ಸಿನಿಮಾ ಸುದ್ದಿ

ಎಪಿ ಅರ್ಜುನ್‌ರ 'ಕಿಸ್' ಚಿತ್ರದಲ್ಲಿ ಹೊಸ ಮುಖಗಳು!

ಅಂಬಾರಿ, ಅದ್ಧೂರಿ ಚಿತ್ರ ಖ್ಯಾತಿಯ ನಿರ್ದೇಶಕ ಎಪಿ ಅರ್ಜುನ್ ಅವರು ತಮ್ಮ ಮುಂದಿನ ಕಿಸ್ ಚಿತ್ರದಲ್ಲಿ ನವ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ವಿರಾಟ್...

ಎಪಿ ಅರ್ಜುನ್‌ರ 'ಕಿಸ್' ಚಿತ್ರದಲ್ಲಿ ಹೊಸ ಮುಖಗಳು!
ಕಿಸ್ ಚಿತ್ರದ ನಾಯಕ-ನಾಯಕಿ
Published On :
ಅಂಬಾರಿ, ಅದ್ಧೂರಿ ಚಿತ್ರ ಖ್ಯಾತಿಯ ನಿರ್ದೇಶಕ ಎಪಿ ಅರ್ಜುನ್ ಅವರು ತಮ್ಮ ಮುಂದಿನ ಕಿಸ್ ಚಿತ್ರದಲ್ಲಿ ನವ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ವಿರಾಟ್ ಮತ್ತು ನಾಯಕಿಯಾಗಿ ಶ್ರೀಲೀಲಾ ಅಭಿನಯಿಸಲಿದ್ದಾರೆ. 
ವಾಲಂಟೈನ್ಸ್ ಡೇ ವಿಶೇಷವಾಗಿ ನಟ-ನಟಿಯ ಫೋಟೋಶೂಟ್ ಮಾಡಿಸಲಾಗಿದೆ ಎಂದು ನಿರ್ದೇಶಕ ಅರ್ಜುನ್ ಹೇಳಿದ್ದಾರೆ. ಈ ಫೋಟೋಗಳನ್ನು ನೋಡಿದರೇ ಪ್ರೀತಿಯಲ್ಲಿ ಬಿದ್ದವರು ಕಿಸ್ ಮಾಡಬೇಕೆನಿಸುತ್ತದೆ ಎಂದರು. 
ಏಳೆಂಟು ತಿಂಗಳ ಹಿಂದೆಯೇ ಚಿತ್ರವನ್ನು ಘೋಷಿಸಿದ್ದ ಅರ್ಜುನ್ ಚಿತ್ರದ ಪಾತ್ರಧಾರಿಗಳ ಆಯ್ಕೆಗಾಗಿ ಸರಿಸುಮಾರು ಏಳೆಂಟು ತಿಂಗಳ ಕಾಲ ತೆಗೆದುಕೊಂಡಿದ್ದು ಅಂತಿಮವಾಗಿ ತಾವು ಅಂದುಕೊಂಡಂತಹ ಪಾತ್ರಧಾರಿಗಳು ಸಿಕ್ಕಿದ್ದು ಇನ್ನೇನು ಚಿತ್ರದ ಶೂಟಿಂಗ್ ಪ್ರಾರಂಭಿಸುವುದಾಗಿ ಹೇಳಿದ್ದಾರೆ. 
ಹೊಸ ಮುಖಗಳ ಅನ್ವೇಷಣೆಯಲ್ಲಿದ್ದ ನಿರ್ದೇಶಕರು ನಾಯಕಿಗಾಗಿ ಸರಿಸುಮಾರು 200 ಯುವತಿಯರ ಸ್ಕ್ರೀನ್ ಟೆಸ್ಟ್ ಮಾಡಿಸಿದ್ದು ಅದರಲ್ಲಿ 17 ವರ್ಷದ ಶ್ರೀಲೀಲಾ ಅವರು ಕೊನೆಗೆ ಆಯ್ಕೆಯಾಗಿದ್ದಾರೆ. ಶ್ರೀಲೀಲಾ ಸದ್ಯ ಬಿಷಪ್ ಕಾಟನ್ ಕಾಲೇಜಿನಲ್ಲಿ ಪಿಯು ಓದುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.