ಕಾವೇರಿ ಮೊದಲು, ಹುಟ್ಟುಹಬ್ಬ ಮುಖ್ಯವಲ್ಲ: ಉಪೇಂದ್ರ
ಸೆಪ್ಟಂಬರ್ 18 ರಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ. ಹುಟ್ಟು ಹಬ್ಬ ಆಚರಿಸಿಕೊಳ್ಳಲು ಇದು ಸಮಯವಲ್ಲ ಎಂದು ನಟ ನಿರ್ದೇಶಕ

ಬೆಂಗಳೂರು: ಸೆಪ್ಟಂಬರ್ 18 ರಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ. ಕಾವೇರಿ ನದಿ ನೀರು ವಿವಾದದಿಂದಾಗಿ ಎರಡು ರಾಜ್ಯಗಳಲ್ಲಿ ಹೋರಾಟ ನಡೆಯುತ್ತಿದೆ. ಹೀಗಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಇದು ಸಮಯವಲ್ಲ , ಕಾವೇರಿ ಮುಖ್ಯ ಎಂದು ನಟ ನಿರ್ದೇಶಕ ಉಪೇಂದ್ರ ಅಭಿಪ್ರಾಯ ಪಟ್ಟಿದ್ದಾರೆ. ಈ ಸಂಬಂಧ ಅವರು ಸಿಟಿ ಎಕ್ಸ್ ಪ್ರೆಸ್ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ತಮಿಳು ನಾಡು ಮತ್ತು ಕರ್ನಾಟಕದ ನಡುವಿನ ಕಾವೇರಿ ನದಿ ನೀರು ಹಂಚಿಕೆಗೆ ಶಾಶ್ವತವಾದ ಪರಿಹಾರ ದೊರೆತರೇ ನನಗೆ ಮತ್ತು ಕರ್ನಾಟಕ ಜನತೆಗೆ ಬಹುದೊಡ್ಡ ಉಡುಗೊರೆ ಸಿಕ್ಕಂತೆ ಎಂದು ಹೇಳಿದ್ದಾರೆ.
ನಾನು ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದೆ. ಆದರೆ ಎಲ್ಲಾ ಅಭಿಮಾನಿಗಳನ್ನು ಭೇಟಿ ಮಾಡಲು ಇದೊಂದು ಅವಕಾಶ. ಅವರು ಹುಟ್ಟುಹಬ್ಬ ಆಚರಿಸುವುದನ್ನು ನಾನು ಬೇಡ ಎಂದು ತಿರಸ್ಕರಿಸಲಾರೆ, ಹೀಗಾಗಿ ಹೆಚ್ಚಿನ ಆಡಂರಭವಿಲ್ಲದೇ ಹುಟ್ಟುಹಬ್ಬ ಆಚರಿಸಬೇಕೆಂದು ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಪರಸ್ಪರ ನಿಂದಿಸುವ ಬದಲು, ಇರುವ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳಬೇಕೆಂದು ಉಪೇಂದ್ರ ಎರಡು ರಾಜ್ಯಗಳಿಗೂ ಸಲಹೆ ನೀಡಿದ್ದಾರೆ. ಎರಡು ರಾಜ್ಯಗಳು ಕೂತು ಮಾತುಕತೆ ನಡೆಸಿದರೇ ಸಮಸ್ಯೆ ಬಗೆಹರಿಸಿಕೊಳ್ಳಬಹುದು, ಕಾವೇರಿ ವಿವಾದಕ್ಕೆ ಹೋರಾಟ ಮಾತ್ರವೇ ಪರಿಹಾರವಲ್ಲ ಎಂದು ಹೇಳಿದ್ದಾರೆ. ನಾಯಕರು ಸರಿಯಾದ ನಿರ್ಣಯ ಕೈಗೊಂಡಿದ್ದರೇ ಸಮಸ್ಯೆ 15 ವರ್ಷಗಳ ಕಾಲ ಮುಂದುವರಿಯುತ್ತಿರಲಿಲ್ಲ ಎಂದು ಉಪೇಂದ್ರ ತಿಳಿಸಿದ್ದಾರೆ.
ಕಾದಾಟ ನಡೆಸಿದರೇ ನೀರು ಹರಿಯುವುದಿಲ್ಲ, ರಕ್ತ ಹರಿಯುತ್ತದೆ. ಪ್ರತಿಯೊಬ್ಬರಿಗೂ ಗೊತ್ತು ಇದಕ್ಕೆ ಪರ್ಯಾಯ ಮಾರ್ಗವಿದೆ ಎಂದು, ಕೇಂದ್ರ ಸರ್ಕಾರದಿಂದ ಸಹಾಯ ಪಡೆಯಲು ರಾಜ್ಯಕ್ಕೆ ಇದು ಸುಸಮಯ.ನಾವು ಹಲವು ಬಹುರಾಷ್ಟ್ರೀಯ ಕಂಪನಿಗಳನ್ನು ಹೊಂದಿದ್ದೇವೆ. ನಾವು ಸಹಾಯ ಕೇಳಿದರೇ ಆ ಕಂಪನಿಗಳು ಇಲ್ಲ ಎನ್ನುವುದಿಲ್ಲ, ಅಗತ್ಯ ಬಿದ್ದರೆ ಸರ್ಕಾರಕ್ಕೆ ಯಾವಾಗ ಬೇಕಾದರೂ ಸಹಾಯ ಮಾಡುವ ಸಾರ್ವಜನಿಕರು ಇದ್ದಾರೆ ಎಂದು ಹೇಳಿದ್ದಾರೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡರೇ ತಮಿಳು ನಾಡು ಮತ್ತು ಕರ್ನಾಟಕ ಜನತೆಗೆ ದೊಡ್ಡ ಉಡುಗೊರೆ ಸಿಕ್ಕಿದಂತಾಗುತ್ತದೆ ಎಂದು ಉಪೇಂದ್ರ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


