ಯಶ್ ಮದುವೆಗೆ ವೇದಿಕೆ ಸಿದ್ಧಪಡಿಸಿದ ಅರುಣ್ ಸಾಗರ್
ಯಶ್ ಮತ್ತು ರಾಧಿಕಾ ಪಂಡಿತ್ ಮದುವೆಗೆ ಇನ್ನು ಕೇವಲ ೧೦ ದಿನಗಳಷ್ಟೇ ಉಳಿದಿದ್ದು, ದಿನಗಣನೆ ಪ್ರಾರಂಭವಾಗಿದೆ. ಯಶ್ ಮತ್ತು ರಾಧಿಕಾ ಅವರೇ ಖುದ್ದಾಗಿ ಗೆಳೆಯರು, ನಂಟರು ಮತ್ತು ಸಹದ್ಯೋಗಿಗಳನ್ನು

Published On :
ಬೆಂಗಳೂರು: ಯಶ್ ಮತ್ತು ರಾಧಿಕಾ ಪಂಡಿತ್ ಮದುವೆಗೆ ಇನ್ನು ಕೇವಲ ೧೦ ದಿನಗಳಷ್ಟೇ ಉಳಿದಿದ್ದು, ದಿನಗಣನೆ ಪ್ರಾರಂಭವಾಗಿದೆ. ಯಶ್ ಮತ್ತು ರಾಧಿಕಾ ಅವರೇ ಖುದ್ದಾಗಿ ಗೆಳೆಯರು, ನಂಟರು ಮತ್ತು ಸಹದ್ಯೋಗಿಗಳನ್ನು ಮದುವೆಗೆ ಆಮಂತ್ರಿಸುತ್ತಿದ್ದಾರಂತೆ.
ಈಮಧ್ಯೆ ನಟ ಅರುಣ್ ಸಾಗರ್ ಅವರ ನೇತೃತ್ವದಲ್ಲಿ ಮುಹೂರ್ತ ಮತ್ತು ಆರತಕ್ಷತೆ ಸಮಾರಂಭಗಳಿಗಾಗಿ ಸುಂದರ ಮಂಟಪಗಳು ತಲೆಯೆತ್ತುತ್ತಿವೆಯಂತೆ. ಮದುವೆಯ ಎಲ್ಲಾ ವಿನ್ಯಾಸ ಕಾರ್ಯಗಳನ್ನು ಅರುಣ್ ಸಾಗರ್ ವಹಿಸಿಕೊಂಡಿರುವುದು ವಿಶೇಷ. ೬೦-೭೦ ಜನರ ತಂಡ ಕಟ್ಟಿಕೊಂಡು ಕಲಾ ನಿರ್ದೇಶಕ ಈಗಗಾಲೇ ಕೆಲಸ ಪ್ರಾರಂಭಿಸಿದ್ದಾರಂತೆ.
ಮುಹೂರ್ತ ಮಂಟಪ ದೇವಾಲಯದ ವಿನ್ಯಾಸವನ್ನು ಒಳಗೊಂಡು, ಬೇಳೂರು ಮತ್ತು ಹಳೇಬೀಡಿನ ಹೊಯ್ಸಳ ಶಿಲ್ಪಕಲೆಯನ್ನು ಪ್ರತಿನಿಧಿಸಲಿದೆ ಎಂದು ತಿಳಿದುಬಂದಿದೆ.
ಆರತಕ್ಷತೆಯ ವೇದಿಕೆ ವೈಭವಯುತವಾಗಿ ಮೂಡಿಬರುತ್ತಿದೆ ಎಂದು ತಿಳಿದುಬಂದಿದೆ. ಅರುಣ್ ಅವರ ಸಲಹೆಯಂತೆ ಧ್ರುವ ಕುಮಾರ್, ಚಂದ್ರು, ಉಡುಪ ಮತ್ತು ಸೋಮಯ್ಯ ಇದಕ್ಕಾಗಿ ಹೂಗಳ ವಿನ್ಯಾಸ ಮಾಡುತ್ತಿದ್ದಾರೆ.
ಡಿಸೆಂಬರ್ ೯ ನೆಯ ತಾರೀಖು ಆರತಕ್ಷತೆ ಕಾರ್ಯಕ್ರಮ ಇದೆ. ಇದು ಎರಡು ದಿನಗಳ ಕಾಲ ಮುಂದುವರೆಯಲಿದ್ದು, ತಾರೆಯರು,ಗೆಳೆಯರು ಹಾಗು ಕೌಟುಂಬಿಕ ವರ್ಗಕ್ಕೆ ಡಿಸೆಂಬರ್ ೧೦ ಕ್ಕೆ ಆಹ್ವಾನಿಸಿದ್ದರೆ, ಡಿಸೆಂಬರ್ ೧೧ ಕ್ಕೆ ಅಭಿಮಾನಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


