ಜಾಮೀನು ಪಡೆದು ಹೊರಬಂದವರು ಒಲಿಂಪಿಕ್ಸ್ ಹೀರೋಗಳಲ್ಲ: ಅನುಪಮ್ ಖೇರ್
ಜಾಮೀನು ಪಡೆದು ಜೈಲಿನಿಂದ ಹೊರಬಂದವರು ಒಲಿಂಪಿಕ್ಸ್ ಹೀರೋಗಳಲ್ಲ ಎಂದು ಬಾಲಿವುಡ್ ನಟ ಅನುಪಮ್ ಖೇರ್ ಅವರು ಶನಿವಾರ ಹೇಳಿದ್ದಾರೆ...

ನವದೆಹಲಿ: ಜಾಮೀನು ಪಡೆದು ಜೈಲಿನಿಂದ ಹೊರಬಂದವರು ಒಲಿಂಪಿಕ್ಸ್ ಹೀರೋಗಳಲ್ಲ ಎಂದು ಬಾಲಿವುಡ್ ನಟ ಅನುಪಮ್ ಖೇರ್ ಅವರು ಶನಿವಾರ ಹೇಳಿದ್ದಾರೆ.
ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಉಮರ್ ಖಾಲಿದ್ ಹಾಗೂ ಅನಿರ್ಬಾನ್ ಭಟ್ಟಾಚಾರ್ಯ ಇಬ್ಬರು ನಿನ್ನೆಯಷ್ಟೇ ಜಾಮೀನು ಪಡೆದು ಬಿಡುಗಡೆ ಹೊರ ಬಂದಿದ್ದರು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಜೈಲಿಗೆ ಹೋಗಿ ಬಂದವರನ್ನು ವಿವಿ ಆವರಣದಲ್ಲಿ ಬಿಡಬಾರದು. ಜಾಮೀನು ಪಡೆದು ಹೊರಬಂದವರೇನು ಒಲಿಂಪಿಕ್ಸ್ ಹೀರೋಗಳಲ್ಲ ಎಂದು ಹೇಳಿದ್ದಾರೆ.
ಅನುಪಮ್ ಖೇರ್ ನಟನೆಯ 'ಬುದ್ಧ ಸ್ಟಕ್ ಇನ್ ಎ ಟ್ರಾಫಿಕ್ ಜಾಮ್' ಚಿತ್ರದ ಸ್ಕ್ರೀನಿಂಗ್ ಜೆಎನ್ ಯು ಆವರಣದಲ್ಲಿ ನಡೆಯುತ್ತಿತ್ತು. ಈ ವೇಳೆ ವಿದ್ಯಾರ್ಥಿಗಳನ್ನುದ್ದೇಶಿಸಿ ಕೆಲವು ನಿಮಿಷಗಳ ಕಾಲ ಮಾತನಾಡಿದ್ದ ಖೇರ್ ಅವರು, ಜಾಮೀನು ಪಡೆದು ಬಂದವರೇನು ಒಲಿಂಪಿಕ್ಸ್ ಹೀರೋಗಳಲ್ಲ. ಅಂತಹವರನ್ನು ವಿವಿ ಆವರಣಕ್ಕೆ ಬರಲು ಬಿಡಬಾರದು. ಇದೀಗ ನಾನು ಕ್ರಾಂತಿಯಿಂದ ದೇಶಭಕ್ತಿಯೆಡೆಗೆ ಗಮನ ಹರಿಸಲು ತೀರ್ಮಾನಿಸಿದ್ದೇನೆಂದು ಹೇಳಿದರು. ಈ ವೇಳೆ ಕೆಲವರು 'ಭಾರತ್ ಮಾತಾಕಿ ಜೈ' ಎಂಬ ಘೋಷಣೆಗಳನ್ನು ಕೂಗಿ ಸ್ಥಳದಲ್ಲಿ ದೇಶ ಭಕ್ತಿಯನ್ನು ಪ್ರದರ್ಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


