ಡ್ರೀಮ್ ಗರ್ಲ್ ನಾಯಕನ ಚಿತ್ರಗಳು ಬ್ಯಾಕ್ ಟು ಬ್ಯಾಕ್ ತೆರೆಗೆ
ವಾಣಿಜ್ಯೋದ್ಯಮಿಯಾಗಿರುವ ರಘು ಭಟ್ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಂತೋಷವನ್ನು ಹುಡುಕುತ್ತಿದ್ದಾರೆ...

Published On :
ವಾಣಿಜ್ಯೋದ್ಯಮಿಯಾಗಿರುವ ರಘು ಭಟ್ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಂತೋಷವನ್ನು ಹುಡುಕುತ್ತಿದ್ದಾರೆ.
ಅಂತಹ ರಘು ಭಟ್ ಅಭಿನಯಿಸಿರುವ ಚಿತ್ರಗಳು ಬ್ಯಾಕ್ ಟು ಬ್ಯಾಕ್ ತೆರೆ ಕಾಣುತ್ತಿವೆ. ಕಳೆದ ವಾರ ರಘು ನಾಯಕನಾಗಿ ಅಭಿನಯಿಸಿದ್ದ ಡ್ರೀಮ್ ಗರ್ಲ್ ಚಿತ್ರ ತೆರೆಕಂಡಿತ್ತು. ಈ ವಾರ ಅವರ ಅನ್ವೇಷಿ ಚಿತ್ರ ತೆರೆ ಕಾಣುತ್ತಿವೆ. ಅನ್ವೇಷಿ ಚಿತ್ರ ಹಾರರ್ ಚಿತ್ರವಾಗಿದ್ದು ಇದು ವಿಭಿನ್ನ ಹಿನ್ನೆಲೆಯಿಂದ ಬರುವ ನಾಲ್ಕು ಯುವಕರ ಮೇಲೆ ಚಲಿಸುತ್ತದೆ ಎಂದು ರಘು ಭಟ್ ಹೇಳಿದ್ದಾರೆ.
ಇನ್ನು ರಘು ಭಟ್ ಪ್ರಮುಖ ಪಾತ್ರದಲ್ಲಿ ಅಭಿಯಿಸಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಆರ್ ಜೆ ರೋಹಿತ್ ನಟನೆಯ ಬಕಾಸುರ ಚಿತ್ರ ಸಹ ಬಿಡುಗಡೆಯ ಹಂತದಲ್ಲಿದೆ.
ಇನ್ನು ಇದೇ ವಾರ ತೆರೆಕಾಣಲಿರುವ ಅನ್ವೇಷಿ ಚಿತ್ರವನ್ನು ವೇಮಗಲ್ ಜಗನ್ನಾಥ್ ರಾವ್ ಅವರು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ತಿಲಕ್ ಶೇಖರ್, ಅವಿನಾಶ್, ವಿಕ್ರಮ್, ಸೂರಿ, ಶ್ರದ್ಧಾ ಶರ್ಮಾ, ನವ್ಯ ಸೇರಿದಂತೆ ಹಲವು ಕಲಾವಿದರು ಅಭಿನಯಸಿದ್ದಾರೆ. ಚಿತ್ರಕ್ಕೆ ವೈಯಲಿನ್ ಹೇಮಂತ್ ಸಂಗೀತ ಸಂಯೋಜಿಸಿದ್ದು ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


