ಎಲ್ ಬೋರ್ಡ್ ಜೊತೆ ಮುಕುಂದ-ಮುರಾರಿ ಮಾಡಿದ್ದೇನೆ: ನಿರ್ಮಾಪಕಿ ಜಯಶ್ರೀ ದೇವಿ
ಶ್ರೀ ಮಂಜುನಾಥ ಸೇರಿದಂತ ಕನ್ನಡ ಸಿನಿಮಾ ರಂಗಕ್ಕೆ ಹಲವು ಭಕ್ತಿ ಪ್ರಧಾನ ಸಿನಿಮಾಗಳನ್ನು ನಿರ್ಮಾಪಕಿ ಜಯಶ್ರೀ ದೇವಿ, ನೀಡಿದ್ದಾರೆ. 7 ವರ್ಷಗಳ ನಂತರ...

ಬೆಂಗಳೂರು: ಶ್ರೀ ಮಂಜುನಾಥ ಸೇರಿದಂತ ಕನ್ನಡ ಸಿನಿಮಾ ರಂಗಕ್ಕೆ ಹಲವು ಭಕ್ತಿ ಪ್ರಧಾನ ಸಿನಿಮಾಗಳನ್ನು ನಿರ್ಮಾಪಕಿ ಜಯಶ್ರೀ ದೇವಿ, ನೀಡಿದ್ದಾರೆ. 7 ವರ್ಷಗಳ ನಂತರ ಮತ್ತೆ ಕನ್ನಡ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿರುವ ಜಯಶ್ರೀ ದೇವಿ ಸುದೀಪ್ ಮತ್ತು ಉಪೇಂದ್ರ ಕಾಂಬಿನೇಷನ್ ನಲ್ಲಿ ತಯಾರಿಸಿರುವ ಮುಕುಂದ-ಮುರಾರಿ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ.
ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ನಟಿಸಿರುವ ಹಿಂದಿಯ ಓ ಮೈ ಗಾಡ್ ಸಿನಿಮಾದ ಕಥೆ ಕನ್ನಡದ ಮುಕುಂದ ಮುರಾರಿಗೆ ಸ್ಫೂರ್ತಿ, ಇದರ ನಡುವೆ ಹಲವು ತೆಲುಗು ಸಿನಿಮಾ ಗಳನ್ನು ನಿರ್ಮಿಸಲಾಗಿದೆ. ಜಗದ್ಗುರು ಆದಿ ಶಂಕರ ಮೂರು ಭಾಷೆಗಳಲ್ಲಿ ತಯಾರಾಗಿದ್ದುಷ ಅದು ಪೂರ್ಣಗೊಳ್ಳಲು ಮೂರು ವರ್ಷ ಸಮಯ ಹಿಡಿಯಿತು ಎಂದು ಅವರು ಹೇಳಿದ್ದಾರೆ.
ಮುಕುಂದ-ಮುರಾರಿ ಚಿತ್ರಕ್ಕೆ ಎಂ ಎನ್ ಕುಮಾರ್ ಸಹ- ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಸಹ ನಿರ್ಮಾಪಕರ ಜೊತೆ ನಾನು ಕೆಲಸ ಮಾಡಿದ್ದಾಗಿ ಅವರು ಹೇಳಿದ್ದಾರೆ. ನಾನು ಪ್ರೊಡಕ್ಷನ್ ಬಗ್ಗೆ ಗಮನ ಹರಿಸಿದೆ. ಕುಮಾರ್ ಚಿತ್ರ ಬಿಡುಗಡೆ ಕಾರ್ಯವನ್ನು ನಿರ್ವಹಿಸಲಿದ್ದಾರೆ ಎಂದು ಜಯಶ್ರೀ ದೇವಿ ಸಿಟಿ ಎಕ್ಸ್ ಪ್ರೆಸ್ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಈ ಸಿನಿಮಾದ ಎಲ್ಲಾ ತಂತ್ರಜ್ಞರು, ಕಲಾವಿದರು, ತಂತ್ರಜ್ಞಾನ ಎಲ್ಲವು ನನಗೆ ಹೊಸದು, ಈ ಚಿತ್ರದ ಶೂಟಿಂಗ್ ನಲ್ಲಿ ಸೆಟ್ ಗೆ ಹೋಗುತ್ತಿದ್ದ ವೇಳೆ ನಾನು ತುಂಬಾ ಕಲಿತಿದ್ದೇನೆ ಎಂದು ಹೇಳಿದ್ದಾರೆ.
ನಾನು ಯಾವತ್ತು ನಿರ್ದೇಶಕರಿಗೆ ಎಷ್ಟು ಹಣ ಬೇಕಗುತ್ತದೆ ಎಂದು ಕೇಳುವುದಿಲ್ಲ. ಏಕೆ ಇಷ್ಟೊಂದು ಹಣ ಬೇಕಾಗುತ್ತದೆ. ಅದು ಅವಶ್ಯಕವೇ ಎಂಬುದಾಗಿದೆ. ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ, ಅದರ ಮಹತ್ವ ನನಗೆ ತಿಳಿಯಿತು. ಈ ಮೊದಲು ನಾನು ಚಿತ್ರ ನಿರ್ಮಾಣಕ್ಕೆ ಕೇವಲ ಬಂಡವಾಳ ಹಾಕಿ ಸುಮ್ಮನಾಗುತ್ತಿದ್ದೆ. ಒಬ್ಬ ನಿರ್ಮಾಪಕಿಯಾಗಿ ಇನ್ನು ಮುಂದೆ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


