ಹುಬ್ಬಳ್ಳಿಯಲ್ಲಿ ದೊಡ್ಮನೆ ಹುಡ್ಗ ಸಾಂಗ್ ಶೂಟಿಂಗ್ : ಚೆನ್ನಮ್ಮಸರ್ಕಲ್‌ನಲ್ಲಿ ಜನಸಾಗರ
ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಮನೆ ಹುಡ್ಗ ಚಿತ್ರದ ಹಾಡೊಂದರ ಚಿತ್ರೀಕರಣ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್‌ನಲ್ಲಿ ನಡೆಯಿತು.ಈ ವೇಳೆ ನಾಯಕ ನಟ ...

ಹುಬ್ಬಳ್ಳಿ: ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಮನೆ ಹುಡ್ಗ ಚಿತ್ರದ ಹಾಡೊಂದರ ಚಿತ್ರೀಕರಣ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್‌ನಲ್ಲಿ ನಡೆಯಿತು.ಈ ವೇಳೆ ನಾಯಕ ನಟ 'ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್' ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಸೇರಿದ್ದರು.
ಪುನೀತ್ ಅವರು ನೃತ್ಯ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ನೆಚ್ಚಿನ ನಟನೊಂದಿಗೆ ಫೋಟೋಗಾಗಿ,ಕೈಕುಲುಕಲು ಜನ ಮುಗಿಬಿದ್ದ ಕಾರಣ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. 1993 ರಲ್ಲಿ ಬಿಡುಗಡೆಗೊಂಡ 'ಡಾ .ರಾಜ್‌ಕುಮಾರ್' ಅವರ 'ಆಕಸ್ಮಿಕ' ಚಿತ್ರದ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟುಬೇಕು' ಇಂದೀಗೂ ಎಲ್ಲರ ಬಾಯಲ್ಲಿರುವ ನಿತ್ಯ ನೂತನ ಹಾಡು. ಆ ಹಾಡು ಇದೇ ಚೆನ್ನಮ್ಮ ಸರ್ಕಲ್‌ನಲ್ಲಿ ಚಿತ್ರಿಕರಣಗೊಂಡಿದ್ದುಅಲ್ಲಿ ಅಣ್ಣಾವ್ರನ್ನು ನೋಡಲು ಜನಸಾಗರವೇ ಅಂದು ಮುಗಿ ಬಿದ್ದಿತ್ತು.
ಕಟ್ಟಡಗಳ ಮೇಲೆ ಜನ ನಿಂತುಕೊಂಡು ಚೀತ್ರಿಕರಣವನ್ನು ನೋಡುತ್ತಿರುವ ರೋಮಾಂಚನಕಾರಿ ದೃಶ್ಯವನ್ನು ಹಾಡಿನಲ್ಲಿ ನೋಡಬಹುದಾಗಿದೆ. ಇದೇ ಸವಿ ನೆನಪನ್ನು ಪುನೀತ್ ಅವರು ಈ ಹಾಡಿನ ಚಿತ್ರೀಕರಣದ ಮೂಲಕ ನೆನಪಿಸಿದರು.
ಇನ್ನೂ ಸುಮಾರು 1.75ಕೋಟಿ ರು. ವೆಚ್ಚದಲ್ಲಿ ಹಾಡೊಂದರ ಚಿತ್ರೀಕರಣ ಮಾಡಲಾಗುತ್ತಿದೆ. ಅಭಿಮಾನಿಗಳೇ ನಮ್ಮ ಮನೆ ದೇವರು ಎಂಬ ಹಾಡಿಗಾಗಿ ಸುಮಾರು 180 ನೃತ್ಯಗಾರರು ಡ್ಯಾನ್ಸ್ ಮಾಡಿದ್ದಾರೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನದ ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. 2016 ಆಗಸ್ಟ್ 12 ರಂದು ಚಿತ್ರ ತೆರೆ ಕಾಣಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


