ಸಿಂಗಲ್ ಸ್ಕ್ರೀನ್‌ಗಾಗಿ ಚೌಕಾ ಚಿತ್ರದ 20 ನಿಮಿಷದ ದೃಶ್ಯಕ್ಕೆ ಕತ್ತರಿ
ಕಳೆದ ವಾರ ಬಿಡುಗಡೆಯಾಗಿದ್ದ ಚೌಕಾ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇನ್ನು ಚಿತ್ರ 3 ಗಂಟೆ ಕಾಲಾವಧಿ ಹೊಂದಿದೆ. ಸಿಂಗಲ್ಸ್ ಸ್ಕ್ರೀನ್‌ಗಾಗಿ ಚೌಕಾ ಚಿತ್ರದ 20 ನಿಮಿಷದ...

Published On :
ಕಳೆದ ವಾರ ಬಿಡುಗಡೆಯಾಗಿದ್ದ ಚೌಕಾ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇನ್ನು ಚಿತ್ರ 3 ಗಂಟೆ ಕಾಲಾವಧಿ ಹೊಂದಿದೆ. ಸಿಂಗಲ್ಸ್ ಸ್ಕ್ರೀನ್‌ಗಾಗಿ ಚೌಕಾ ಚಿತ್ರದ 20 ನಿಮಿಷದ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ.
ಸಿಂಗಲ್ಸ್ ಸ್ಕ್ರೀನ್ ಥಿಯೇಟರ್ ಸಮಯಕ್ಕೆ ಅನುಗುಣವಾಗಿ 20 ನಿಮಿಷದ ದೃಶ್ಯಗಳಿಗೆ ನಿರ್ದೇಶಕ ತರುಣ್ ಸುದೀರ್ ಕತ್ತರಿ ಹಾಕಿದ್ದಾರೆ. ಥಿಯೇಟರ್ ಗಳಲ್ಲಿ ಬೆಳಗ್ಗೆ 10.30, ಮಧ್ಯಾಹ್ನ 1.30, ಸಂಜೆ 4.30 ಮತ್ತು ರಾತ್ರಿ 7.30ಕ್ಕೆ ಚಿತ್ರ ಪ್ರದರ್ಶನ ಕಾಣಲಿವೆ.
ಹೀಗಾಗಿ ಮ್ಯಾಟ್ನಿ ಮತ್ತು ಫಸ್ಟ್ ಶೋ ಸಮಯಕ್ಕೆ ಚಿತ್ರ ವೀಕ್ಷಸಲು ತೆರಳುವ ಪ್ರೇಕ್ಷಕರು 20 ನಿಮಿಷದ ದೃಶ್ಯಗಳನ್ನು ಕಾಣಲು ಸಾಧ್ಯವಿಲ್ಲ ಎಂದು ತರುಣ್ ಸುಧೀರ್ ಹೇಳಿದ್ದಾರೆ.
ಮಲ್ಟಿಪ್ಲೇಕ್ಸ್ ನಲ್ಲಿ ಪ್ರದರ್ಶನಗೊಳ್ಳುವ ಚೌಕಾ ಚಿತ್ರಕ್ಕೆ ಯಾವುದೇ ಕತ್ತರಿ ಪ್ರಯೋಗ ಮಾಡಲಾಗಿಲ್ಲ. ಬದಲಿಗೆ ಶೇಖಡ 80ರಷ್ಟು ಕನ್ನಡ ಚಿತ್ರಗಳು ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣುವುದರಿಂದ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಹೇಳಿದ್ದಾರೆ.
ಕರ್ನಾಟಕ ಕುಳ್ಳ ಖ್ಯಾತಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಬ್ಯಾನರ್ ಅಡಿ ಚಿತ್ರ ನಿರ್ಮಿಸಲಾಗಿದೆ. ಚಿತ್ರದಲ್ಲಿ ಬಹುತಾರಾಗಣವಿದ್ದು ಪ್ರೇಮ್, ಪ್ರಜ್ವಲ್ ದೇವರಾಜ್, ವಿಜಯ್ ರಾಘವೇಂದ್ರ ಮತ್ತು ದಿಗಂತ್ ಅಭಿನಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


