ಸಿನಿಮಾ ಸುದ್ದಿ

ಬಿಗ್ ಬಾಸ್ 10 ವಿಜೇತ ಮನ್ವೀರ್ ಗುರ್ಜರ್ ಮತ್ತು ಬೆಂಬಲಿಗರ ವಿರುದ್ಧ ಎಫ್ ಐಆರ್ ದಾಖಲು

ಸಂಚಾರಕ್ಕೆ ತಡೆಯೊಡ್ಡಿ ತೊಂದರೆಯುಂಟುಮಾಡಿದ ಸಂಬಂಧ ಹಿಂದಿಯ ಬಿಗ್ ಬಾಸ್...

ಬಿಗ್ ಬಾಸ್ 10 ವಿಜೇತ ಮನ್ವೀರ್ ಗುರ್ಜರ್ ಮತ್ತು ಬೆಂಬಲಿಗರ ವಿರುದ್ಧ ಎಫ್ ಐಆರ್ ದಾಖಲು
ಬಿಗ್ ಬಾಸ್ 10 ವಿಜೇತ ಮನ್ವೀರ್ ಗುರ್ಜರ್
Published On :
ನೊಯ್ಡಾ: ಸಂಚಾರಕ್ಕೆ ತಡೆಯೊಡ್ಡಿ ತೊಂದರೆಯುಂಟುಮಾಡಿದ ಸಂಬಂಧ ಹಿಂದಿಯ ಬಿಗ್ ಬಾಸ್ 10 ಸರಣಿಯ ವಿಜೇತ ಮನ್ವೀರ್ ಗುರ್ಜರ್ ಮತ್ತು ಅವರ ಬೆಂಬಲಿಗರ ವಿರುದ್ಧ ನೊಯ್ಡಾ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10ರಲ್ಲಿ ವಿಜೇತರಾದ ಮನ್ವೀರ್ನನ್ನು ಸ್ವಾಗತಿಸಲು ಅವರ ಅಭಿಮಾನಿಗಳು ಜನವರಿ 31ರಂದು ಅದ್ದೂರಿ ಸ್ವಾಗತ ಆಯೋಜಿಸಿದ್ದರು.ಕಾರ್ಯಕ್ರಮ ಆಯೋಜಕರು ನೊಯ್ಡಾದ 46 ವಲಯ ಉದ್ಯಾನವನದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆದಿದ್ದರು. ಆದರೆ ಅಂದು ಪರಿಸ್ಥಿತಿ ಕೈ ಮೀರಿ ಸ್ಥಳದ ಹೊರಗೆ ತೀವ್ರ ಸಂಚಾರ ದಟ್ಟಣೆಯುಂಟಾಯಿತು. ಗುರ್ಜರ್ ಅಭಿಮಾನಿಗಳು ಕಾರ್ಯಕ್ರಮ ನಡೆದ ಸ್ಥಳದ ಹೊರಗೆ ಗಂಟೆಗಟ್ಟಲೆ ಸಂಚಾರ ತಡೆದಿದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಯಿತು ಎಂದು ಸೆಕ್ಟರ್ 39ರ ಹಿರಿಯ ಅಧಿಕಾರಿ ಅಮರ್ ನಾಥ್ ಯಾದವ್ ತಿಳಿಸಿದ್ದಾರೆ. 
ಸಂಚಾರ ದಟ್ಟಣೆಯುಂಟಾಗಿ ಸಾರ್ವಜನಿಕರಿಗೆ ತೊಂದರೆಯುಂಟುಮಾಡಿದ ಹಿನ್ನೆಲೆಯಲ್ಲಿ ಮನ್ವೀರ್  ಮತ್ತು ಆತನ ಬೆಂಬಲಿಗರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.