ಸಿನಿಮಾ ಸುದ್ದಿ

'ಸಾಹೇಬ'ನ ಜೊತೆಗೆ ನಭಾ ನಟೇಶ್ ಫ್ಲಾಶ್ ಬ್ಯಾಕ್

ರವಿಚಂದ್ರನ್ ಪುತ್ರ ಮನೋರಂಜನ್ ಪಾದಾರ್ಪಣೆ ಮಾಡುತ್ತಿರುವ, 'ಕಂಠಿ' ಖ್ಯಾತಿಯ ಭರತ್ ನಿರ್ದೇಶನದ 'ಸಾಹೇಬ' ಚಿತ್ರದ ಮೇಲೆ ಸಿನಿರಸಿಕರಿಗೆ ಸಹಜ ಕುತೂಹಲ ಮತ್ತು ನಿರೀಕ್ಷೆ ಮೂಡಿದೆ.

'ಸಾಹೇಬ'ನ ಜೊತೆಗೆ ನಭಾ ನಟೇಶ್ ಫ್ಲಾಶ್ ಬ್ಯಾಕ್
ನಭಾ ನಟೇಶ್
Published On :
ಬೆಂಗಳೂರು: ರವಿಚಂದ್ರನ್ ಪುತ್ರ ಮನೋರಂಜನ್ ಪಾದಾರ್ಪಣೆ ಮಾಡುತ್ತಿರುವ, 'ಕಂಠಿ' ಖ್ಯಾತಿಯ ಭರತ್ ನಿರ್ದೇಶನದ 'ಸಾಹೇಬ' ಚಿತ್ರದ ಮೇಲೆ ಸಿನಿರಸಿಕರಿಗೆ ಸಹಜ ಕುತೂಹಲ ಮತ್ತು ನಿರೀಕ್ಷೆ ಮೂಡಿದೆ.
ಈ ಸಿನೆಮಾದಲ್ಲಿ ಮನೋರಂಜನ್ ಎದುರು ಶಾನ್ವಿ ಶ್ರೀವಾಸ್ತವ ಮೊದಲ ನಾಯಕಿಯಾಗಿ ನಟಿಸಿದ್ದರೆ, ಸಾನಿಕ ಎರಡನೇ ನಾಯಕಿ. ಇದರ ಜೊತೆಗೆ ನಭಾ ನಟೇಶ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಇದರ ಬಗ್ಗೆ ಹೆಚ್ಚು ಗುಟ್ಟು ಬಿಚ್ಚಿಡದ ಚಿತ್ರತಂಡ, ನಭಾ ನಟೇಶ್ ಸಾಹೇಬನ ಫ್ಲಾಶ್ ಬ್ಯಾಕ್ ನಲ್ಲಿ ಕಾಣಿಸಿಕೊಳ್ಳುವ ಹೀರೋಯಿನ್ ಎಂಬುದನ್ನಷ್ಟೇ ತಿಳಿಸುತ್ತದೆ. 
ನಭಾ 'ವಜ್ರಕಾಯ'ದಲ್ಲಿ ಶಿವರಾಜ್ ಕುಮಾರ್ ಎದುರು ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅವರ ಎರಡನೇ ಸಿನೆಮಾ 'ಲೀ' ಇನ್ನು ನಿರ್ಮಾಣ ಹಂತದಲ್ಲಿದೆ. ಇದರಲ್ಲಿ ಅವರು ಶಮಂತ್ ಶೈಲೇಂದ್ರ ಅವರೆದುರು ನಟಿಸುತ್ತಿದ್ದಾರೆ, 'ಸಾಹೇಬ' ಬಿಡುಗಡೆಯ ನಂತರವೇ ಈ ಸಿನೆಮಾ ಹೊರಬೀಳುವ ಸಾಧ್ಯತೆ ಇದೆ. 
ಜಯಣ್ಣ ಕಂಬೈನ್ಸ್ ನಿರ್ಮಾಣದ ಈ ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿದ್ದು ಇನ್ನೆರಡು ಹಾಡುಗಳ ಚಿತ್ರೀಕರಣವಷ್ಟೇ ಬಾಳಿ ಉಳಿದಿದೆ. ವಿ ಹರಿಕೃಷ್ಣ ಸಂಗೀತ ಮತ್ತು ಜಿ ಎಸ್ ವಿ ಸೀತಾರಾಮ್ ಛಾಯಾಗ್ರಹಣವಿರುವ ಈ ಚಿತ್ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.