರ್ನಾಕುಲಂ(ಕೇರಳ): ಕನ್ನಡದ ಜಾಕಿ, ರೋಮಿಯೋ ಚಿತ್ರಗಳಲ್ಲಿ ಅಭಿನಯಿಸಿದ್ದ ಮಲಯಾಳಂ ನಟಿ ಭಾವನಾ ಅವರನ್ನು ಕಳೆದ ರಾತ್ರಿ ಕೆಲ ದುಷ್ಕರ್ಮಿಗಳು ಅಪಹರಣ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಅಂಗಮಾಲಿಯ ಅಥಣಿ ಬಳಿ ಭಾವನಾ ಅವರ ಮಾಜಿ ಕಾರು ಚಾಲಕ ಗುಂಪಿನೊಂದಿಗೆ ಬಲವಂತವಾಗಿ ಭಾವನಾ ಕಾರು ನಿಲ್ಲಿಸಿ ಹತ್ತಿಕೊಂಡಿದ್ದಾರೆ. ನಂತರ ಪಲರಿವಟ್ಟಂವರೆಗೂ ಭಾವನಾ ಅವರಿಗೆ ಕಾರಿನಲ್ಲೇ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಭಾವನ ಪೊಲೀಸರಿಗೆ ದೂರು ನೀಡಿದ್ದಾರೆ.

ಪಲರಿವಟ್ಟಂಗೆ ಬಂದ ತಕ್ಷಣ ಅವರು ಕಾರು ನಿಲ್ಲಿಸಿ ಮತ್ತೊಂದು ಕಾರು ಹತ್ತಿ ಪರಾರಿಯಾಗಿದ್ದಾರೆ. ಅವರು ತನ್ನ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಂಡಿದ್ದಾರೆ ಎಂದು ನಟಿ ದೂರಿದ್ದಾರೆ. ಘಟನೆ ಬಳಿಕ ಭಾವನಾ ಕಾಕನಾಡದ ನಿರ್ದೇಶಕರ ಮನೆಗೆ ತೆರಳಿ ಆಶ್ರಯ ಪಡೆದು ನಂತರ ಪೊಲೀಸರಿಗೆ ದೂರು ನೀಡಿದರು.

ಈ ಸಂಬಂಧ ಭಾವನಾ ಕಾರು ಚಾಲಕ ಮಾರ್ಟಿನ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.