'ಅಭಿಮಾನಿಗಳೆ ನಮ್ಮನೆ ದೇವ್ರು' ಚಿತ್ರದ ಹಾಡಿಗೆ ಪುನೀತ್ ಸಖತ್ ಡ್ಯಾನ್ಸ್
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಅಭಿನಯದ ದೊಡ್ಮನೆ ಹುಡ್ಗ ಚಿತ್ರದ ಅಭಿಮಾನಿಗಳೆ ನಮ್ಮನೆ ದೇವ್ರು ಹಾಡಿಗಾಗಿ ಸಾವಿರಾರು...

ಬಳ್ಳಾರಿ: ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಅಭಿನಯದ ದೊಡ್ಮನೆ ಹುಡ್ಗ ಚಿತ್ರದ ಅಭಿಮಾನಿಗಳೆ ನಮ್ಮನೆ ದೇವ್ರು ಹಾಡಿಗಾಗಿ ಸಾವಿರಾರು ಅಭಿಮಾನಿಗಳ ಸಮಾಕ್ಷಮದಲ್ಲಿ ಹೆಜ್ಜೆ ಹಾಕಿದರು.
ನಗರದ ಕನಕ ದುರ್ಗಮ್ಮ ದೇವಸ್ಥಾನದ ಮೈದಾನದ ಆವರಣದಲ್ಲಿ ಹಾಕಲಾಗಿದ್ದ ಸ್ಟೇಜ್ ಪಕ್ಕದಲ್ಲಿ ಕನಕ ದುರ್ಗಮ್ಮ ದೇವಿಯ ಬೃಹತ್ ವಿಗ್ರಹವನ್ನು ನಿರ್ಮಿಸಲಾಗಿತ್ತು. ಈ ಹಾಡಿಗಾಗಿ 2 ಡ್ರೋನ್ ಕ್ಯಾಮೆರಾ ಹಾಗೂ 15 ಸ್ಟಡಿ ಕ್ಯಾಮೆರಾಗಳ ಮೂಲಕ ಒಂದು ನಿಮಿಷದ ನೃತ್ಯವನ್ನು ಚಿತ್ರೀಕರಿಸಲಾಗಿದೆ.
ಈ ಹಾಡಿಗಾಗಿ ಬಳ್ಳಾರಿಯಲ್ಲಿ ಐದು ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಇದಕ್ಕಾಗಿ ಬರೋಬ್ಬರಿ 1.75 ಕೋಟಿ ರುಪಾಯಿ ಖರ್ಚು ಮಾಡಲಾಗುತ್ತಿದೆ. ನಿರ್ದೇಶಕ ದುನಿಯಾ ಸೂರಿ ಹಾಡಿನ ಚಿತ್ರೀಕರಣಕ್ಕಾಗಿ 15 ಕ್ಯಾಮೆರಾ ಹಾಗೂ 200 ಡ್ಯಾನ್ಸರ್ಸ್ ಗಳನ್ನು ಬಳಸಿಕೊಳ್ಳಲಿದ್ದಾರೆ.
ಚಿತ್ರೀಕರಣ ನೋಡಲು ನಗರದ ಮತ್ತು ಸುತ್ತಮುತ್ತಲಿನ ಸಾವಿರಾರು ಸಂಖ್ಯೆಯಲ್ಲಿ ಜನತೆ ಸೇರಿದ್ದರು. ಬೆಳಗ್ಗೆ 9 ಗಂಟೆಯಿಂದ ಶೂಟಿಂಗ್ ನೋಡಲು ಅಭಿಮಾನಿಗಳು ಕಾದಿದ್ದರಿಂದ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಎದುರಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


