ದೇವಾಲಯಗಳಿಗೆಹೋಗುವುದರಿಂದ ನಾನು ಮುಸ್ಲಿಮೇತರಳಾಗುವುದಿಲ್ಲ: ನಟಿ ಸೋಹಾ ಅಲಿ ಖಾನ್
ಅಮೃತ್ ಸರದ ಗೋಲ್ಡನ್ ಟೆಂಪಲ್ ಹಾಗೂ ಗಣಪತಿ ಪೆಂಡಾಲ್ ಗೆ ಭೇಟಿ ನೀಡಿದ್ದಕ್ಕೆ ವ್ಯಕ್ತವಾದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ನಟಿ ಸೋಹಾ ಅಲಿ ಖಾನ್, ದೇವಾಲಯಗಳಿಗೆ ಭೇಟಿ ನೀಡುವುದರಿಂದ...

ಮುಂಬೈ: ಅಮೃತ್ ಸರದ ಗೋಲ್ಡನ್ ಟೆಂಪಲ್ ಹಾಗೂ ಗಣಪತಿ ಪೆಂಡಾಲ್ ಗೆ ಭೇಟಿ ನೀಡಿದ್ದಕ್ಕೆ ವ್ಯಕ್ತವಾದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ನಟಿ ಸೋಹಾ ಅಲಿ ಖಾನ್, ದೇವಾಲಯಗಳಿಗೆ ಭೇಟಿ ನೀಡುವುದರಿಂದ ನಾನು ಮುಸ್ಲಿಮೇತರಳಾಗುವುದಿಲ್ಲ ಎಂದು ಹೇಳಿದ್ದಾರೆ.
31st ಅಕ್ಟೊಬರ್ ಸಿನಿಮಾ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ನಟಿ ಸೋಹಾ ಅಲಿ ಖಾನ್, ಸಿಖ್ಖರ ಶ್ರದ್ಧಾ ಕೇಂದ್ರವಾಗಿರುವ ಅಮೃತ್ ಸರದ ಗೋಲ್ಡನ್ ಟೆಂಪಲ್ ಹಾಗೂ ಗಣಪತಿ ಪೆಂಡಾಲ್ ಗೆ ಭೇಟಿ ನೀಡಿದ್ದರು. ಈ ಬೆಳವಣಿಗೆ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಹಲವರು ಸೋಹಾ ಅಲಿ ಖಾನ್ ಅವರ ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೋಹಾ ಅಲಿ ಖಾನ್, ಭಾರತ ಜಾತ್ಯಾತೀತ ದೇಶವಾಗಿದೆ. ಇಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ನಾನು ಮುಸ್ಲಿಮೇತರಳಾಗುವುದಿಲ್ಲ ಎಂದು ಹೇಳಿದ್ದಾರೆ.
ನಾನು ದೇವಸ್ಥಾನಕ್ಕೆ ಹೋಗುವುದು, ನಮಾಜ್ ಮಾಡುವುದು, ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸುವುದು ಸ್ವಮತ್ತೊಬ್ಬರ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ಸೋಹಾ ಪ್ರಶ್ನಿಸಿದ್ದಾರೆ. ನನ್ನ ಮೇಲೆ ಯಾರೂ ಒಡೆತನ ಹೊಂದಿಲ್ಲ, ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು ಎಲ್ಲಾ ಧರ್ಮಗಳನ್ನೂ, ಮತ್ತೊಬ್ಬರ ಆಯ್ಕೆಗಳನ್ನು ಗೌರವಿಸಬೇಕು ಎಂದು ಸೋಹಾ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


