ಸಿನಿಮಾ ಸುದ್ದಿ

ರಾಜಕುಮಾರ ಚಿತ್ರ ನೋಡಿ ಕಣ್ಣೀರಿಟ್ಟ ಶಿವಣ್ಣ

ಸ್ಯಾಂಡಲ್ವುಡ್ ರಾಜರತ್ನ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರವನ್ನು ವೀಕ್ಷಿಸಿದ ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್...

ರಾಜಕುಮಾರ ಚಿತ್ರ ನೋಡಿ ಕಣ್ಣೀರಿಟ್ಟ ಶಿವಣ್ಣ
ಶಿವಣ್ಣ
Published On :
ಬೆಂಗಳೂರು: ಸ್ಯಾಂಡಲ್ವುಡ್ ರಾಜರತ್ನ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರವನ್ನು ವೀಕ್ಷಿಸಿದ ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಕಣ್ಣೀರಿಟ್ಟಿದ್ದಾರೆ. 
ಮಾರ್ಚ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ರಾಜಕುಮಾರ ಚಿತ್ರವನ್ನು ಶಿವಣ್ಣ ಮತ್ತು ಕುಟುಂಬಸ್ಥರು ಚಿತ್ರವನ್ನು ತುಂಬಾನೆ ಮೆಚ್ಚಿಕೊಂಡಿದ್ದಾರೆ.
ಚಿತ್ರ ವೀಕ್ಷಿಸಿದ ಬಳಿಕ ಮಾತನಾಡಿದ ಶಿವರಾಜ್ ಕುಮಾರ್ ಅವರು, ಚಿತ್ರವನ್ನು ನೋಡುತ್ತಿದ್ದಾಗ ತಂದೆ ರಾಜಕುಮಾರ ಅವರೇ ತೆರೆಯ ಮೇಲೆ ಬಂದತಾಗುತ್ತಿತ್ತು. ತಂದೆ ಈಗ ನಮ್ಮ ಜತೆ ಯಾಕಿಲ್ಲ ಎಂದು ನೆನಪಿಸಿಕೊಂಡರೇ ನೋವಾಗುತ್ತಿದೆ ಎಂದು ಹೇಳಿದ್ದರು. 
ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಖ್ಯಾತಿಯ ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಜಕುಮಾರ ಚಿತ್ರ ಇಂದು ರಾಜ್ಯಾದ್ಯಂತ ಭರ್ಜರಿ ಯಶಸ್ಸು ಕಾಣುತ್ತಿದ್ದು ಹೊಂಬಾಳೆ ಫಿಲಂನ್ಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗಿದ್ದು ವಿಜಯ್ ಕಿರಗಂದೂರು ನಿರ್ಮಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.