'ನೀಲಾ' ವಿಶ್ವಪರ್ಯಟನೆ; ನ್ಯೂಯಾರ್ಕ್ ಸಿನಿಮೋತ್ಸವಕ್ಕೆ ತೆರಳಲಿರುವ ಶೃತಿ ಹರಿಹರನ್
ಹಲವಾರು ಕನ್ನಡ ಸಿನೆಮಾಗಳಲ್ಲಿ ಬುಸಿಯಾಗಿರುವ ಲೂಸಿಯಾ ಹುಡುಗಿ ಶೃತಿ ಹರಿಹರನ್, ನ್ಯೂಯಾರ್ಕ್ ಗೆ ಪ್ರವಾಸ ಬೆಳೆಸಲಿದ್ದಾರೆ.

ಬೆಂಗಳೂರು: ಹಲವಾರು ಕನ್ನಡ ಸಿನೆಮಾಗಳಲ್ಲಿ ಬುಸಿಯಾಗಿರುವ ಲೂಸಿಯಾ ಹುಡುಗಿ ಶೃತಿ ಹರಿಹರನ್, ನ್ಯೂಯಾರ್ಕ್ ಗೆ ಪ್ರವಾಸ ಬೆಳೆಸಲಿದ್ದಾರೆ.
ತಮಿಳಿನ ಸ್ವತಂತ್ರ ಚಿತ್ರ 'ನೀಲಾ'ದಲ್ಲಿ ಅವರು ನಟಿಸಿದ್ದು ಈ ಸಿನೆಮಾ ಈಗ ವಿಶ್ವ ಪರ್ಯಟನೆ ನಡೆಸಿದೆ. ಸೆಲ್ವಮಣಿ ಸೆಲ್ವರಾಜ್ ನಿರ್ದೇಶಿಸಿರುವ ಈ ಚಿತ್ರ ಕ್ಯಾಲಫೋರ್ನಿಯಾ ಸಿನೆಮೋತ್ಸವದಲ್ಲಿ ಉತ್ತಮ ಫೀಚರ್ ಸಿನೆಮಾ ಪ್ರಶಸ್ತಿಯನ್ನೂ ಗೆದ್ದಿತ್ತು.
"ವಿಶ್ವ ಸಿನೆಮಾಗಳ ಸ್ಪರ್ಧೆಯಲ್ಲಿ ಈ ಸಿನೆಮಾ ಕೂಡ ಸೆಣಸಿತ್ತು. ಈಗ ಇದನ್ನು ಗುರುತಿಸಿರುವುದು ನನಗೆ ಹೆಮ್ಮೆಯ ಸಂಗತಿ" ಎನ್ನುವ ಶೃತಿ ಮೇನಲ್ಲಿ ನ್ಯೂಯಾರ್ಕ್ ಗೆ ಪ್ರವಾಸ ಬೆಳೆಸಲಿದ್ದಾರೆ. "ಅಲ್ಲಿಯೂ ಕೂಡ ಅಂತರಾಷ್ಟ್ರೀಯ ವಿಭಾಗದಲ್ಲಿ ನಮ್ಮ ಸಿನೆಮಾ ಸ್ಪರ್ಧೆಯಲ್ಲಿದೆ" ಎಂದು ವಿವರಿಸುತ್ತಾರೆ ನಟಿ.
ಕೇವಲ ನಾಲ್ಕು ಲಕ್ಷ ಬಜೆಟ್ ನಲ್ಲಿ ನಿರ್ಮಿಸಲಾಗಿರುವ ಸಿನೆಮಾ 'ನೀಲಾ' ಒಂದೂ ವರೆ ವರ್ಷಗಳ ಕಾಲದಲ್ಲಿ ಚಿತ್ರೀಕರಣ ಮುಗಿಸಲಾಗಿತ್ತು. "ವಿತ್ತೀಯ ಹೂಡಿಕೆ ಕಡಿಮೆ ಇದ್ದರೂ ಸಮಯದ ಮತ್ತು ಪ್ರಯತ್ನದ ಹೂಡಿಗೆ ಹೆಚ್ಚಾಗಿತ್ತು" ಎನ್ನುತ್ತಾರೆ ಶೃತಿ.
ಹಲವಾರು ಸಿನೆಮೋತ್ಸವಗಳಲ್ಲಿ ಸುತ್ತುತ್ತಿರುವ ಸಿನೆಮಾ ಭಾತದಲ್ಲಿ ಬಿಡುಗಡೆ ಕಾಣುವ ಲಕ್ಷಣಗಳು ಸದ್ಯಕ್ಕಿಲ್ಲ. "ನಿರ್ಮಾಪಕರು ಸಿನೆಮಾವನ್ನು ಇಲ್ಲಿ ಬಿಡುಗಡೆ ಮಾಡಲು ಪ್ರಯತ್ನಿಸಿದರೆ, ತಾವು ಸಿನೆಮಾಗಾಗಿ ಖರ್ಚು ಮಾಡಿದ್ದಕ್ಕಿಂತಲೂ ಹೆಚ್ಚು ಕಳೆದುಕೊಳ್ಳುತ್ತಾರೆ, ಆದರೆ ಯಾರಿಗೆ ಗೊತ್ತು" ಎಂದಿದ್ದಾರೆ ನಟಿ.
'ಜೈ ಮಾರುತಿ ೮೦೦', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಬಿಡುಗಡೆಗಾಗಿ ಕಾಯುತ್ತಿರುವ ನಟಿ 'ಮಾದ ಮತ್ತು ಮಾನಸಿ' ಚಿತ್ರೀಕರಣದಲ್ಲೂ ನಿರತರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


