ಕಮರ್ಷಿಯಲ್ ಚಿತ್ರಗಳಿಂದಲೇ ಚಿತ್ರೋದ್ಯಮ ಅಸ್ತಿತ್ವದಲ್ಲಿದೆ: ನಿರ್ದೇಶಕ ಹರ್ಷ
ಕಮರ್ಷಿಯಲ್ ಚಿತ್ರಗಳಿಂದಲೇ ಚಿತ್ರೋದ್ಯಮ ಅಸ್ತಿತ್ವದಲ್ಲಿದ್ದು, ನನ್ನನ್ನು ಯಾರಾದರೂ ಕಮರ್ಷಿಯಲ್ ಚಿತ್ರ ನಿರ್ದೇಶಕ ಎಂದರೆ ನನಗೇನೂ ಅನ್ನಿಸುವುದಿಲ್ಲ ಎಂದು ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಅಂಜನೀಪುತ್ರ ಚಿತ್ರದ ನಿರ್ದೇಶಕ ಹರ್ಷ ಹೇಳಿದ್ದಾರೆ.

Published On :
ಬೆಂಗಳೂರು: ಕಮರ್ಷಿಯಲ್ ಚಿತ್ರಗಳಿಂದಲೇ ಚಿತ್ರೋದ್ಯಮ ಅಸ್ತಿತ್ವದಲ್ಲಿದ್ದು, ನನ್ನನ್ನು ಯಾರಾದರೂ ಕಮರ್ಷಿಯಲ್ ಚಿತ್ರ ನಿರ್ದೇಶಕ ಎಂದರೆ ನನಗೇನೂ ಅನ್ನಿಸುವುದಿಲ್ಲ ಎಂದು ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಅಂಜನೀಪುತ್ರ ಚಿತ್ರದ ನಿರ್ದೇಶಕ ಹರ್ಷ ಹೇಳಿದ್ದಾರೆ.
ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಚಿತ್ರ
ಅಂಜನೀಪುತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಹರ್ಷ, ಜನ ನನ್ನನ್ನು ಕಮರ್ಷಿಯಲ್ ಚಿತ್ರ ನಿರ್ದೇಶಕ ಎಂದರೆ ನನಗೇನೂ ಅನ್ನಿಸುವುದಿಲ್ಲ. ಇಂದು ಕಮರ್ಶಿಯಲ್ ಚಿತ್ರಗಳಿಂದಲೇ ಚಿತ್ರೋದ್ಯಮ ಅಸ್ತಿತ್ವದಲ್ಲಿದೆ. ನನಗೆ ಕಲಾ ಚಿತ್ರಗಳೆಂದರೆ ಇಷ್ಟ. ಆದರೆ ಇಂದು ಜನ ಕಲಾ ಚಿತ್ರಗಳಲ್ಲೂ ಕಮರ್ಷಿಯಲ್ ಅಂಶಗಳನ್ನು ಇಷ್ಟಪಡುತ್ತಾರೆ. ಇದೇ ಕಾರಣಕ್ಕೆ ಇಂದು ಚಿತ್ರರಂಗದ ಬಹುತೇಕ ನಿರ್ದೇಶಕರು ಕಮರ್ಷಿಯಲ್ ಚಿತ್ರ ನಿರ್ದೇಶಕರಾಗಿದ್ದಾರೆ.
ಸಾಮಾನ್ಯವಾಗಿ ನಿರ್ದೇಶಕರು ಕೆಲಸ ಮಾಡುವಾಗ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡುತ್ತಾರೆ. ನಾವು ಯಾರಿಗಾಗಿ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ, ನಮ್ಮ ಗುರಿ ಯಾರು ಎಂಬುದನ್ನು ಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿರುತ್ತದೆ. ಚಿತ್ರದ ಯಾವ ಅಂಶ ಪ್ರೇಕ್ಷಕರನ್ನು ಸೆಳೆಯಬಹುದು. ಯಾವ ಅಂಶಕ್ಕೆ ಪ್ರೇಕ್ಷಕರು ಹೆಚ್ಚು ಗಮನ ನೀಡುತ್ತಾರೆ. ಇವೆಲ್ಲಾ ಪರಿಗಣನೆಗೆ ಬರುತ್ತದೆ ಎಂದು ಹರ್ಷ ಹೇಳಿದ್ದಾರೆ. ಇನ್ನು ನಟರ ಕುರಿತು ಮಾತನಾಡಿದ ನಿರ್ದೇಶಕ ಹರ್ಷ ನಾವು ನಿರ್ದೇಶನ ಮಾಡುವ ನಟನ ಬಾಡಿ ಲ್ಯಾಂಗ್ವೇಜ್ ಕೂಡ ಮುಖ್ಯವಾಗುತ್ತದೆ ಎಂದು ಹೇಳಿದರು.
ಇನ್ನು ಅಂಜನೀಪುತ್ರ ಚಿತ್ರದ ಕುರಿತು ಮಾತನಾಡಿದ ಹರ್ಷ, ನಾನು ಅಂಜನೀಪುತ್ರ ಚಿತ್ರವನ್ನು ಓರ್ವ ನಿರ್ದೇಶಕನಾಗಿ ಚಿತ್ರ ನಿರ್ಮಾಣ ಮಾಡಿಲ್ಲ..ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಾಗಿ ಚಿತ್ರ ನಿರ್ದೇಶನ ಮಾಡಿದ್ದೇನೆ. ಪ್ರತಿಯೊಬ್ಬ ನಿರ್ದೇಶಕನೂ ತನ್ನ ಚಿತ್ರದ ನಾಯಕನ ದೊಡ್ಡ ಅಭಿಮಾನಿಯಾಗಿರಬೇಕು. ಆಗ ಮಾತ್ರ ಉತ್ತಮ ಚಿತ್ರ ಹೊರಬರುತ್ತದೆ ಎಂದು ಹರ್ಷ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Puneeth RajkumarSandalwoodಸ್ಯಾಂಡಲ್ ವುಡ್Harshaಪುನೀತ್ ರಾಜ್ ಕುಮಾರ್Rashmika Mandannaರಶ್ಮಿಕಾ ಮಂದಣ್ಣAnjaniputra Movieಅಂಜನೀಪುತ್ರ. ಹರ್ಷಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


