ಸಿನಿಮಾ ಸುದ್ದಿ

ಚೊಚ್ಚಲ ಚಿತ್ರದ ಬಗ್ಗೆ 'ಅಪೂರ್ವ' ಉತ್ಸಾಹ

ಹಲವಾರು ಹೊಸಬರನ್ನು ಪರಿಚಯಿಸಿರುವ, ತಮ್ಮ ನಟನೆಯಿಂದ, ಹೊಸ ಪ್ರಯತ್ನಗಳಿಂದ ಸಾಹಸಗಳಿಂದ ಪ್ರೇಕ್ಷಕರನ್ನು ರಂಜಿಸಿರುವ ಹಿರಿಯ ನಟ-ನಿರ್ದೇಶಕ ರವಿಚಂದ್ರನ್ ಮತ್ತೊಂದು ಹೊಸ

ಚೊಚ್ಚಲ ಚಿತ್ರದ ಬಗ್ಗೆ 'ಅಪೂರ್ವ' ಉತ್ಸಾಹ
ಅಪೂರ್ವ
Published On :

ಬೆಂಗಳೂರು: ಹಲವಾರು ಹೊಸಬರನ್ನು ಪರಿಚಯಿಸಿರುವ, ತಮ್ಮ ನಟನೆಯಿಂದ, ಹೊಸ ಪ್ರಯತ್ನಗಳಿಂದ ಸಾಹಸಗಳಿಂದ ಪ್ರೇಕ್ಷಕರನ್ನು ರಂಜಿಸಿರುವ ಹಿರಿಯ ನಟ-ನಿರ್ದೇಶಕ ರವಿಚಂದ್ರನ್ ಮತ್ತೊಂದು ಹೊಸ ಪ್ರಯೋಗಕ್ಕೆ ಕೈಹಾಕಿದ್ದಾರೆ. ಶುಕ್ರವಾರ ಬಿಡುಗಡೆಯಾಗಲಿರುವ ಅವರ ಮುಂದಿನ ಚಿತ್ರ 'ಅಪೂರ್ವ' ಸಿನೆಮಾದಲ್ಲಿ ಯುವತಿ ಅಪೂರ್ವಾಗೆ ಚೊಚ್ಚಲ ಬಾರಿಗೆ ನಟಿಸಲು ಅವಕಾಶ ನೀಡಿದ್ದಾರೆ.

ನಟಿ ಅಪೂರ್ವ ಅವರಿಗೆ ತಮ್ಮ ಸಿನೆಮಾ ಪಾದಾರ್ಪಣೆಗೆ 'ಗಾಡ್ ಫಾದರ್' ಆಗಿರುವ ರವಿಚಂದ್ರನ್ ಬಗೆಗಿನ ಭಕ್ತಿ-ಗೌರವ ಎಷ್ಟಿದೆಯೆಂದರೆ ಅವರ ನಿಜ ಹೆಸರು ಮತ್ತು ವಯಸ್ಸನ್ನು ಕೂಡ ಬಿಚ್ಚಿಡಲು ಹಿಂಜರಿಯುತ್ತಾರೆ. "ರವಿಚಂದ್ರನ್ ಅವರು ನನಗೆ ನೀಡಿರುವ ಹೆಸರು ಅಪೂರ್ವ. ಅದು ನನ್ನಲ್ಲಿ ಸಂತಸ ಮತ್ತು ಧನಾತ್ಮಕತೆ ತಂದಿದೆ" ಎನ್ನುವ ಅವರು ಕೊನೆಗೂ ತಮ್ಮ ವಯಸ್ಸು ೨೦-೨೧ ಎಂದು ತಿಳಿಸುತ್ತಾರೆ. 'ಆದರೆ ಸಿನೆಮಾದಲ್ಲಿ ನನಗೆ ೧೦ ವರ್ಷ" ಎಂದು ಸೇರಿಸುತ್ತಾರೆ.

ಮೊದಲಿಗೆ ತಮ್ಮನ್ನು ಈ ಪಾತ್ರಕ್ಕೆ ನಿರ್ದೇಶಕ ತಿರಸ್ಕರಿಸಿ ಮತ್ತೆ ಕರೆದದ್ದನ್ನು ವಿವರಿಸುವ ಅಪೂರ್ವ "ನಾನು ಸಿನೆಮಾಗಳನ್ನು ಅಪಾರವಾಗಿ ನೋಡುತ್ತಿದ್ದೆ ಮತ್ತು ನಟಿಯಾಗ ಬಯಸಿದ್ದೆ. ಅದಕ್ಕೆ ರವಿಚಂದ್ರನ್ ಅವರಿಗೆ ನನ್ನ ಫೋಟೋಗಳನ್ನು ಕಳಿಸಿದೆ. ನಾನು ಬಹಳ ಹೆದರಿದ್ದರಿಂದ ನನ್ನ ಮೊದಲ ಆಡಿಶನ್ ವಿಫಲವಾಯಿತು. ನನ್ನನು ವಾಪಸ್ ಕಳುಹಿಸಿದರು. ಆದರೆ ಮೂರೂ ತಿಂಗಳ ನಂತರ ಮತ್ತೆ ನನ್ನನ್ನು ಆಡಿಶನ್ ಗೆ ಕರೆಯಲಾಯಿತು. ಈಗ ಇಲ್ಲಿದ್ದೀನಿ" ಎನ್ನುತಾರೆ.

ಎರಡು ವರ್ಷ ಚಿತ್ರೀಕರ್ಣದಲ್ಲಿ ತೊಡಗಿಸಿಕೊಂಡಿರುವ ಅಪೂರ್ವ ನಿರ್ದೇಶಕರ ಸಿನೆಮಾ ಪ್ರೀತಿ ಮತ್ತು ತೀವ್ರತೆ ಕಂಡು ಬೆರಗಾಗಿದ್ದಾರೆ. "ಅವರಿಗೆ ಸಿನೆಮಾದ ಮೇಲೆ ಇರುವ ಪ್ರೀತಿಯಿಂದಲೆ ಅಷ್ಟು ಬೆಳೆಯಲು ಅವರಿಗೆ ಸಾಧ್ಯವಾಗಿರುವುದು. ಪ್ರತಿ ಫ್ರೇಮಿನಲ್ಲು ಅವರ ನಾಯಕಿಯನ್ನು ಅಧ್ಭುತವಾಗಿ ತೋರಿಸುವ ಕಲೆ ಇದೆ ಅವರಿಗೆ"ಎನ್ನುತ್ತಾರೆ ಮೊದಲ ವರ್ಷದ ಬಿ ಕಾಂ ವಿದ್ಯಾರ್ಥಿನಿ.

ಈ ಸಿನೆಮಾದ ನಂತರ ತಮ್ಮ ಮುಂದಿನ ಭವಿಷ್ಯದ ಬಗ್ಗೆ ನಿರ್ಧರಿಸುವುದಾಗಿ ಹೇಳುವ ಅಪೂರ್ವ, ರವಿಚಂದ್ರನ್ ಅವರ ಸಲಹೆಯೊಂದಿಗೆ ಮುಂದುವರೆಯುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.