ಸಿನಿಮಾ ಸುದ್ದಿ

ವಿದ್ಯುತ್ ಜಂವಾಲ್ ಮುಂದಿನ ಪೀಳಿಗೆಯ ಆಕ್ಷನ್ ಹೀರೊ: ಊರ್ವಶಿ ರೌಟೇಲಾ

ತಮ್ಮ ಸಹನಟ ವಿದ್ಯುತ್ ಜಂವಾಲ್ ಅವರು ಮುಂದಿನ ಪೀಳಿಗೆಯ ಆಕ್ಷನ್ ಹೀರೊ ಎಂದು ಬಾಲಿವುಡ್ ನಟಿ ಮತ್ತು 2012 ರ ಮಿಸ್ ಯೂನಿವರ್ಸ್ ಇಂಡಿಯಾ ಊರ್ವಶಿ ರೌಟೇಲಾ ಮನಸಾರೆ ಪ್ರಶಂಸಿಸಿದ್ದಾರೆ.

ವಿದ್ಯುತ್ ಜಂವಾಲ್ ಮುಂದಿನ ಪೀಳಿಗೆಯ ಆಕ್ಷನ್ ಹೀರೊ: ಊರ್ವಶಿ ರೌಟೇಲಾ
ಬಾಲಿವುಡ್ ನಟ ವಿದ್ಯುತ್ ಜಂವಾಲ್
Published On :
ಮುಂಬೈ: ತಮ್ಮ ಸಹನಟ ವಿದ್ಯುತ್ ಜಂವಾಲ್ ಅವರು ಮುಂದಿನ ಪೀಳಿಗೆಯ ಆಕ್ಷನ್ ಹೀರೊ ಎಂದು ಬಾಲಿವುಡ್ ನಟಿ ಮತ್ತು 2012 ರ ಮಿಸ್ ಯೂನಿವರ್ಸ್ ಇಂಡಿಯಾ ಊರ್ವಶಿ ರೌಟೇಲಾ ಮನಸಾರೆ ಪ್ರಶಂಸಿಸಿದ್ದಾರೆ. 
"ನನ್ನ ಸಹನಟರಲ್ಲಿ ಇಲ್ಲಿಯವರೆಗೂ ವಿದ್ಯುತ್ ಅವರೇ ಉತ್ತಮ. ಅವರು ಅತ್ಯುತ್ತಮ ನಟ ಮತ್ತು ಸದಾ ಬೆಂಬಲಿಸುವ ವ್ಯಕ್ತಿ. ಬಹಳ ವೃತ್ತಿಪರನಾಗಿರುವ ಮತ್ತು ಶ್ರಮ ಜೀವಿ ವಿದ್ಯುತ್ ಮುಂದಿನ ಪೀಳಿಗೆಯ ಆಕ್ಷನ್ ಹೀರೊ ಎಂದೆನಿಸುತ್ತದೆ ನನಗೆ" ಎಂದು 'ಗಲ್ ಬನ್ ಗಯಿ' ವಿಡಿಯೋ ಆಲ್ಬಮ್ ಬಿಡುಗಡೆಯ ವೇಳೆ ಬುಧವಾರ ಹೇಳಿದ್ದಾರೆ. 
ಸುಖಬೀರ್ ಅವರ ಜಪ್ರಿಯ ಹಳೆಯ ಹಾಡೊಂದನ್ನು ಮತ್ತೆ ಚಿತ್ರೀಕರಿಸುವ ಆವೃತ್ತಿ 'ಗಲ್ ಬನ್ ಗಯಿ'. ಇದರಲ್ಲಿ ವಿದ್ಯುತ್ ಮತ್ತು ಊರ್ವಶಿ ಕಾಣಿಸಿಕೊಂಡಿದ್ದು, ಪಂಜಾಬಿ ರ್ಯಾಪ್ ಗಾಯಕ ಯೋ ಯೋ ಹನಿ ಸಿಂಗ್ ಹಾಡಿದ್ದಾರೆ. ಮೀಟ್ ಬ್ರೋಸ್ ಈ ಹಾಡಿಗೆ ಸಂಗೀತ ನೀಡಿದ್ದಾರೆ.
ಊರ್ವಶಿ ಅವರು ಕೊನೆಯ ಬಾರಿಗೆ ಇಂದ್ರ ಕುಮಾರ್ ಅವರ 'ಗ್ರೇಟ್ ಗ್ರಾಂಡ್ ಮಸ್ತಿ'ಯಲ್ಲಿ ಕಾಣಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿರುವ ಈ ಹಾಡನ್ನು ನೀವಿಲ್ಲಿ ಕೇಳಬಹುದು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.