ಸಿನಿಮಾ ಸುದ್ದಿ

'ನಟರಾಜ ಸರ್ವಿಸ್' ತಂಡ ಚಿತ್ರೀಕರಣದ ವೇಳೆ ನಡೆದದ್ದು ೧೨೫ ಕಿಮೀ!

ಹೆಸರಿಗೆ ತಕ್ಕಂತೆ ಪವನ್ ಒಡೆಯರ್ ನಿರ್ದೇಶನದ 'ನಟರಾಜ ಸರ್ವಿಸ್' ತಂಡ ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಶರಣ್ ಮತ್ತು ಮಯೂರಿ ಜೊತೆಗೆ, ಯೆಲ್ಲಾಪುರ ಸುತ್ತಮುತ್ತ ನಡೆದ

'ನಟರಾಜ ಸರ್ವಿಸ್' ತಂಡ ಚಿತ್ರೀಕರಣದ ವೇಳೆ ನಡೆದದ್ದು ೧೨೫ ಕಿಮೀ!
'ನಟರಾಜ ಸರ್ವಿಸ್' ನಲ್ಲಿ ಶರಣ್ ಮತ್ತು ಮಯೂರಿ
Published On :

ಬೆಂಗಳೂರು: ಹೆಸರಿಗೆ ತಕ್ಕಂತೆ ಪವನ್ ಒಡೆಯರ್ ನಿರ್ದೇಶನದ 'ನಟರಾಜ ಸರ್ವಿಸ್' ತಂಡ ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಶರಣ್ ಮತ್ತು ಮಯೂರಿ ಜೊತೆಗೆ, ಯೆಲ್ಲಾಪುರ ಸುತ್ತಮುತ್ತ ನಡೆದ ಚಿತ್ರೀಕರಣದ ವೇಳೆಯಲ್ಲಿ ೧೨೫ ಕಿಮೀ ದೂರ ನಡೆದೇ ಕ್ರಮಿಸಿದ್ದಾರಂತೆ!

"ಆಡುಭಾಷೆಯಲ್ಲಿ ನಟರಾಜ ಸರ್ವಿಸ್ ಎಂದರೆ ನಡೆಯುವುದು ಎಂದರ್ಥ. ಚಿತ್ರೀಕರಣದ ವೇಳೆಯಲ್ಲಿ ನಾವೂ ನಟರಾಜ ಸರ್ವಿಸ್ ಗೆ ಮೊರೆ ಹೋಗಬೇಕಾಯಿತು" ಎನ್ನುವ ನಿರ್ದೇಶಕ ೨೦ ದಿನಗಳಲ್ಲಿ ೧೨೫ ಕಿಲೋ ಮೀಟರ್ ದೂರವನ್ನು ನಡೆದಿರುವುದಾಗಿ ತಿಳಿಸುತ್ತಾರೆ. "ಈ ಪ್ರದೇಶಗಳಲ್ಲಿ ಪ್ರಯಾಣ ವ್ಯವಸ್ಥೆಗೆ ವಾಹನಗಳು ಸಿಗುವುದು ಕಷ್ಟವಾಗಿರುವುದರಿಂದ ಬೇರೆ ಬೇರೆ ಜಾಗಗಳಿಗೆ ನಡೆದೇ ಹೋಗಬೇಕಾಯಿತು" ಎನ್ನುತ್ತಾರೆ ಪವನ್.

ಈಗ ಮಾತುಕತೆಯ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಹಾಡುಗಳ ಚಿತ್ರೀಕರಣ ಮತ್ತು ಡಬ್ಬಿಂಗ್ ಗೆ ಚಿತ್ರತಂಡ ಅಣಿಯಾಗುತ್ತಿದೆ. ಇವೆಲ್ಲವೂ ಬೆಂಗಳೂರಿನಲ್ಲಿಯೇ ಜರುಗಲಿದೆಯಂತೆ.

'ಜೆಸ್ಸಿ' ನಂತರ ಪವನ್ ಒಡೆಯರ್ ಈ ಸಿನೆಮಾ ನಿರ್ದೇಶಿಸುತ್ತಿದ್ದು ಇದು ಹಾಸ್ಯಚಿತ್ರವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.