ಶಂಕರ್ ಚೊಚ್ಚಲ ನಿರ್ದೇಶನದಲ್ಲಿ ಗುರುನಂದನ್ ಮತ್ತು ಮಯೂರಿ
ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ತಾಜಾವಾಗಿ ಗುರುತಿಸಿಕೊಂಡಿರುವ ಇಬ್ಬರು ನಟರು ಮುಂದಿನ ಸಿನೆಮಾದಲ್ಲಿ ಜೊತೆಯಾಗಿದ್ದಾರೆ. ಶಂಕರ್ ನಿರ್ದೇಶನದ ಚೊಚ್ಚಲ ಚಲನಚಿತ್ರದಲ್ಲಿ

Published On :
ಬೆಂಗಳೂರು: ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ತಾಜಾವಾಗಿ ಗುರುತಿಸಿಕೊಂಡಿರುವ ಇಬ್ಬರು ನಟರು ಮುಂದಿನ ಸಿನೆಮಾದಲ್ಲಿ ಜೊತೆಯಾಗಿದ್ದಾರೆ. ಶಂಕರ್ ನಿರ್ದೇಶನದ ಚೊಚ್ಚಲ ಚಲನಚಿತ್ರದಲ್ಲಿ 1st ರ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ಮತ್ತು ಕಿರಿತೆರೆಯಿಂದ ಬೆಳ್ಳಿತೆರೆಗೆ ಜಿಗಿದ ಮಯೂರಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
ಚೊಚ್ಚಲ ನಿರ್ದೇಶಕ ಶಂಕರ್ ಈ ಹಿಂದೆ ನಿರ್ದೇಶಕ ಪವನ್ ಒಡೆಯರ್ ಅವರೊಂದಿಗೆ 'ರಣ ವಿಕ್ರಮ', 'ಜೆಸ್ಸಿ' ಮತ್ತು ಇನ್ನು ಬಿಡುಗಡೆಯಾಗಬೇಕಿರುವ 'ನಟರಾಜ ಸರ್ವಿಸ್' ಸಿನೆಮಾಗಳಲ್ಲಿ ಸಹನಿರ್ದೇಶಕನಾಗಿ ದುಡಿದಿದ್ದಾರೆ. ಈಗ ಸ್ವತಂತ್ರ ಸಿನೆಮಾ ಮಾಡಲು ಮುಂದಾಗಿರುವ ಶಂಕರ್ ತಮ್ಮ ಹೊಸ ಚಿತ್ರಕ್ಕೆ ಹಲವು ಆಸಕ್ತಿದಾಯಕ ಶೀರ್ಷಿಕೆಗಳನ್ನು ಹೊಂದಿದ್ದು, 'ಎಂಟಿವಿ ಸುಬ್ಬುಲಕ್ಷ್ಮಿಗೆ' ಅಂತಿಮವಾಗುವ ಸಾಧ್ಯತೆಯಿದೆ.
ನಿರ್ದೇಶಕನೇ ಚಿತ್ರಕಥೆ ಬರೆದಿದ್ದು ಇದು ಹಾಸ್ಯ ಮನರಂಜನಾ ಚಿತ್ರ ಎನ್ನುತ್ತಾರೆ. "ನಾನು ನನ್ನ ಜೀವನದಲ್ಲಿ ಗಮನಿಸಿರುವ ವ್ಯಕ್ತಿಗಳ ಅನುಭವದಲ್ಲಿ ಒಂದು ಸಾಲಿನ ಕಥೆ ಬರೆದೆ" ಎನ್ನುತ್ತಾರೆ. ಪವನ್ ಅವರೊಂದಿಗೆ ಕೆಲಸ ಮಾಡಿರುವುದು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ ಎನ್ನುವ ಅವರು "ನಾನು ಅವರಿಂದ ಸಾಕಷ್ಟು ಕಲಿತೆ. ನಾನು ಅವರಿಗೆ ಕಥೆ ಹೇಳಿದಾಗ ಅವು ನನ್ನನ್ನು ಬಹಳ ಉತ್ತೇಜಿಸಿದರು ಮತ್ತು ಅದಕ್ಕೆ ಅವರು ಬಹಳಷ್ಟು ಸೇರಿಸಿದರು"ಎನ್ನುತ್ತಾರೆ.
ಅಕ್ಟೋಬರ್ 12 ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಬೆಂಗಳೂರಿನಲ್ಲಿ ನಡೆಯಲಿದೆ. ತಾಜಾ ಜೋಡಿಯನ್ನು ತೆರೆಯ ಮೇಲೆ ತರಲು ಉತ್ಸುಕರಾಗಿರುವ ನಿರ್ದೇಶಕ "ಇಬ್ಬರು ನಟರು ಬಹಳ ಪ್ರತಿಭಾಶಾಲಿಗಳು. ಅವರಿಬ್ಬರೂ ನನ್ನ ಸಿನೆಮಾದಲ್ಲಿರುವುದಕ್ಕೆ ನಾನು ಅದೃಷ್ಟವಂತ" ಎನ್ನುತ್ತಾರೆ. ಅನೂಪ್ ಸೀಳಿನ್ ಸಂಗೀತ ನೀಡಲಿದ್ದು, ಅರುಳ್ ಕೆ ಸೋಮಸುಂದರಂ ಸಿನೆಮ್ಯಾಟೋಗ್ರಾಫರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


