ಸಿನಿಮಾ ಸುದ್ದಿ

ಧನುಷ್ ನಟನೆಯ 'ತೊಡರಿ' ಕರ್ನಾಟಕದಲ್ಲಿ ಬಿಡುಗಡೆ ಇಲ್ಲ!

ಚಲಿಸುವ ರೈಲಿನಲ್ಲಿ ಇಡೀ ಸಿನೆಮಾ ಚಿತ್ರಣವಾಗಿರುವ ಧನುಷ್ ನಟನೆಯ ತಮಿಳು ಸಿನೆಮಾ 'ತೊಡರಿ' ಕರ್ನಾಟಕವನ್ನು ಹೊರತುಪಡಿಸಿ ಬೇರೆಲ್ಲ ಬಿಡುಗಡೆಯಾಗಲಿದೆ. ಕಾವೇರಿ ವಿವಾದ ತೀವ್ರವಾಗಿರುವ

ಧನುಷ್ ನಟನೆಯ 'ತೊಡರಿ' ಕರ್ನಾಟಕದಲ್ಲಿ ಬಿಡುಗಡೆ ಇಲ್ಲ!
'ತೊಡರಿ' ಸಿನೆಮಾದ ಸ್ಟಿಲ್
Published On :
ಚೆನ್ನೈ: ಚಲಿಸುವ ರೈಲಿನಲ್ಲಿ ಇಡೀ ಸಿನೆಮಾ ಚಿತ್ರಣವಾಗಿರುವ ಧನುಷ್ ನಟನೆಯ ತಮಿಳು ಸಿನೆಮಾ 'ತೊಡರಿ' ಕರ್ನಾಟಕವನ್ನು ಹೊರತುಪಡಿಸಿ ಬೇರೆಲ್ಲ ಬಿಡುಗಡೆಯಾಗಲಿದೆ. ಕಾವೇರಿ ವಿವಾದ ತೀವ್ರವಾಗಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 
ಭಾರತದಲ್ಲಿ ಉಳಿದೆಡೆ ಗುರುವಾರ ಚಿತ್ರಮಂದಿರಗಳಲ್ಲಿ 'ತೊಡರಿ' ಬಿಡುಗಡೆಯಾಗಲಿದೆ. 
"ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಇರುವ ಕಾವೇರಿ ವಿವಾದ 'ತೊಡರಿ' ಬಿಡುಗಡೆಗೆ ಅಡ್ಡಿಪಡಿಸಿದೆ. ಆದುದರಿಂದ ಇದು ನಮಗೆ ನಷ್ಟ ತರವುದಿದ್ದರು, ಸದ್ಯಕ್ಕೆ ಕರ್ನಾಟಕದಲ್ಲಿ ಬಿಡುಗಡೆ ಮಾಡದಿರಲು ನಿರ್ಧರಿಸಿದ್ದೇವೆ" ಎಂದು ಕರ್ನಾಟಕ ಭಾಗದ ಈ ಸಿನೆಮಾ ವಿತರಕ ಮಂಜುನಾಥ್ ಹೇಳಿದ್ದಾರೆ. 
ಪ್ರಭು ಸೋಲೋಮಾನ್ ನಿರ್ದೇಶನದ ಈ ಚಿತ್ರದಲ್ಲಿ ಧನುಷ್ ರೈಲ್ವೆ ಪ್ಯಾಂಟ್ರಿ ಕೆಲಸಗಾರನಾಗಿ ಕಾಣಿಸಿಕೊಂಡರೆ ಕೀರ್ತಿ ಸುರೇಶ ಮೇಕ್ ಅಪ್ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. 
ಚೆನ್ನೈ-ದೆಹಲಿ ನಡುವಿನ ರೈಲಿನಲ್ಲಿ ಈ ಸಿನೆಮಾ ಚಿತ್ರೀಕರಣಗೊಂಡಿದ್ದು, ಚಲಿಸುವ ರೈಲಿನ ಮೇಲೆ ಆಕ್ಷನ್ ಚಿತ್ರಗಳನ್ನು ಚಿತ್ರೀಕರಿಸಲಾಗಿದೆ. 
ಕಳೆದ ತಿಂಗಳು ವಿಕ್ರಮ್ ನಟನೆಯ 'ಇರುಮುಗನ್' ಕೂಡ ಕರ್ನಾಟಕದಲ್ಲಿ ಬಿಡುಗಡೆಯಾಗಿರಲಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.