ಸಿನಿಮಾ ಸುದ್ದಿ

ನನಗೆ ಸೂಕ್ತವಾಗುವಂತಹ ಪಾತ್ರಗಳನ್ನು ಮಾತ್ರ ಆರಿಸಿಕೊಳ್ಳುತ್ತೇನೆ: ಗುರುನಂದನ್

ಯಾವುದೇ ಸಿನಿಮಾ ಹಿನ್ನಲೆ ಇಲ್ಲದೇ ಫರ್ಸ್ಟ್ ರ್ಯಾಂಕ್ ರಾಜು ಚಿತ್ರದ ಮೂಲಕ ಪ್ರೇಕ್ಷಕರ ರಂಜಿಸಿದ್ದ ಗುರುನಂದನ್ ಇದೀಗ "ಸ್ಮೈಲ್ ಪ್ಲೀಸ್" ಎನ್ನುತ್ತಾ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ನನಗೆ ಸೂಕ್ತವಾಗುವಂತಹ ಪಾತ್ರಗಳನ್ನು ಮಾತ್ರ ಆರಿಸಿಕೊಳ್ಳುತ್ತೇನೆ: ಗುರುನಂದನ್
ಸಂಗ್ರಹ ಚಿತ್ರ
Published On :

ಬೆಂಗಳೂರು: ಯಾವುದೇ ಸಿನಿಮಾ ಹಿನ್ನಲೆ ಇಲ್ಲದೇ ಫರ್ಸ್ಟ್ ರ್ಯಾಂಕ್ ರಾಜು ಚಿತ್ರದ ಮೂಲಕ ಪ್ರೇಕ್ಷಕರ ರಂಜಿಸಿದ್ದ ಗುರುನಂದನ್ ಇದೀಗ "ಸ್ಮೈಲ್ ಪ್ಲೀಸ್" ಎನ್ನುತ್ತಾ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ತಮ್ಮ ಮೊದಲ ಚಿತ್ರದಲ್ಲೇ ಯಶಸ್ಸು ಗಳಿಸಿದ ಗುರುನಂದನ್ ಇದೀಗ ಸ್ಮೈಲ್ ಪ್ಲೀಸ್ ಚಿತ್ರದ ಮೂಲಕ ಮತ್ತೆ ತಮ್ಮ ಅದೃಷ್ಟ ಪರೀಕ್ಷೆ ಇಳಿದಿದ್ದು, ಸ್ಮೈಲ್ ಪ್ಲೀಸ್ ಚಿತ್ರ ಫರ್ಸ್ಚ್ ರ್ಯಾಂಕ್ ರಾಜುಗಿಂತಲೂ ವಿಭಿನ್ನವಾದ ಚಿತ್ರವೆಂದು  ಗುರುನಂದನ್ ಹೇಳಿದ್ದಾರೆ. ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ತಾನು ಸಾಕಷ್ಟು ಏಳುಬೀಳು ಕಂಡಿದ್ದೇನೆ. ಇವೇ ನನ್ನನ್ನು ಚಿತ್ರರಂಗದಲ್ಲಿ ಮತ್ತಷ್ಟು ದೃಢಗೊಳಿಸಿದೆ. ಚಿತ್ರರಂಗವನ್ನು ನಾನು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತೇನೆ.  ಹೊಸ ಟ್ರೆಂಡ್ ಗಳು, ಪ್ರೇಕ್ಷಕರು ಚಿತ್ರದಲ್ಲಿ ಏನನ್ನು ಬಯಸುತ್ತಾರೆ ಎಂಬಿತ್ಯಾದಿ ಅಂಶಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ.

ಒಂದು ಕುಟುಂಬದ ಎಲ್ಲ ಸದಸ್ಯರಿಗೂ ಚಿತ್ರ ಇಷ್ಟವಾದರೆ ಆ ಚಿತ್ರ ಖಂಡಿತಾ ಯಶಸ್ಸು ಗಳಿಸುತ್ತದೆ. ಹೀಗಾಗಿ ತನ್ನ ಚಿತ್ರಗಳನ್ನು ಈ ದೃಷ್ಟಿಕೋನದಿಂದಲೇ ನೋಡುತ್ತೇನೆ. ಅಂತೆಯೇ ಚಿತ್ರಕಥೆ ಆರಿಸುವಾಗ ತುಂಬಾ  ಜಾಗರೂಕನಾಗಿ ಆರಿಸುತ್ತೇನೆ. ಈ ಹಿಂದಿನ ಚಿತ್ರದ ಪಾತ್ರದ ಯಾವುದೇ ಛಾಯೆ ಇಲ್ಲದಂತೆ ನೋಡಿಕೊಳ್ಳಲು ಶ್ರಮಿಸುತ್ತೇನೆ ಎಂದು ಗುರುನಂದನ್ ಹೇಳಿದ್ದಾರೆ.

