ವಿದೇಶಿಗರ ಬಾಯಲ್ಲಿ ಭಾರತ 'ಅತ್ಯಾಚಾರಿಗಳ ಭೂಮಿ'ಯೆಂದು ಕೇಳಲು ಬೇಸರವಾಗುತ್ತದೆ: ಬಿಗ್ ಬಿ
ವಿದೇಶಕ್ಕೆ ಹೋದಾಗ ಅಲ್ಲಿನ ಜನರು ಭಾರತವನ್ನು ಅತ್ಯಾಚಾರಿಗಳ ಭೂಮಿಯೆಂದು ಕರೆಯುವುದನ್ನು ಕೇಳಿದರೆ ಬಹಳ ಬೇಸರವಾಗುತ್ತದೆ ಎಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್...

ನವದೆಹಲಿ: ವಿದೇಶಕ್ಕೆ ಹೋದಾಗ ಅಲ್ಲಿನ ಜನರು ಭಾರತವನ್ನು ಅತ್ಯಾಚಾರಿಗಳ ಭೂಮಿಯೆಂದು ಕರೆಯುವುದನ್ನು ಕೇಳಿದರೆ ಬಹಳ ಬೇಸರವಾಗುತ್ತದೆ ಎಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಹೇಳಿದ್ದಾರೆ.
ನಿನ್ನೆ ಬಿಡುಗಡೆಗೊಂಡಿರುವ ಪಿಕ್ ಚಿತ್ರ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಮಾಡಿರುವ, ಭಾರತವನ್ನು ವಿಶ್ವದ ಮೊದಲ ರಾಷ್ಟ್ರವಾಗಿಸಲು ಭಾರತೀಯರು ದೇಶಕ್ಕಾಗಿ ಒಟ್ಟಿಗೆ ಕೈಸೇರಿಸಿ ದುಡಿಯಬೇಕಿದೆ. ವಿದೇಶಕ್ಕೆ ಹೋದಾಗ ಅಲ್ಲಿನ ಜನರು ಭಾರತವನ್ನು ಅತ್ಯಾಚಾರಿಗಳ ಭೂಮಿ ಎಂದು ಕರೆಯುವುದನ್ನು ಕೇಳಿದರೆ ಬೇಸರವಾಗುತ್ತದೆ ಎಂದು ಹೇಳಿದ್ದಾರೆ.
ವಿದೇಶಕ್ಕೆ ಹೋದಾಗ ಅಲ್ಲಿನ ಜನರು ನೀವು ಭಾರತೀಯರೇ? ಅತ್ಯಾಚಾರಿಗಳ ಭೂಮಿಯವರೇ ಎಂದು ಪ್ರಶ್ನೆ ಕೇಳುತ್ತಾರೆ. ಈ ರೀತಿಯ ಮನಸ್ಥಿತಿಯನ್ನು ಹೋಗಲಾಡಿಸಬೇಕಿದೆ. ನಮ್ಮ ದೇಶವನ್ನು ಇತರರು ವಿಶ್ವದ ಮೂರನೇ ರಾಷ್ಟ್ರ ಹಾಗೂ ಅಭಿವೃದ್ಧಿಗೊಳ್ಳುತ್ತಿರುವ ರಾಷ್ಟ್ರವೆಂದು ಕೂಗಿದರೆ ನನಗೆ ಇಷ್ಟವಾಗುವುದಿಲ್ಲ.
ಭಾರತವನ್ನು ವಿಶ್ವದ ಮೊದಲ ರಾಷ್ಟ್ರವಾಗಿ ನಿರ್ಮಾಣ ಮಾಡಲು ನಾವೆಲ್ಲರೂ ಒಟ್ಟಿಗೆ ದುಡಿಯಬೇಕಿದೆ. ಭಾರತವನ್ನು ಅಭಿವೃದ್ಧಿಗೊಳ್ಳುತ್ತಿರುವ ರಾಷ್ಟ್ರವಲ್ಲದೆ, ಅಭಿವೃದ್ಧಿ ರಾಷ್ಟ್ರವಾಗಿ ನಿರ್ಮಾಣ ಬೇಕಿದೆ ಎಂದು ಹೇಳಿದ್ದಾರೆ.
ದೆಹಲಿಗೆ ಹೋಲಿಕೆ ಮಾಡಿದರೆ ಮುಂಬೈ ಸುರಕ್ಷಿತ ತಾಣವೆಂಬ ಮಾತುಗಳನ್ನು ಕೇಳಬಾರದು. ದೇಶದಲ್ಲಿರುವ ಪ್ರತೀ ಭಾಗವೂ ಮಹಿಳೆಯರಿಗೆ ರಕ್ಷಣೆಯಾಗಬೇಕು. ದೆಹಲಿಯಲ್ಲಿ ಒಂದು ಘಟನೆ ನಡೆದರೆ ಅದು ದೇಶಕ್ಕೆ ಕಪ್ಪು ಚುಕ್ಕೆಯಾಗುತ್ತದೆ. ದೇಶದ ಜನರೆಲ್ಲರೂ ಚಿಂತಿತರಾಗುತ್ತದೆ. ಅತ್ಯಾಚಾರವೆಂಬ ಘಟನೆ ಇಡೀ ದೇಶಕ್ಕೆ ಸಂಬಂಧಿಸಿದ್ದು, ಕೇವಲ ಆಯಾ ಪ್ರದೇಶಕ್ಕೆ ಸೀಮಿತವಾದದ್ದಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


