ಸಿನಿಮಾ ಸುದ್ದಿ

ಮಂಡ್ಯದಲ್ಲಿ ಜಾಗ್ವಾರ್ ಚಿತ್ರದ ಅದ್ಧೂರಿ ಆಡಿಯೋ ಬಿಡುಗಡೆ

ಚೆನ್ನಾಂಬಿಕ ಫಿಲಂಸ್ ಲಾಂಛನದಲ್ಲಿ ತಯಾರಾಗಿರುವ ಎಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅಭಿನಯದ ಜಾಗ್ವಾರ್ ಚಿತ್ರದ ಆಡಿಯೋ ಲಾಂಚ್...

ಮಂಡ್ಯದಲ್ಲಿ ಜಾಗ್ವಾರ್ ಚಿತ್ರದ ಅದ್ಧೂರಿ ಆಡಿಯೋ ಬಿಡುಗಡೆ
ಜಾಗ್ವಾರ್
Published On :
ಮಂಡ್ಯ: ಚೆನ್ನಾಂಬಿಕ ಫಿಲಂಸ್ ಲಾಂಛನದಲ್ಲಿ ತಯಾರಾಗಿರುವ ಎಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅಭಿನಯದ ಜಾಗ್ವಾರ್ ಚಿತ್ರದ ಆಡಿಯೋ ಲಾಂಚ್ ಮಂಡ್ಯದಲ್ಲಿ ಅದ್ಧೂರಿಯಾಗಿ ನೆರವೇರಿತು. 
ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಾಕಲಾಗಿದ್ದ ಬೃಹತ್ ವೇದಿಕೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸೇರಿದಂತೆ ರಾಜಕೀಯ ಮುಖಂಡರು, ಸ್ಯಾಂಡಲ್ ವುಡ್ ತಾರೆಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಸಮಾಕ್ಷಮದಲ್ಲಿ ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ಅದ್ಧೂರಿಯಾಗಿ ನಡೆಯಿತು. 
ಈ ವೇಳೆ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಸ್ಯಾಂಡಲ್ ವುಡ್ ತಮ್ಮ ಪುತ್ರ ನಿಖಿಲ್ ಪಾದಾರ್ಪಣೆ ಮಾಡುತ್ತಿದ್ದು ಜಾಗ್ವಾರ್ ಸಿನಿಮಾವನ್ನು ನೋಡಿ ಅಭಿಮಾನಿಗಳು ನಿಖಿಲ್ ಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. 
ಜಾಗ್ವಾರ್ ಚಿತ್ರವನ್ನು ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಶಿಷ್ಯ ಎ. ಮಹದೇವ್ ನಿರ್ದೇಶಿದ್ದು, ಸ್ಯಾಂಡಲ್ ವುಡ್ ಬಹು ನಿರೀಕ್ಷಿತ ಚಿತ್ರವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.