ಗೊತ್ತು ಗುರಿ ಇಲ್ಲದ ಕರ್ನಾಟಕ ಚಲನಚಿತ್ರ ಶಿಕ್ಷಣ ಸಂಸ್ಥೆಗೆ ಬೇಕೇ ಚಿಕಿತ್ಸೆ?
ಕರ್ನಾಟಕ ಸರ್ಕಾರದ ಫಿಲ್ಮ್ ಮತ್ತು ಟೆಲಿವಿಶನ್ ಸಂಸ್ಥೆಯ ಬಹುತೇಕ ವಿದ್ಯಾರ್ಥಿಗಳು ಅಂತಿಮ ವರ್ಷದ ಪರೀಕ್ಷೆಯನ್ನು ಬಹಿಷ್ಕರಿಸಿದ್ದಾರೆ. ಕಾರಣ: ಸಂಸ್ಥೆಯ ಕಳಪೆ ಗುಣಮಟ್ಟದ ಶಿಕ್ಷಣ!

ಬೆಂಗಳೂರು: ಕರ್ನಾಟಕ ಸರ್ಕಾರದ ಫಿಲ್ಮ್ ಮತ್ತು ಟೆಲಿವಿಶನ್ ಸಂಸ್ಥೆಯ ಬಹುತೇಕ ವಿದ್ಯಾರ್ಥಿಗಳು ಅಂತಿಮ ವರ್ಷದ ಪರೀಕ್ಷೆಯನ್ನು ಬಹಿಷ್ಕರಿಸಿದ್ದಾರೆ. ಕಾರಣ: ಸಂಸ್ಥೆಯ ಕಳಪೆ ಗುಣಮಟ್ಟದ ಶಿಕ್ಷಣ!
ಹಿಂದಕ್ಕೆ ಸರಿದಿರುವ ಪ್ರಾಚಿನ ಪಠ್ಯ, ಹಳೆಯ ಸಲಕರಣೆಗಳು, ಇಲ್ಲದ ಒಳ್ಳೆಯ ಶಿಕ್ಷಣ ತಜ್ಞರು, ಅನುದಾನದ ಕೊರತೆ ಹೀಗೆ ಅಂಕೆಯಿಲ್ಲದ ತೊಂದರೆಗಳಿಂದ ನರಳುತ್ತಿರುವ ವಿದ್ಯಾರ್ಥಿಗಳಿ ಏಪ್ರಿಲ್ ೧೨ ರಿಂದ ಪ್ರತಿಭಟನೆಗೆ ಇಳಿದಿದ್ದಾರೆ.
"ನಾವು ಸುಮಾರು ೪೦ ದಿನಗಳಿಂದ ಪ್ರತಿಭಟಿಸುತ್ತಿದ್ದೇವೆ" ಎನ್ನುತ್ತಾರೆ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಅಗಿನ್ ಬಸಂತ್.
ಬೆಂಗಳೂರಿನ ಹೊರವಲಯ-ಹೆಸರಘಟ್ಟದಲ್ಲಿರುವ ಜಿ ಎಫ್ ಟಿ ಐ ಸಿನೆಮಾ ಜಗತ್ತಿನ ತಂತ್ರಜ್ಞಾನ ತರಬೇತಿ ನೀಡುವ ಸಂಸ್ಥೆ. ಸದ್ಯಕ್ಕೆ ಸಿನೆಮ್ಯಾಟೋಗ್ರಫಿ ಮತ್ತು ಶಬ್ದ ತಂತ್ರಜ್ಞಾನ ಕೋರ್ಸ್ ಗಳನ್ನು ಈ ಸಂಸ್ಥೆ ನಡೆಸುತ್ತದೆ.
"ಸಂಸ್ಥೆಯ ಆಡಳಿತ ಮಂಡಲಿ ನಮ್ಮನ್ನು ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಹಾಗೆ ಪರಿಗಣಿಸುತ್ತದೆ. ನಮಗೆ ಸಿನೆಮ ರಂಗ ಮತ್ತು ತಂತ್ರಜ್ಞಾನದ ಬಗ್ಗೆ ಒಳನೋಟ ಬೇಕು ಪದವಿ ಪ್ರಮಾಣಪತ್ರಗಳಲ್ಲ" ಎಂದು ವಿದ್ಯಾರ್ಥಿಯೊಬ್ಬರು ದೂರುತ್ತಾರೆ.
ಇದಕ್ಕೂ ಮುಂಚೆ ತಂತ್ರಜ್ಞಾನ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಎಚ್ ಯು ತಲವಾರ್ ಅವರನ್ನು ಭೇಟಿ ಮಾಡಿ ವಿದ್ಯಾರ್ಥಿಗಳು ಕುಂದುಕೊರತೆಗಳನ್ನು ವಿವರಿಸಿದ್ದರು. ಆದರೆ ಈ ದೂರನ್ನು ನಿರಾಕರಿಸಿದ್ದ ತಲವಾರ್ ಶಿಕ್ಷಣ ಸಂಸ್ಥೆ ಎಲ್ಲ ರೀತಿಯಲ್ಲೂ ಸಜ್ಜಾಗಿದ್ದು, ಆರೋಪದಲ್ಲಿ ಹುರುಳಿಲ್ಲ ಎಂದಿದ್ದರು.
ತರಗತಿಗಳನ್ನೇ ನಡೆಸದೆ ಪರೀಕ್ಷೆ ಬರೆಯುವಂತೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರುವ ವಿದ್ಯಾರ್ಥಿಗಳು, ಪ್ರತಿಭಟಿಸಿದ್ದಕ್ಕಾಗಿ ೧೮ ವಿದ್ಯಾರ್ಥಿಗಳನ್ನು ವಜಾ ಮಾಡಿರುವುದಾಗಿ ತಿಳಿಸುತ್ತಾರೆ. "ಪ್ರಾಂಶುಪಾಲರು ಪೋಷಕರಿಗೆ ಒತ್ತಡ ಹೇರಿ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳುವಂತೆ ಮಾಡುತ್ತಿದ್ದಾರೆ" ಎನ್ನುತ್ತಾರೆ ಶಬ್ದ ತಂತ್ರಜ್ಞಾನದ ಅಂತಿಮ ವರ್ಷದ ವಿದ್ಯಾರ್ಥಿ ಶಮೀರ್.
ವಿದ್ಯಾರ್ಥಿಗಳ ಪ್ರತಿಭಟನೆಗಳಿಗೆ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಕೂಡ ಬೆಂಬಲ ನೀಡಿದ್ದಾರೆ. "ಈಗಿರುವ ಪಾಠ ವಿದ್ಯಾರ್ಥಿಗಳಿಗೆ ಒಳ್ಳೆಯ ಅನುಭವ ನೀಡುವುದಿಲ್ಲ. ಜಿ ಎಫ್ ಟಿ ಐ ಪೂರ್ಣ ಸಜ್ಜಾಗಿರುವ ಶಿಕ್ಷಣ ಸಂಸ್ಥೆಯಲ್ಲ. ತಾತ್ಕಾಲಿಕ ಪರಿಹಾರವಾಗಿ ನಾವು ಅಲ್ಲಿ ಪಾಠ ಮಾಡಿ ಪರೀಕ್ಷೆಗಳನ್ನು ನಡೆಸಬಹುದು. ಆದರೆ ಸಂಸ್ಥೆಯನ್ನು ಕೊನೆಗಾಣಲು ಬಿಡಬಾರದು" ಎನ್ನುತ್ತಾರೆ ಕಾಸರವಳ್ಳಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


