ಸಿನಿಮಾ ಸುದ್ದಿ

ಎಂದಿರನ್-2 ಚಿತ್ರದಲ್ಲಿ ಅಕ್ಷಯ್ ಪಾತ್ರದ ಅನಾವರಣ

ಶಂಕರ್ ನಿರ್ದೇಶನದ ಎಂದಿರನ್ 2 ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಫೋಟೋ ಬಹಿರಂಗವಾಗಿದೆ...

ಎಂದಿರನ್-2 ಚಿತ್ರದಲ್ಲಿ ಅಕ್ಷಯ್ ಪಾತ್ರದ ಅನಾವರಣ
ಅಕ್ಷಯ್ ಕುಮಾರ್
Published On :

ಶಂಕರ್ ನಿರ್ದೇಶನದ ಎಂದಿರನ್ 2 ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಫೋಟೋ ಅನಾವರಣಗೊಂಡಿದೆ.

ಖಳನಾಯಕನಾದರು ಅಕ್ಷಯ್ ಕುಮಾರ್ ಅವರು ಚಿತ್ರದಲ್ಲಿ ಹೇಗೆ ಕಾಣುತ್ತಾರೆ ಎಂಬ ವಿಷಯ ಮಾತ್ರ ಬಹಿರಂಗವಾಗಿರಲಿಲ್ಲ. ಇದೀಗ ದೆಹಲಿಯ ಜವಾಹರ್ ಲಾಲ್ ನೆಹರು ಸ್ಡೇಡಿಯಂನಲ್ಲಿ ಚಿತ್ರೀಕರಣವಾಗುತ್ತಿರುವ ಸಂದರ್ಭದಲ್ಲಿ ಅಕ್ಷಯ್ ಅಭಿಮಾನಿಯೊಬ್ಬ ಫೋಟೋ ಕ್ಲಿಕಿಸಿ ಅನಾವರಣ ಮಾಡಿದ್ದಾರೆ.

ಸದ್ಯ ಫೋಟೋವನ್ನು ನೋಡದರೆ ಇದು ನಿಜಕ್ಕೂ ಅಕ್ಷಯ್ ಕುಮಾರ್ ಅವರೇನಾ ಎಂದು ಆಶ್ಚರ್ಯವಾಗುಬಹುದು. ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ಡಾ. ರಿಚರ್ಡ್ ಎಂಬ ವಿಜ್ಞಾನಿಯ ಪಾತ್ರ ಮಾಡುತ್ತಿದ್ದಾರೆ. ಒಂದು ಪ್ರಯೋಗ ಮಾಡುವ ಸಂದರ್ಭದಲ್ಲಿ ಸ್ವಲ್ಪ ಎಡವಟ್ಟಾಗಿ ತಮ್ಮ ರೂಪವನ್ನು ಕಳೆದುಕೊಳ್ಳುವ ವಿಜ್ಞಾನಿಯಾಗಿ ಅಕ್ಷಯ್ ಅಭಿನಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.