ಸಿನಿಮಾ ಸುದ್ದಿ

ಡೂಡಲ್ ಮೂಲಕ ಡಾ.ರಾಜ್ 88ನೇ ಜನ್ಮದಿನಾಚರಣೆ ಮಾಡಿದ ಗೂಗಲ್!

ಭಾರತೀಯ ಚಿತ್ರರಂಗ ಕಂಡ ಮೇರು ನಟ ಕನ್ನಡದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ 88ನೇ ಜನ್ಮ ದಿನಾಚರಣೆ ನಿಮಿತ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಬಿಡಿಸುವ ಮೂಲಕ ಗೌರವ ಸೂಚಿಸಿದೆ.

ಡೂಡಲ್ ಮೂಲಕ ಡಾ.ರಾಜ್ 88ನೇ ಜನ್ಮದಿನಾಚರಣೆ ಮಾಡಿದ ಗೂಗಲ್!
ಡಾ.ರಾಜ್ ಕುಮಾರ್ ಗೆ ಗೂಗಲ್ ಡೂಡಲ್ ಗೌರವ
Published On :

ಬೆಂಗಳೂರು: ಭಾರತೀಯ ಚಿತ್ರರಂಗ ಕಂಡ ಮೇರು ನಟ ಕನ್ನಡದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ 88ನೇ ಜನ್ಮ ದಿನಾಚರಣೆ ನಿಮಿತ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಬಿಡಿಸುವ ಮೂಲಕ ಗೌರವ ಸೂಚಿಸಿದೆ.

ಏಪ್ರಿಲ್ 24 1929ರಲ್ಲಿ ಜನಿಸಿದ್ದ ಡಾ.ರಾಜ್ ಕುಮಾರ್ ಅವರು ತಮ್ಮ ಅಮೋಘ ಅಭಿನಯದ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನು ಸೆಳೆದಿದ್ದರು. ಇಂತಹ ಮೇರು ನಟನಿಗೆ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಕೆ  ಮಾಡಿದ್ದು, ತೈಲವರ್ಣದಲ್ಲಿ ರಚಿಸಿರುವಂತೆ ಕಾಣುವ ಡಾ. ರಾಜ್ ಕುಮಾರ್ ಅವರ ಭಾವಚಿತ್ರವನ್ನು ಡೂಡಲ್ ನಲ್ಲಿ ಉಪಯೋಗಿಸಲಾಗಿದೆ. ಚಿತ್ರ ಮಂದಿರದ ತೆರೆಯ ಮೇಲೆ ಡಾ. ರಾಜ್ ಕುಮಾರ್ ಅವರ ನಗುಮೊಗ  ಕಂಗೊಳಿಸುತ್ತಿರುವಂತೆ ಡೂಡಲ್ ರಚಿಸಲಾಗಿದ್ದು, ಅದನ್ನು ನೂರಾರು ಪ್ರೇಕ್ಷಕರು ನೋಡುತ್ತಿರುವಂತೆ ಬಿಂಬಿಸಲಾಗಿದೆ. ಡೂಡಲ್ ಹಿಂಭಾಗದಲ್ಲಿ ಕಂಡೂ ಕಾಣಿಸದಂತೆ ಗೂಗಲ್ ರಚನೆ ಮಾಡಲಾಗಿದೆ.

ಈ ಡೂಡಲ್ ಅನ್ನು ಕ್ಲಿಕ್ ಮಾಡಿದರೆ, ಡಾ. ರಾಜ್ ಕುಮಾರ್ ಅವರಿಗೆ ಹಾಗೂ ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಬಹುದಾದ ಲಿಂಕ್ ಗಳ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಮೊದಲ ಲಿಂಕ್ ಡಾ. ರಾಜ್ ಕುಮಾರ್  ಬಗೆಗಿನ ವಿಕಿಪೀಡಿಯಾ ಲಿಂಕ್ ಇದ್ದು, ಅವರ ಬಗೆಗಿಗನ ಇತರೆ ಲಿಂಕ್ ಗಳು ಕೂಡ ತೆರೆದುಕೊಳ್ಳುತ್ತವೆ.

ಏಪ್ರಿಲ್ 24ರಂದು ವರನಟ ಡಾ. ರಾಜ್ ಕುಮಾರ್ ಅವರ 88ನೇ ಹುಟ್ಟುಹಬ್ಬವನ್ನು ನಾಡಿನಾದ್ಯಂತ ಹಾಗೂ ವಿಶ್ವದೆಲ್ಲೆಡೆ ಇರುವ ಡಾ. ರಾಜ್ ಅಭಿಮಾನಿಗಳು ಆಚರಿಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.