ಆಧ್ಯಾತ್ಮ ನನಗೆ ಶಕ್ತಿ ತುಂಬುತ್ತದೆ: ಸೂಪರ್ಸ್ಟಾರ್ ರಜನಿ
ಪರಮಹಂಸ ಯೋಗಾನಂದ ಅವರ 'ಡಿವೈನ್ ರೋಮ್ಯಾನ್ಸ್' ಪುಸ್ತಕದ ತಮಿಳು ಅನುವಾದವನ್ನು ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಅನಾವರಣ ಮಾಡಿದ್ದಾರೆ.

Published On :
ಚೆನೈ: ಪರಮಹಂಸ ಯೋಗಾನಂದ ಅವರ 'ಡಿವೈನ್ ರೋಮ್ಯಾನ್ಸ್' ಪುಸ್ತಕದ ತಮಿಳು ಅನುವಾದವನ್ನು ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಅನಾವರಣ ಮಾಡಿದ್ದಾರೆ. ಇದು ಯೋಗೋದ ಸತ್ಸಾನ ಸಂಘ ಭಾರತದ ಶತಾಬ್ದಿ ಕಾರ್ಯಕ್ರಮವಾಗಿತ್ತು.
ಈ ಸಂದರ್ಭದಲ್ಲಿ ತಮ್ಮ ಜೀವನದಲ್ಲಿ ಆಧ್ಯಾತ್ಮ ಹಾಸುಹೊಕ್ಕಾಗಿರುವ ಬಗ್ಗೆ ಮಾತನಾಡಿದ ರಜನಿ "ಆಧ್ಯಾತ್ಮ ನನಗೆ ಬಹಳ ಬಲ ನೀಡುತ್ತದೆ. ಹೆಸರು, ಕೀರ್ತಿ ಮತ್ತು ಹಣಕ್ಕಾಗಿ ನಾನು ಆಧ್ಯಾತ್ಮದ ಮೊರೆ ಹೋಗುತ್ತೇನೆ ಮತ್ತು ಅದರಿಂದ ಶಕ್ತಿ ಪಡೆಯುತ್ತೇನೆ" ಎಂದಿದ್ದಾರೆ.
ತಮ್ಮ ಇಂದಿನ ಈ ಅತ್ಯುತ್ತಮ ಸ್ಥಿತಿಗೆ ಆಧ್ಯಾತ್ಮವೇ ಕಾರಣ ಎಂದಿರುವ ರಜನಿ ಮೊದಲಿಗೆ ತಾವು ಗುರು ಸಚ್ಚಿದಾನಂದ ಅವರನ್ನು ಅನುಸರಿಸುತ್ತಿದ್ದನ್ನು ಮತ್ತು ನಂತರ ರಾಮಕೃಷ್ಣ ಪರಮಹಂಸರ ಅನುಯಾಯಿ ಆಗಿದ್ದನ್ನು ಮೆಲುಕು ಹಾಕಿದ್ದಾರೆ. "ಆನು ಹಲವು ಗುರುಗಳನ್ನು ಅನುಸರಿಸುತ್ತೇನೆ. ರಾಘವೇಂದ್ರ ಸ್ವಾಮಿಗಳಿಂದ ನಾನು ಭಕ್ತಿ ಕಲಿತೆ ಮತ್ತು ರಮಣ ಮಹರ್ಷಿಗಳಿಂದ ಆತ್ಮಶೋಧನೆಯ ಪಾಠ ಕಲಿತೆ" ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Rajinikanthರಜನಿಕಾಂತ್ಆಧ್ಯಾತ್ಮspiritualityಪರಮಹಂಸ ಯೋಗಾನಂದParamahansa YogananadaRamana Maharshiರಮಣ ಮಹರ್ಷಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


