ಸಿನಿಮಾ ಸುದ್ದಿ

೫೦೦-೧೦೦೦ ನೋಟಿನ ವಿಷಯ ಮರೆತು 'ನಟರಾಜ ಸರ್ವಿಸ್' ನೋಡಿ: ಪವನ್ ಒಡೆಯರ್

೨೦೧೧ ರಲ್ಲಿ 'ಗೋವಿಂದಾಯ ನಮಃ' ಸಿನೆಮಾದ ಮೂಲಕ ಕನ್ನಡ ಚಿತ್ರರಸಿಕರ ಗಮನ ಸೆಳೆದ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ನೂತನ ಚಿತ್ರ 'ನಟರಾಜ ಸರ್ವಿಸ್' ಹಲವು ದಿನಗಳಿಂದ ಬಿಡುಗಡೆಗಾಗಿ

೫೦೦-೧೦೦೦ ನೋಟಿನ ವಿಷಯ ಮರೆತು 'ನಟರಾಜ ಸರ್ವಿಸ್' ನೋಡಿ: ಪವನ್ ಒಡೆಯರ್
'ನಟರಾಜ ಸರ್ವಿಸ್' ಸಿನೆಮಾದಲ್ಲಿ ಮಯೂರಿ ಮತ್ತು ಶರಣ್
Published On :
ಬೆಂಗಳೂರು: ೨೦೧೧ ರಲ್ಲಿ 'ಗೋವಿಂದಾಯ ನಮಃ' ಸಿನೆಮಾದ ಮೂಲಕ ಕನ್ನಡ ಚಿತ್ರರಸಿಕರ ಗಮನ ಸೆಳೆದ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ನೂತನ ಚಿತ್ರ 'ನಟರಾಜ ಸರ್ವಿಸ್' ಹಲವು ದಿನಗಳಿಂದ ಬಿಡುಗಡೆಗಾಗಿ ಕಾಯುತ್ತಿದ್ದು, ಈ ಶುಕ್ರವಾರ ತೆರೆ ಕಾಣುವ ಸಾಧ್ಯತೆ ಇದೆ. 
ಶರಣ್ ಮತ್ತು ಮಯೂರಿ ಮುಖ್ಯಭೂಮಿಕೆಯಲ್ಲಿರುವ ಈ ಸಿನೆಮಾವನ್ನು ಪುನೀತ್ ರಾಜಕುಮಾರ್ ಅರ್ಪಿಸುತ್ತದ್ದಾರೆ. "ಈ ಸಿನೆಮಾದಲ್ಲಿ ಶರಣ್ ವಿಭಿನ್ನವಾಗಿ ನಟಿಸಿದ್ದಾರೆ" ಎನ್ನುತ್ತಾರೆ ಐದು ಸಿನೆಮಾಗಳ ನಿರ್ದೇಶಕ ಪವನ್.
"ಶರಣ್ ಮತ್ತು ಮಯೂರಿ ತಮ್ಮ ಶೈಲಿಯ ನಟನೆಯಿಂದ ಅವರು ಅಭಿನಯಿಸಿರುವ ಪಾತ್ರವನ್ನು ಇನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುವುದಲ್ಲದೆ, ಈ ರಸ್ತೆ ಪ್ರವಾಸದಲ್ಲಿ ಎಲ್ಲ ಮನರಂಜನಾ ಅಂಶಗಳು ಇರಲಿವೆ" ಎನ್ನುತ್ತಾರೆ ನಿರ್ದೇಶಕ. 
ಪುನೀತ್ ರಾಜ್ ಕುಮಾರ್ ಅವರ ಆಪ್ತ ಎನ್ ಎಸ್ ರಾಜಕುಮಾರ್ ಈ ಸಿನೆಮಾದ ನಿರ್ಮಾಪಕ. ಈ ಹಿಂದೆ ಪುನೀತ್ ರಾಜಕುಮಾರ್ ಅವರ 'ರಣ ವಿಕ್ರಮ' ಸಿನೆಮಾವನ್ನು ಕೂಡ ಪವನ್ ಒಡೆಯರ್ ನಿರ್ದೇಶಿಸಿದ್ದರು. 
"ಈಗ ಸದ್ಯಕ್ಕೆ ೫೦೦ ಮತ್ತು ೧೦೦0 ರೂ ನೋಟುಗಳನ್ನು ಬದಲಾಯಿಸಿಕೊಳ್ಳುವ ವಿಷಯ ಮರೆತು ೧೦೦ ರೂ ಹಿಡಿದು ಬಂದು ನಟರಾಜ ಸರ್ವಿಸ್ ನೋಡಿ" ಎನ್ನುತ್ತಾರೆ ನಿರ್ದೇಶಕ ಪವನ್. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.