ಬೆಳ್ಳಿತೆರೆಗೆ ಬರಲಿರುವ ಹಾಸ್ಯ ಭಾಷಣಕಾರ-ರಾಜಕಾರಣಿ ನೊಗರಾಜ್
ಹಾಸ್ಯ ಭಾಷಣಕಾರ ಡ್ಯಾನಿಷ್ ಸೈಟ್ ಅವರಿಗೆ ಶ್ರೋತೃಗಳನ್ನು ನಗಿಸುವುದು ಕಾಯಕದ ಜೊತೆಗೆ ವೃತ್ತಿಧರ್ಮ ಕೂಡ. 'ಡಾ ಇಂಪ್ರೂವ್' ಎಂಬ ಅಂತರ್ಜಾಲ ಹಾಸ್ಯ ಪ್ರದರ್ಶನ ಷೋ ಮೂಲಕ

Published On :
ಬೆಂಗಳೂರು: ಹಾಸ್ಯ ಭಾಷಣಕಾರ ಡ್ಯಾನಿಷ್ ಸೈಟ್ ಅವರಿಗೆ ಶ್ರೋತೃಗಳನ್ನು ನಗಿಸುವುದು ಕಾಯಕದ ಜೊತೆಗೆ ವೃತ್ತಿಧರ್ಮ ಕೂಡ. 'ಡಾ ಇಂಪ್ರೂವ್' ಎಂಬ ಅಂತರ್ಜಾಲ ಹಾಸ್ಯ ಪ್ರದರ್ಶನ ಷೋ ಮೂಲಕ ಪ್ರಖ್ಯಾತರಾಗಿದ್ದ ಡ್ಯಾನಿಷ್ ಈಗ ಬೆಳ್ಳಿತೆರೆಗೆ ಬರಲಿದ್ದಾರೆ. ಅವರು ಸೃಷ್ಟಿಸಿದ್ದ ನೊಗರಾಜ್ ಪಾತ್ರ ಹೆಚ್ಚಿನ ಜನಕ್ಕೆ ಈಗ ತಲುಪುವ ಸಾಧ್ಯತೆಯಿದೆ.
ಇವರ ಜನಪ್ರಿಯತೆಯನ್ನು ಗಮನಿಸಿದ್ದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ನಿರ್ಮಾಪಕರು, ಈಗ ಡ್ಯಾನಿಷ್ ಮತ್ತು ನಿರ್ದೇಶಕ ಸಾದ್ ಖಾನ್ ಜೊತೆಗೂಡಿ 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಎಂಬ ಹೆಸರಿನ ಸಿನೆಮಾ ನಿರ್ಮಿಸಲು ಮುಂದಾಗಿದ್ದಾರೆ. 'ಗೋಧಿ ಬಣ್ಣ.. ' ಸಿನೆಮಾದ ನಿರ್ದೇಶಕ ಹೇಮಂತ ರಾವ್ ಈ ಸಿನೆಮಾದ ನಿರ್ಮಾಪಕರಲ್ಲಿ ಒಬ್ಬರು. "ನನ್ನ ಚೊಚ್ಚಲ ಸಿನೆಮಾದ ರಿಮೇಕ್ ಹಕ್ಕುಗಳು ಮಾರಾಟ ಮಾಡಿದ್ದರಿಂದ ಬಂದ ಹಣವನ್ನು ಇಲ್ಲಿ ಹೂಡಲು ನಿಶ್ಚಯಿಸಿದೆ" ಎನ್ನುತ್ತಾರೆ ಅವರು.
ಈ ಸಿನೆಮಾ ಜನವರಿ ೨೦೧೭ ರಿಂದ ಚಿತ್ರೀಕರಣ ಪ್ರಾರಂಭಿಸಲಿದೆ. ನಿರ್ಮಾಪಕರು ಹೇಳುವಂತೆ ಇದು ರಾಜಕೀಯ ವ್ಯಂಗ್ಯ ಸಿನೆಮಾ ಅಂತೆ. "ಇದಕ್ಕೆ ಡ್ಯಾನಿಷ್ ಮತ್ತು ಸಾದ್ ಕಥೆ-ಚಿತ್ರಕಥೆ ರಚಿಸಿದ್ದಾರೆ. ಇದು ರಾಜಕೀಯ ವ್ಯಂಗ್ಯ ಮತ್ತು ನಗೆಯ ದಂಗೆಯನ್ನು ಎಬ್ಬಿಸಲಿದೆ. ನಮ್ಮ ಸುತ್ತಲಿನ ಸಾಮಾಜಿಕ ಸಮಸ್ಯೆಗಳನ್ನು ಹಾಸ್ಯದ ಮೂಲಕ ಚರ್ಚಿಸಲಿದೆ" ಎನ್ನುತ್ತಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


