ಶಶಾಂಕ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ಪುನೀತ್ ಗೆ 20ರ ಹುಡುಗನ ಲುಕ್!
ಅಂಜನಿಪುತ್ರದ ಬಿಡುಗಡೆಗಾಗಿ ಕಾಯುತ್ತಿರುವ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ....

Published On :
ಅಂಜನಿಪುತ್ರದ ಬಿಡುಗಡೆಗಾಗಿ ಕಾಯುತ್ತಿರುವ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಅವರ ಮುಂದಿನ ಚಿತ್ರ ಯಾವುದು ಅನ್ನುವ ಕುತೂಹಲದಲ್ಲಿದ್ದಾರೆ. ನಿರ್ದೇಶಕ ಶಶಾಂಕ್ ಜೊತೆಗಿನ ಇನ್ನೂ ಹೆಸರಿಡದ ಚಿತ್ರ ಪುನೀತ್ ಹೋಂ ಬ್ಯಾನರ್ ಪಿಆರ್ ಕೆ ಪ್ರೊಡಕ್ಷನ್ ನಡಿ ತಯಾರಾಗುತ್ತಿದೆ.
ಶಶಾಂಕ್ ಚಿತ್ರಕ್ಕೆ ವಿ.ಹರಿಕೃಷ್ಣ ಅವರು ಸಂಗೀತ ಒದಗಿಸುತ್ತಿದ್ದು ಇದು ಪುನೀತ್ ಅವರ ಜೊತೆಗೆ ಹರಿಕೃಷ್ಣ ಅವರ 11ನೇ ಚಿತ್ರವಾಗಿದೆ. ಹರಿಕೃಷ್ಣ ಅವರು ರಾಜಕುಮಾರ ಚಿತ್ರದಲ್ಲಿ ಬೊಂಬೆ ಹೇಳುತೈತೆಯಂತಹ ಹಾಡುಗಳನ್ನು ಕೊಟ್ಟವರು. ಇವರು ಪುನೀತ್ ಜೊತೆಗೆ ರಾಜ್-ದಿ ಶೋಮ್ಯಾನ್, ರಾಮ್, ಜಾಕಿ, ಹುಡುಗರು, ಪರಮಾತ್ಮ ಹಾಗೂ ಇತರ ಚಿತ್ರಗಳನ್ನು ಕೊಟ್ಟಿದ್ದಾರೆ.
ಮುಂದಿನ ಜನವರಿಯಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಚಿತ್ರದಲ್ಲಿ ನಿರ್ದೇಶಕ ಶಶಾಂಕ್ ಅನೇಕ ಆಶ್ಚರ್ಯಕರ ವಿಷಯಗಳನ್ನು ಚಿತ್ರಪ್ರೇಮಿಗಳಿಗೆ ತೋರಿಸಲಿದ್ದಾರೆ. ಇಲ್ಲಿ ಪುನೀತ್ ರಾಜ್ ಕುಮಾರ್ ಅವರ ನೋಟ ಸಂಪೂರ್ಣ ಬದಲಾಗಲಿದೆ. ಚಿತ್ರದಲ್ಲಿ ನೋಟಕ್ಕಾಗಿ ತಪ್ಪು ಮತ್ತು ಪ್ರಯೋಗಗಳನ್ನು ಮಾಡಲಿದ್ದಾರೆ. ಗಡ್ಡಬಿಟ್ಟು ಮತ್ತು ಗಡ್ಡ ತೆಗೆದು ನೋಡಿ ಪಾತ್ರ ಹೇಗೆ ಕಾಣಬಹುದು ಎಂದು ನೋಡಲಿದ್ದಾರೆ.

ಚಿತ್ರದ ಪಾತ್ರದ ಬಗ್ಗೆ ನಿರ್ದೇಶಕರು ಹೆಚ್ಚಿನ ವಿವರ ನೀಡಲು ಬಯಸುವುದಿಲ್ಲ. ಆದರೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, 20ರ ವಯೋಮಾನದ ಪಾತ್ರದಲ್ಲಿ ಪುನೀತ್ ಅವರು ನಟಿಸಲಿದ್ದು, 25ರ ಯುವಕನಾಗಿ ಪುನೀತ್ ಕಾಣಿಸಿಕೊಳ್ಳಲಿದ್ದಾರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