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರೇ ನನಗೆ ಸ್ಪೂರ್ತಿ. ಅವರ ಪ್ರತೀ ಚಿತ್ರವೂ ವಿಭಿನ್ನವಾಗಿರುತ್ತದೆ. ಅವರ ಪಾತ್ರ ಕೂಡ ಈ ಹಿಂದಿನ ಚಿತ್ರಕ್ಕಿಂತ ವಿಭಿನ್ನವಾಗಿರುವಂತೆ ನೋಡಿಕೊಳ್ಳುತ್ತಾರೆ. ಪಾತ್ರಕ್ಕೆ  ಸಂಬಂಧಿಸಿದಂತೆ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳುತ್ತಾರೆ. ಚಿತ್ರ ಮತ್ತು ಚಿತ್ರದ ಪಾತ್ರದ ಮೇಲಿನ ಅವರ ಪ್ರೀತಿ ಎಂತಹವರಿಗೂ ಬೆರಗು ಉಂಟುಮಾಡುತ್ತದೆ. ನಾನು ಕೂಡ ಅವರಂತೆಯೇ ನನ್ನ ಬಾಡಿ ಲಾಂಗ್ವೇಜ್  ತಕ್ಕಂತಹ ಪಾತ್ರಗಳನ್ನೇ ಆರಿಸಿಕೊಳ್ಳುತ್ತೇನೆ. ನನಗೆ ಸೂಕ್ತವಲ್ಲದ ಕಥೆಗಳನ್ನು ನಾನು ಯಾವುದೇ ಕಾರಣಕ್ಕೂ ಆಯ್ಕೆ ಮಾಡಿಕೊಳ್ಳುವುದಿಲ್ಲ. ಕಥೆ ಚೆನ್ನಾಗಿದೆ ಎಂದು ಹೇಳಿ ಸಿಕ್ಕ ಸಿಕ್ಕ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು  ಸಾಧ್ಯವಿಲ್ಲ. ನಾನು 10 ಎಸ್ ಯುವಿಗಳನ್ನು ಜೊತೆ ಓಡಿದರೆ ನೋಡಿದ ಜನ ಆ ಪಾತ್ರ ನನಗೆ ಸೂಕ್ತವಲ್ಲ ಎಂದು ನಿಜಕ್ಕೂ ನಗುತ್ತಾರೆ. ಇದೇ ಕಾರಣಕ್ಕೆ ನನ್ನ ಬಾಡಿ ಲ್ಯಾಂಗ್ವೇಜ್ ಸರಿಯಾಗುವ ಪಾತ್ರಗಳನ್ನೇ ನಾನು ಆಯ್ಕೆ  ಮಾಜಿಕೊಳ್ಳುತ್ತೇನೆ.

ಇನ್ನು ಸ್ಮೈಲ್ ಪ್ಲೀಸ್ ಚಿತ್ರ ಸಂಪೂರ್ಣ ಕುಟುಂಬ ಮನೋರಂಜನಾ ಚಿತ್ರವಾಗಿದ್ದು, ಪ್ರಸ್ತುತ ಜೀವನ ಶೈಲಿಯನ್ನು ಬಿಂಬಿಸುವ ಮತ್ತು ವಿಮರ್ಶಿಸುವ ಪ್ರಯತ್ನ ಸ್ಮೈಲ್ ಪ್ಲೀಸ್ ಚಿತ್ರದಲ್ಲಿದೆ. ನಮ್ಮ ನಿತ್ಯದ ರೊಟೀನ್ ಜೀವನ  ಶೈಲಿಯಿಂದಾಗುವ ಘಟನೆಗಳ ಸುತ್ತಲೂ ಸ್ಮೈಲ್ ಪ್ಲೀಸ್ ಚಿತ್ರ ಸುತ್ತುತ್ತದೆ. ಈ ಹಿಂದಿನ ಫರ್ಸ್ಟ್ ರ್ಯಾಂಕ್ ರಾಜು ಚಿತ್ರದ ಯಾವುದೇ ನೆರಳು ಈ ಪಾತ್ರದಲ್ಲಿ ಕಾಣಿಸದಂತೆ ಎಚ್ಚರ ವಹಿಸಿದ್ದೇನೆ ಎಂದು ಗುರುನಂದನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.