ಸುನಿ 'ಆಪರೇಷನ್ ಅಲಮೇಲಮ್ಮ' ತಂಡ ಸೇರಿದ ಯು ಟರ್ನ್ ಹುಡುಗಿ ಶ್ರದ್ಧಾ
'ಯು ಟರ್ನ್' ಯಶಸ್ಸಿನಿಂದ ಉತ್ಸಾಹದಲ್ಲಿ ತೇಲುತ್ತಿರುವ ಶ್ರದ್ಧಾ ಶ್ರೀನಾಥ ಅವರಿಗೆ ವಿರಮಿಸಲು ಸಮಯ ಇಲ್ಲ. ಇನ್ನು ಹೆಸರಿಡದ ಚಿತ್ರದಲ್ಲಿ ನಿವಿನ್ ಪೌಲಿ ಜೊತೆಗೆ ಈಗಾಗಲೇ ಒಂದು ಹಂತದ ಚಿತ್ರೀಕರಣ

Published On :
ಬೆಂಗಳೂರು: 'ಯು ಟರ್ನ್' ಯಶಸ್ಸಿನಿಂದ ಉತ್ಸಾಹದಲ್ಲಿ ತೇಲುತ್ತಿರುವ ಶ್ರದ್ಧಾ ಶ್ರೀನಾಥ್ ಅವರಿಗೆ ವಿರಮಿಸಲು ಸಮಯ ಇಲ್ಲ. ಇನ್ನು ಹೆಸರಿಡದ ಚಿತ್ರದಲ್ಲಿ ನಿವಿನ್ ಪೌಲಿ ಜೊತೆಗೆ ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿಸಿರುವ ನಟಿ ಇಂದಿನಿಂದ ಸುನಿ ಅವರ 'ಆಪರೇಷನ್ ಅಲಮೇಲಮ್ಮ' ಸೆಟ್ ಗೆ ಸೇರಲಿದ್ದಾರೆ.
'ಯು ಟರ್ನ್ ಥ್ರಿಲ್ಲರ್ ಆಗಿದ್ದರಿಂದ ನನ್ನ ಪ್ರದರ್ಶನದ ಮೇಲೆ ಹೆಚ್ಚು ಗಮನ ಹರಿಸಬೇಕಿತ್ತು. ಬದಲಾವಣೆಗೆ ಒಂದು ತಿಳಿ ಹಾಸ್ಯದ ಸಿನಮಾ ಮಾಡಬೇಕೆಂದುಕೊಂಡೆ ಅದಕ್ಕೆ 'ಆಪರೇಷನ್ ಅಲಮೇಲಮ್ಮ' ಆಯ್ಕೆ ಮಾಡಿಕೊಂಡೆ. ಅಲ್ಲದೆ ಸುನಿ ಅವರ ಹಿಂದಿನ ಕೆಲಸಗಳನ್ನು ನೋಡಿ ಅವರ ಜೊತೆಗೆ ಕೆಲಸ ಮಾಡುವ ತವಕವಿತ್ತು ಎನ್ನುತ್ತಾರೆ ನಟಿ.
ಈ ಸಿನೆಮಾದ ಮೂಲಕ ರಂಗಭೂಮಿ ನಟ ಮನೀಶ್ ರಿಷಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಮತ್ತು ಅಭಿಷೇಕ್ ಕಾಸರಗೋಡು ಇದಕ್ಕೆ ಸಿನೆಮ್ಯಾಟೋಗ್ರಾಫರ್.
ಶ್ರದ್ಧಾ ಹೇಳುವಂತೆ ಸುನಿ ಅವರ ಈ ಚಿತ್ರ ಥ್ರಿಲ್, ಪ್ರೀತಿ ಮತ್ತು ನಿಗೂಢದ ಸಂಗಮ ಆದರೆ ಹಾಸ್ಯಭರಿತ ಚಿತ್ರವಂತೆ. ಅಪಹರಣ ಪ್ರಕರಣದ ಕಥಾಹಿನ್ನಲೆ ಹೊಂದಿದ್ದು ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆಯಂತೆ.
ನಿವಿನ್ ಪೌಲಿ ಜೊತೆ ನಟಿಸುತ್ತಿರುವ ಮೊದಲ ತಮಿಳು ಸಿನೆಮಾವನ್ನು ನಿರ್ದೇಶಿಸುತ್ತಿರುವವರು ಗೌತಮ್ ರಾಮಚಂದ್ರನ್. ಅಲ್ಲದೆ ಪ್ರದೀಪ್ ವರ್ಮಾ ನಿರ್ದೇಶನದ 'ಊರ್ವಿ' ಸಿನೆಮಾದ ಚಿತ್ರೀಕರಣ ಕೂಡ ಶ್ರದ್ಧಾ ಮುಗಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


