ಇಬ್ಬರು ಈ ರೀತಿಯ ಸ್ಟಂಟ್ ಗಳನ್ನು ಮೊದಲು ಮಾಡಿರಲಿಲ್ಲ: ತಮ್ಮ ಗುರುವಿಗಾಗಿ ಮಾಡಲು ಒಪ್ಪಿದ್ದರು
ಆ ದುರಂತ ಕೇವಲ ಐದಾರು ನಿಮಿಷಗಳಲ್ಲೇ ನಡೆದು ಹೋಯಿತು ಎಂದು ಮಾಸ್ತಿಗುಡಿ ಸಿನಿಮಾ ಸ್ಟಂಟ್ ಮಾಸ್ಟರ್ ರವಿವರ್ಮಾ ಹೇಳಿದ್ದಾರೆ...

ಬೆಂಗಳೂರು: ಆ ದುರಂತ ಕೇವಲ ಐದಾರು ನಿಮಿಷಗಳಲ್ಲೇ ನಡೆದು ಹೋಯಿತು ಎಂದು ಮಾಸ್ತಿಗುಡಿ ಸಿನಿಮಾ ಸ್ಟಂಟ್ ಮಾಸ್ಟರ್ ರವಿವರ್ಮಾ ಹೇಳಿದ್ದಾರೆ.
ಇದೊಂದು ದುರಂತ, ದೋಣಿ, ಈಜುಗಾರರು ಹಾಗೂ ಸಂಟ್ ಮಾಸ್ಟರ್ ಗಳಂತಾ ಸುರಕ್ಷತಾ ಕ್ರಮಗಳಿದ್ದರೂ ನಾವು ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅವರಿಬ್ಬರು ಈಜು ಕಲಿತಿದ್ದರೂ, ಆದರೆ ಈ ಮೊದಲು ಎಂದು ಪ್ರಯತ್ನಿಸಿರಲಿಲ್ಲ. ಅವರನ್ನು ಮೋದಲೇ ಕೇಳಿದ್ದೇವು, ಅನಿಲ್ ಮತ್ತು ಉದಯ್ ಒಪ್ಪಿಕೊಂಡ ನಂತರವಷ್ಟೇ ನಾವು ಅವರನ್ನು ಈ ದೃಶ್ಯ ತೆಗೆಯಲು ಆರಂಭಿಸಿದ್ದು ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ.
ಈ ದೃಶ್ಯದ ಬಗ್ಗೆ ಅವರಿಗೆ ನಾವು ತಿಳಿಸಿದೆವು, ಅವರು ತಮ್ಮ ಗುರುವಾದ ದುನಿಯಾ ವಿಜಯ್ ಅವರಿಗೋಸ್ಕರ ಈ ಸ್ಟಂಟ್ ಮಾಡಲು ಒಪ್ಪಿಕೊಂಡಿದ್ದರು. ದುರಾದೃಷ್ಟವಶಾತ್ ನೀರಿಗೆ ಬಿದ್ದ ಮೇಲೆ ಐದು ನಿಮಿಷಗಳ ಕಾಲ ನೀರಲ್ಲಿ ಉಸಿರನ್ನು ಹಿಡಿದುಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಅವರಿದ್ದ ಸ್ಥಳಕ್ಕೆ ದೋಣಿ ತಲುಪವ ವೇಳೆಗೆ ಅವರು ನೀರಿನಲ್ಲಿ ಮುಳುಗಿ ಹೋಗಿದ್ದರು.ಉದಯ್ ತಮ್ಮ ಕೈ ಮೇಲೆ ಎತ್ತಿದ್ದನ್ನು ನಾನು ನೋಡಿದೆ ಎಂದು ಅವರು ತಿಳಿಸಿದ್ದಾರೆ.
ಈ ಚಿತ್ರಕ್ಕಾಗಿ ಅವರು ತುಂಬಾ ಕಷ್ಟ ಪಟ್ಟು, ಡಯಟ್ ಮಾಡಿ ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದರು. ಅದು ಕೂಡ ಅವರು ನೀರಿನಲ್ಲಿ ಮುಳಗಿ ಹೋಗಲು ಒಂದು ಕಾರಣ ಎಂದು ನನಗನ್ನಿಸುತ್ತದೆ ಎಂದು ಹೇಳಿದ್ದಾರೆ. ಎಲ್ಲಾ ದೃಶ್ಯ ನಮ್ಮ ಕಣ್ಣ ಮುಂದೆಯೇ ನಡೆದು ಹೋಯಿತು, ಅಲ್ಲಿ ಏನು ನಡೆಯಿತು ಎಂಬುದನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳು ಎಲ್ಲಾ ದೃಶ್ಯಗಳನ್ನು ಸೆರೆ ಹಿಡಿದಿವೆ ಎಂದು ಹೇಳಿದ್ದಾರೆ.
ಅಜಯ್ ದೇವಗನ್, ಸಲ್ಮಾನ್ ಖಾನ್ ಮತ್ತು ಶಾರೂಖ್ ಖಾನ್ ಜೊತೆ ರವಿ ವರ್ಮಾ ಕೆಲಸ ಮಾಡಿದ್ದಾರೆ, ಬಾಲಿವುಡ್, ಟಾಲಿವುಡ್ ನಲ್ಲೂ ಕೆಲಸ ಮಾಡಿದ ಅನುಭವ ವರ್ಮಾ ಅವರಿಗಿದೆ, ತೆಲುಗಿನಲ್ಲಿ ಸುರೇಂದರ್ ರೆಡ್ಡಿ ನಿರ್ದೇಶನದಲ್ಲಿ ರಾಮ್ ಚರಣ್ ತೇಜಾ ಅಬಿನಯಿಸುತ್ತಿರುವ ಧ್ರುವ ಚಿತ್ರದಲ್ಲಿ ವರ್ಮಾ ಕೆಲಸ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


