'೬-೫=೨' ಚಿತ್ರ ನಿರ್ಮಾಪಕರಿಂದ ಮತ್ತೊಂದು ಹಾರರ್ ಚಿತ್ರ 'ಕರ್ವ'
ಕೃಷ್ಣ ಚೈತನ್ಯ ನಿರ್ಮಾಪಕರಾಗಿ ಕೆ ಎಸ್ ಅಶೋಕ ನಿರ್ದೇಶಿಸಿದ್ದ '೬-೫=೨' ಯಶಸ್ಸು ಕಂಡ ಚಿತ್ರ. ಈಗ ಇದೇ ನಿರ್ಮಾಪಕ ಮತ್ತೊಂದು ಹಾರರ್ ಚಿತ್ರಕ್ಕೆ ಅಣಿಯಾಗಿದ್ದಾರೆ.

ಬೆಂಗಳೂರು: ಕೃಷ್ಣ ಚೈತನ್ಯ ನಿರ್ಮಾಪಕರಾಗಿ ಕೆ ಎಸ್ ಅಶೋಕ ನಿರ್ದೇಶಿಸಿದ್ದ '೬-೫=೨' ಯಶಸ್ಸು ಕಂಡ ಚಿತ್ರ. ಈಗ ಇದೇ ನಿರ್ಮಾಪಕ ಮತ್ತೊಂದು ಹಾರರ್ ಚಿತ್ರಕ್ಕೆ ಅಣಿಯಾಗಿದ್ದಾರೆ.
ಈ ಬಾರಿ ನಿರ್ಮಾಪಕ 'ಕರ್ವ' ಸಿನೆಮಾದ ಜೊತೆಗೆ ತೊಡಗಿಸಿಕೊಂಡಿದ್ದಾರೆ. ಚೊಚ್ಚಲ ನಿರ್ದೇಶಕ ನವನೀತ್ ಬರೆದು ನಿರ್ದೇಶಿಸುತ್ತಿರುವ ಚಿತ್ರ ಇದು. "'ಕರ್ವ' ಹಾರರ್ ಸಿನೆಮಾ ಆದರೂ ಇದು ನೈಜ ಚಲನಚಿತ್ರ. ಸಿನೆಮಾ ಬಿಡುಗಡೆಯಾದ ಮೇಲೆ ಜನರಿಗೆ ಇದು ತಿಳಿಯುತ್ತದೆ" ಎನ್ನುತ್ತಾರೆ ಚೈತನ್ಯ.
'೬-೫=೨' ಸಿನೆಮಾದ ಜೊತೆಗೆ ಇದನ್ನು ಹೋಲಿಸಲು ಇಷ್ಟ ಪಡದ ನಿರ್ಮಾಪಕ ಕನ್ನಡ ಚಿತ್ರರಂಗದಲ್ಲಿ ಇದು ವಿನೂತನ ಪ್ರಯೋಗವಾಗಲಿದೆ ಎನ್ನುತ್ತಾರೆ. "ಪ್ರಾಮಾಣಿಕವಾಗಿ ಹೇಳಬೇಕೆಂದರೆ, '೬-೫=೨' ನಂತರ ಮತ್ತೊಂದು ಹಾರರ್ ಚಿತ್ರ ನಿರ್ಮಿಸುವ ಇರಾದೆಯಿರಲಿಲ್ಲ ನನಗೆ. ಏಕೆಂದರೆ '೬-೫=೨' ನಂತರ ಸುಮಾರು ೧೫೦ ಹಾರರ್ ಚಿತ್ರಗಳು ಬಿಡುಗಡೆಯಾಗಿವೆ, ಆದರೆ 'ಕರ್ವ' ನನ್ನನ್ನು ಸೆಳೆದಿದ್ದರಿಂದ ಮುಂದುವರೆದೆ" ಎನ್ನುತ್ತಾರೆ.
ಶ್ರೀಲಂಕಾ, ಊಟಿ ಮತ್ತು ಮೈಸೂರಿನಲ್ಲಿ 'ಕರ್ವ'ದ ಚಿತ್ರೀಕರಣ ನಡೆದಿದ್ದು ದೇವರಾಜ್, ತಿಲಕ್ ಶೇಖರ್, ಆರ್ ಜೆ ರೋಹಿತ್, ಅನೀಶ್ ಆಂಬ್ರೋಸ್ ಮತ್ತು ಅಣು ಪೂವಮ್ಮ ತಾರಾಗಣದಲ್ಲಿದ್ದಾರೆ.
"ಈಗ ಮೊದಲ ಪ್ರತಿ ಪಡೆಯುವತ್ತ ಗಮನ ಹರಿಸಿದ್ದೇವೆ ಮತ್ತು ಇನ್ನೊಂದು ವಾರದಲ್ಲಿ ಸೆನ್ಸಾರ್ ಮಂಡಲಿಗೆ ಕಳುಹಿಸಲಿದ್ದೇವೆ" ಎನ್ನುವ ಚೈತನ್ಯ ಸಿನೆಮಾ ಚೆನ್ನಾಗಿ ಬಂದಿರುವುದಾಗಿ ಭರವಸೆ ವ್ಯಕ್ತಪಡಿಸಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ.
ಕೆ ಎಸ್ ಅಶೋಕ aವರೊಂದಿಗೆ ಚೈತನ್ಯ ಮತ್ತೊಂದು ಸಿನೆಮಾ ಕೂಡ ನಿರ್ಮಿಸಲಿದ್ದಾರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


