ದೀಪಿಕಾ ಕಾಮಯ್ಯಗೆ ಕೂಡಿಬಂದ ಕಂಕಣ ಭಾಗ್ಯ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಚಿಂಗಾರಿ, ಜಗ್ಗು ದಾದಾದಲ್ಲಿ ಮಿಂಚಿ, ಬಿಗ್ ಬಾಸ್...

Published On :
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಚಿಂಗಾರಿ, ಜಗ್ಗು ದಾದಾದಲ್ಲಿ ಮಿಂಚಿ, ಬಿಗ್ ಬಾಸ್ ಮೂಲಕ ಸುದ್ದಿ ಮಾಡಿದ್ದ ನಟಿ ದೀಪಿಕಾ ಕಾಮಯ್ಯ ಶೀಘ್ರವೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ದೀಪಿಕಾ ಕಾಮಯ್ಯ ಕೈ ಹಿಡಿಯುತ್ತಿರುವ ಕುವರ ಸುಮನ್ ಗೋಪಿ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ಸುಮನ್ ಸದ್ಯ ಉದ್ಯೋಗ ನಿಮಿತ್ತ ಆಸ್ಟ್ರೇಲಿಯಾದಲ್ಲಿದ್ದಾರೆ.
''ಈ ವರ್ಷ ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ನಲ್ಲಿ ಮದುವೆ ನಡೆಯಲಿದ್ದು, ದಿನಾಂಕ ಇನ್ನೂ ನಿಗದಿಯಾಗಿಲ್ಲ. ವಿವಾಹ ಬೆಂಗಳೂರಿನ ಮಣಿಪಾಲ್ ಕೌಂಟಿ ರೆಸಾರ್ಟ್ ನಲ್ಲಿ ನಡೆಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಮದುವೆಗೆ ಚಿತ್ರರಂಗದಲ್ಲಿ ನನಗೆ ಗೊತ್ತಿರುವ ಎಲ್ಲರಿಗೂ ಆಹ್ವಾನ ನೀಡುತ್ತೇನೆ'' ಎನ್ನುತ್ತಾರೆ ದೀಪಿಕಾ.
ಮೂಲತಃ ಕೊಡಗಿನವರಾದ ದೀಪಿಕಾರದ್ದು ಲವ್ ಮ್ಯಾರೇಜ್ ಅಲ್ಲವಂತೆ. ದೀಪಿಕಾ ತಂದೆಯ ಸ್ನೇಹಿತರ ಪುತ್ರ ಸುಮನ್. ದೊಡ್ಡವರೇ ಮಾತುಕತೆಯಾಡಿ ನಿಶ್ಚಯಿಸಿದ ಮದುವೆಯಿದು.
ಮದುವೆ ನಂತರ ಆಸ್ಟ್ರೇಲಿಯಾಕ್ಕೆ ತೆರಳಲಿರುವ ದೀಪಿಕಾ, ನಂತರ ಕೂಡ ಅಭಿನಯಿಸುತ್ತೀರಾ ಎಂದು ಕೇಳಿದ್ದಕ್ಕೆ , ಬಣ್ಣದ ನಂಟು ಅಷ್ಟು ಬೇಗನೆ ಹೋಗುವುದಿಲ್ಲ, ಒಳ್ಳೆಯ ಚಿತ್ರ, ಅಭಿನಯಕ್ಕೆ ಅವಕಾಶ ಸಿಕ್ಕಿದರೆ ನೋಡೋಣ, ಸುಮನ್ ಅವರ ಕಡೆಯಿಂದ ನನಗೆ ಬೆಂಬಲವಿದೆ ಎನ್ನುತ್ತಾರೆ.
ದೀಪಿಕಾ ಕಾಮಯ್ಯ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದ ನಂತರ 2009ರ ಫೆಮಿನಾ ಮಿಸ್ ಇಂಡಿಯಾ ಸೌತ್ ಸ್ಪರ್ಧೆಯಲ್ಲಿ ಭಾಗವಹಿಸಿ ಅಂತಿಮ ಹಂತ ಪ್ರವೇಶಿಸಿದ್ದರು. 11ನೇ ತರಗತಿಯಲ್ಲಿದ್ದಾಗ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಆಟೋ ರಾಜ, ಚಿಂಗಾರಿ, ನೀನೆ ಬರಿ ನೀನೆ, ಜಗ್ಗು ದಾದಾ, ತಮಿಳಿ ನಲ್ಲಿ ಎರಡು ಚಿತ್ರಗಳು ಮತ್ತು ಫಟಾ ಪೋಸ್ಟರ್ ನಿಕ್ಲಾ ಹೀರೋ ಎಂಬ ಹಿಂದಿ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನ 2ನೇ ಆವೃತ್ತಿಯಲ್ಲಿ ಸ್ಪರ್ಧೆಯ ಅಂತಿಮ ಹಂತ ಪ್ರವೇಶಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


