ಸಿನಿಮಾ ಸುದ್ದಿ

ಹೊಂಬಾಳೆ ಫಿಲಮ್ಸ್ ಮುಂದಿನ ಚಿತ್ರದಲ್ಲಿ ಶ್ರೀಮುರಳಿ ನಾಯಕ

ಚೊಚ್ಚಲ ನಿರ್ದೇಶಕ ನರ್ತನ್ ನಿರ್ದೇಶನದ ಮಫ್ತಿ ಚಿತ್ರದ ಯಶಸ್ಸಿನ ನಂತರ ನಟ ಶ್ರೀಮುರಳಿ ಸತತ .....

ಹೊಂಬಾಳೆ ಫಿಲಮ್ಸ್ ಮುಂದಿನ ಚಿತ್ರದಲ್ಲಿ ಶ್ರೀಮುರಳಿ ನಾಯಕ
ಶ್ರೀಮುರಳಿ ಜೊತೆ ಚಿತ್ರತಂಡದ ಸೆಲ್ಫಿ
Published On :
ಬೆಂಗಳೂರು: ಚೊಚ್ಚಲ ನಿರ್ದೇಶಕ ನರ್ತನ್ ನಿರ್ದೇಶನದ ಮಫ್ತಿ ಚಿತ್ರದ ಯಶಸ್ಸಿನ ನಂತರ ನಟ ಶ್ರೀಮುರಳಿ ಸತತ ಮೂರು ಚಿತ್ರಗಳ ಹಿಟ್ ಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಈ ಹಿಂದೆ ಶ್ರೀಮುರಳಿಯವರ ಉಗ್ರಂ ಮತ್ತು ರಥಾವರ ಚಿತ್ರ ಕೂಡ ಗೆದ್ದಿದ್ದವು. ಹಾಗಾದರೆ ಇವರ ಮುಂದಿನ ಪ್ಲಾನ್ ಏನು? ಜಯಣ್ಣ ಕಂಬೈನ್ಸ್ ನಲ್ಲಿ ಎಂಬುದು ತಿಳಿದುಬಂದಿದೆ. 
 ಶ್ರೀಮುರಳಿ ಇತ್ತೀಚೆಗೆ ಕಾರ್ತಿಕ್ ಗೌಡ, ಯೋಗಿ  ಜಿ ರಾಜ್, ರಾಜನ್ ಅವರ ಜೊತೆಗೆ ತೆಗೆದ ಸೆಲ್ಫಿಯನ್ನು ಅಪ್ ಲೋಡ್ ಮಾಡಿದ್ದು ಅವರ ಜೊತೆ ಇನ್ನೊಂದು ಚಿತ್ರ ಮಾಡುತ್ತಾರೆಯೇ ಎಂಬ ಕುತೂಹಲ ಸಾಮಾಜಿಕ ತಾಣದಲ್ಲಿ ಅವರ ಅಭಿಮಾನಿಗಳಿಗೆ ಉಂಟಾಗಿತ್ತು. ಅದೀಗ ನಿಜವಾಗುವ ಸುದ್ದಿ ಬಂದಿದೆ.
ರಾಜಕುಮಾರ್ ನಂತಹ ಹಿಟ್ ಸಿನಿಮಾ ಕೊಟ್ಟ ಮತ್ತು ಯಶ್ ನಟನೆಯ ಕೆಜಿಎಫ್ ನಂತಹ ಬಿಗ್ ಬಜೆಟ್ ಚಿತ್ರ ನಿರ್ಮಿಸಿದ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್  ಕಾರ್ತಿಕ್ ಗೌಡ ನಿರ್ಮಾಣ ಹೌಸ್ ನಡಿ ಕೆಆರ್ ಜಿ ಸ್ಟುಡಿಯೊದಡಿ ಶ್ರೀಮುರಳಿ ನಟನೆಯ ಚಿತ್ರ ನಿರ್ಮಾಣವಾಗಲಿದೆ.
ಚಿತ್ರವನ್ನು ಯೋಗಿ ಜಿ ರಾಜ್ ನಿರ್ದೇಶಿಸಲಿದ್ದಾರೆ. ಚಿತ್ರದ ಸ್ಕ್ರಿಪ್ಟ್ ಆರಂಭವಾಗಿದ್ದು ತಂಡ ಈಗಾಗಲೇ ಕೆಲಸ ಆರಂಭಿಸಿದೆ. ಶೂಟಿಂಗ್ ಸ್ಥಳವನ್ನು ಆಯ್ಕೆ ಮಾಡಲು ಚಂಡ ಈಗಾಗಲೇ ಸ್ಥಳವನ್ನು ಹುಡುಕಿಕೊಂಡು ಹೊರಟಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.