ಪುನೀತ್ ನಟಿಸಿ, ನಿರ್ಮಿಸುತ್ತಿರುವ ಹೊಸ ಚಿತ್ರಕ್ಕೆ ಶಶಾಂಕ್ ನಿರ್ದೇಶನ!
ಪ್ರತಿಯೊಂದು ಸಿನಿಮಾದಲ್ಲಿ ಯಾವಾಗಲೂ ಉತ್ತಮವಾದದ್ದನ್ನೇ ನೀಡಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಯಸುತ್ತಿರುತ್ತಾರೆ. ಸದ್ಯ ...

Published On :
ಬೆಂಗಳೂರು: ಪ್ರತಿಯೊಂದು ಸಿನಿಮಾದಲ್ಲಿ ಯಾವಾಗಲೂ ಉತ್ತಮವಾದದ್ದನ್ನೇ ನೀಡಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಯಸುತ್ತಿರುತ್ತಾರೆ. ಸದ್ಯ ಪುನೀತ್ ಚಿತ್ತ ಸಿನಿಮಾ ನಿರ್ಮಾಣದತ್ತ ಹೊರಟಿದೆ.
ಹಲವು ವರ್ಷಗಳ ನಂತರ ಸಿನಿಮಾ ನಿರ್ಮಾಣದ ಆಳ ಆಗು ಹೋಗುಗಳನ್ನು ಅರ್ಥ ಮಾಡಿಕೊಂಡಿರುವ ಉತ್ತಮ ನಿರ್ದೇಶಕರ ಜೊತೆಗೊಡಿ ಯಶಸ್ವಿ ಸಿನಿಮಾ ನೀಡಲು ಮುಂದಾಗಿದ್ದಾರೆ.
ಪಿಆರ್ ಕೆ ಬ್ಯಾನರ್ ಅಡಿ ಸಿನಿಮಾ ನಿರ್ಮಾಣಕ್ಕೆ ಪುನೀತ್ ಸಿದ್ಧತೆ ನಡೆಸುತ್ತಿದ್ದಾರೆ, ಉತ್ತಮವಾದ ಕಥೆ ಹಾಗೂ ಸೂಕ್ತ ನಿರ್ದೇಶಕರಿಗಾಗಿ ಕಾಯುತ್ತಿದ್ದ ಪುನೀತ್ ಆಸೆ ಕೊನೆಗೂ ನೆರವೇರಿದೆ.
ಸಿಕ್ಸರ್, ಮುಂಗಾರು ಮಳೆ, ಮೊಗ್ಗಿನ ಮನಸು, ಕೃಷ್ಣನ್ ಲವ್ ಸ್ಟೋರಿ, ಬಚ್ಚನ್ ಮತ್ತು ಕೃಷ್ಣ ಲೀಲಾ ಹಾಗೂ ಮುಂಗಾರು ಮಳೆ-2 ನಂತ ಹಿಟ್ ಸಿನಿಮಾ ನೀಡಿದ ಶಶಾಂಕ್ ಪುನೀತ್ ನಿರ್ಮಾಣದ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.
ಪುನೀತ್ ನಟಿಸಿ ನಿರ್ಮಿಸುತ್ತಿರುವ ಸಿನಿಮಾಗೆ ಶಶಾಂಕ್ ತಾಲ್ಯ ನಿರ್ದೇಶನ ಮಾಡಲಿದ್ದಾರೆ. 2018 ರ ಮೊದಲ ಭಾಗದಲ್ಲಿ ಸಿನಿಮಾ ಸೆಟ್ಟೇರಲಿದೆ ಎಂದು ಮೂಲಗಳು ತಿಳಿಸಿವೆ.
ಪುನೀತ್ ಈ ಹಿಂದೆ ಬೇರೆ ನಾಯಕರು ನಟಿಸಿರುವ ಸಿನಿಮಾಗಳಿಗೆ ಬಂಡವಾಳ ಹೂಡಿದ್ದು ಮೊದಲ ಬಾರಿಗೆ ತಮ್ಮ ನಿರ್ಮಾಣದ ಸಿನಿಮಾದಲ್ಲಿ ಪುನೀತ್ ನಾಯಕರಾಗಿ ನಟಿಸುತ್ತಿದ್ದಾರೆ.
ಆದರೆ ಈ ಸಂಬಂಧ ನಿರ್ಮಾಪಕರು ಯಾವುದೇ ಮಾಹಿತಿ ನೀಡಿಲ್ಲ, ಸೂಕ್ತ ಸಮಯದಲ್ಲಿ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಸದ್ಯ ಪುನೀತ್ ಅಂಜನೀಪುತ್ರ ಸಿನಿಮಾ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಅದಾದ ನಂತರ ರಾಕ್ ಲೈನ್ ನಿರ್ಮಾಣದ ವೆಟ್ರಿಮಾರನ್ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಎಲ್ಲಾ ಶೂಟಿಂಗ್ ಮುಗಿದ ನಂತರ ಶಶಾಂಕ್ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


