ಕನ್ನಡ ಚಿತ್ರೋದ್ಯಮದದಲ್ಲಿ ನಟಿಸಲು ರಜಿನಿಗೆ ಆಸಕ್ತಿ: ಕಿಶೋರ್
ಜನಿಕಾಂತ್ ಅಭಿನಯದ 'ಕಬಾಲಿ' ಚಿತ್ರದ ಒಂದು ನಿಮಿಷದ ಟೀಸರ್ ಈಗ ನಟನ ಅಭಿಮಾನಿಗಳು ಬಹು ಚರ್ಚಿತ ವಿಷಯವಾಗಿದೆ. ಮೇ ೧ ರಂದು ಟೀಸರ್ ಬಿಡುಗಡೆಯಾದ ಒಂದೇ ಘಂಟೆಯಲ್ಲಿ

ಬೆಂಗಳೂರು: ರಜನಿಕಾಂತ್ ಅಭಿನಯದ 'ಕಬಾಲಿ' ಚಿತ್ರದ ಒಂದು ನಿಮಿಷದ ಟೀಸರ್ ಈಗ ನಟನ ಅಭಿಮಾನಿಗಳು ಬಹು ಚರ್ಚಿತ ವಿಷಯವಾಗಿದೆ. ಮೇ ೧ ರಂದು ಟೀಸರ್ ಬಿಡುಗಡೆಯಾದ ಒಂದೇ ಘಂಟೆಯಲ್ಲಿ ವೈರಲ್ ಆಗಿ ಅದನ್ನು ೧೦ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದರು ಮತ್ತು ೨೪ ಘಂಟೆಗಳಲ್ಲಿ ೫೦ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದರು.
ಕನ್ನಡ ಚಿತ್ರಪ್ರೇಮಿಗಳಿಗೂ ಸಂಸಸ ತರುವ ವಿಷಯದಲ್ಲಿ, ಈ ಟೀಸರ್ ನಲ್ಲಿ ಕನ್ನಡ ನಟ ಕಿಶೋರ್ ಕೂಡ ಸ್ಥಾನ ಪಡೆದಿದ್ದಾರೆ. 'ಕಬಾಲಿ'ಯಲ್ಲಿ ಅವರದ್ದು ವಿಲನ್ ಪಾತ್ರವಾಗಿದ್ದು, ಜನ ಟೀಸರ್ ನೋಡಿ ಹಲವಾರು ಕರೆಗಳನ್ನು ಮಾಡಿ ಸಂದೇಶಗಳನ್ನು ಕಳುಹಿಸುತ್ತಿದ್ದಾರಂತೆ.
"೬೦೦ಕ್ಕೂ ಹೆಚ್ಚು ಸಂದೇಶಗಳು ನನಗೆ ಬಂದಿವೆ. ನಾನು ಎಣಿಸುವುದನ್ನು ನಿಲ್ಲಿಸಿದೆ. ರಜನಿಕಾಂತ್ ಅಂತಹ ಹೀರೋಗೆ ಒಬ್ಬ ವಿಲನ್ ಸಾಕಾಗುವುದಿಲ್ಲ ಎಕೆಂದರ ಸೂಪರ್ ಸ್ಟಾರ್ ವಿಲನ್ ಗಳ ವಿಲನ್. ಕಬಾಲಿಗೆ ಹೆಚ್ಚಿನ ವಿಲನ್ ಗಳು ಬೇಕಾಗಿತ್ತು" ಎನ್ನುತ್ತಾರೆ ಕಿಶೋರ್.
ತಾವು ರಜನಿ ಅಭಿಮಾನಿ ಎಂದು ತಿಳಿಸುವ ಅವರು "ಅವರ ಜೊತೆಗೆ ಕೆಲಸ ಮಾಡುವುದಕ್ಕೆ, ಅವರು ಕೆಲಸ ಮಾಡುವುದನ್ನು ನೋಡುವುದಕ್ಕೆ, ಅವರ ಆದರ್ಶಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅವಕಾಶ ಸಿಕ್ಕಿದ್ದಕ್ಕೆ ನನ್ನನ್ನು ಅದೃಷ್ಟವಂತ ಎಂದೇ ತಿಳಿದಿದ್ದೇನೆ" ಎನ್ನುತ್ತಾರೆ.
ಸೆಟ್ ಗಳಲ್ಲಿ ಸೂಪರ್ ಸ್ಟಾರ್ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗದೆ ಹೋದರೂ ಅವರ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಸಾಧ್ಯವಾಗಿದೆಯಂತೆ. "ಅವರು ತುಂಬಾ ಬ್ಯುಸಿಯಾಗಿದ್ದರು. ಏಕೆಂದರೆ ಒಟ್ಟಿಗೇ ರೋಬೋಟ್-೨ ಸಿನೆಮಾಗೂ ಕೆಲಸ ಮಾಡುತ್ತಿದ್ದರು. ಮಲೇಸಿಯಾದಲ್ಲಿ ಚಿತ್ರೀಕರಣ ನಡೆಸುವಾಗ ಅವರ ಅಭಿಮಾನಿಗಳು ಅವರನ್ನು ಮುತ್ತಿಕೊಂಡದ್ದನ್ನು ನೋಡುವುದೇ ಅದ್ಭುತ" ಎನ್ನುತ್ತಾರೆ ಕಿಶೋರ್.
"ರಜನಿ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಲು ಈಗಲೂ ಆಸಕ್ತಿಯಿದೆ. ಎಲ್ಲವೂ ಸರಿಹೊಂದಿದ್ದರೆ ದಳವಾಯಿ ಮುತ್ತಣ್ಣ ಮಾಡಲು ಸಿದ್ದರಾಗಿದ್ದಾರೆ. ಆ ಪಾತ್ರ ಅವರ ವಯಸ್ಸಿಗೆ ಸರಿಹೊಂದುತ್ತದೆ ಎಂಬುದು ಅವರ ಅಭಿಪ್ರಾಯ" ಎನ್ನುತ್ತಾರೆ ಕಿಶೋರ್.
"ಇದಕ್ಕಾಗಿ ಯಾರಾದರೂ ನಿರ್ಮಾಪಕರು ಮುಂದೆ ಬರುತ್ತಾರೆ ಎಂಬ ಭರವಸೆ ಇದೆ. ನನ್ನ ಹತ್ತಿರ ಹಣವಿದ್ದರೆ ನಾನೇ ಮಾಡಿ ಮುಗಿಸುತ್ತಿದ್ದೆ" ಎನ್ನುತ್ತಾರೆ ನಟ.
ಸದ್ಯಕ್ಕೆ ಕಿಶೋರ್ ತಮ್ಮ ಕೃಷಿ ಕೆಲಸ ಮತ್ತು ಕನ್ನಡ ಸಿನೆಮಾ 'ಅಲ್ಪ ವಿರಾಮ ಪೂರ್ಣ ವಿರಾಮವಲ್ಲ' ಸಿನೆಮಾದ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


