ಕತ್ರೀನಾ ಜೊತೆ ರೊಮ್ಯಾನ್ಸ್ ಮಾಡುವುದಕ್ಕೆ ಖುಷಿಯಿದೆ: ಸಿದ್ಧಾರ್ಥ್ ಮಲ್ಹೋತ್ರ
ಬಾರ್ ಬಾರ್ ದೆಖೋ ಚಿತ್ರದಲ್ಲಿ ನಟಿ ಕತ್ರಿನಾ ಕೈಫ್ ಜೊತೆ ರೊಮ್ಯಾನ್ಸ್ ಮಾಡುವುದಕ್ಕೆ ಬಹಳ ಖುಷಿಯಾಗುತ್ತಿದೆ ಎಂದು ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರ ಅವರು ಹೇಳಿದ್ದಾರೆ...

ನವದೆಹಲಿ: ಬಾರ್ ಬಾರ್ ದೆಖೋ ಚಿತ್ರದಲ್ಲಿ ನಟಿ ಕತ್ರಿನಾ ಕೈಫ್ ಜೊತೆ ರೊಮ್ಯಾನ್ಸ್ ಮಾಡುವುದಕ್ಕೆ ಬಹಳ ಖುಷಿಯಾಗುತ್ತಿದೆ ಎಂದು ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರ ಅವರು ಹೇಳಿದ್ದಾರೆ.
ಚಿತ್ರದಲ್ಲಿ ಇಬ್ಬರು ನಾಯಕ ನಟರಿದ್ದಾರೆಂಬುದರ ಬಗ್ಗೆ ನಾನು ಚಿಂತೆ ಮಾಡುವುದಿಲ್ಲ. ನನಗೆ ಉತ್ತಮ ಚಿತ್ರಕಥೆಯಿರಬೇಕಷ್ಟೆ. ಚಿತ್ರದಲ್ಲಿ ಇಬ್ಬರೇ ಅಥವಾ ಒಬ್ಬನೇ ನಾಯಕ ನಟನೇ ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ನನ್ನ ಮುಂದಿನ ಚಿತ್ರ ಬಾರ್ ಬಾರ್ ದೇಖೋ ಆಗಿದ್ದು, ಚಿತ್ರದಲ್ಲಿ ಕತ್ರೀನಾ ಜೊತೆ ನಟಿಸುತ್ತಿದ್ದೇನೆ. ಈ ಚಿತ್ರದಲ್ಲಿ ಬಹಳಷ್ಟು ಭಾಗದಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ಚಿತ್ರದಲ್ಲಿ ಕತ್ರೀನಾ ಜೊತೆ ರೊಮ್ಯಾನ್ಸ್ ಮಾಡುವುದಕ್ಕೆ ಬಹಳ ಖುಷಿಯಿದೆ ಎಂದು ಹೇಳಿದ್ದಾರೆ.
ಬಾರ್ ಬರ್ ದೇಖೋ ಚಿತ್ರವೊಂದು ಪ್ರೇಮದ ಕಥೆಯಾಧಾರಿತ ಚಿತ್ರವಾಗಿದ್ದು, ಈ ಚಿತ್ರದಲ್ಲಿರುವ ಕಥೆಯನ್ನು ಬೇರೆಲ್ಲೂ ನೋಡಿರಲು ಸಾಧ್ಯವೇ ಇಲ್ಲ. ಒಬ್ಬ ಯುವಕ ಜೀವನದ ಸಂಪೂರ್ಣ ಪ್ರಯಾಣ ಚಿತ್ರದಲ್ಲಿರುತ್ತದೆ. ಚಿತ್ರದಲ್ಲಿ ನಾನು 20 ವರ್ಷದಿಂದ 60 ವರ್ಷದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಕತ್ರೀನಾ ಕೈಫ್ ರನ್ನು ಸಂಪರ್ಕಿಸುವುದಕ್ಕೂ ಮುನ್ನವೇ ನನ್ನನ್ನು ಸಂಪರ್ಕಿಸಲಾಗಿತ್ತು. ನಿಜಕ್ಕೂ ಚಿತ್ರದಲ್ಲಿ ಪಾತ್ರ ನಿರ್ವಹಿಸಲು ಕೊಂಚ ಕಷ್ಟವಾಗುತ್ತದೆ. ಆದರೆ, ಪಾತ್ರಕ್ಕೆ ನನ್ನಿಂದ ಸಾಧ್ಯವಾದಷ್ಟು ಜೀವ ತುಂಬುತ್ತೇನೆ. ನ್ಯಾಯ ಒದಗಿಸುತ್ತೇನೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


