ಸಿನಿಮಾ ಸುದ್ದಿ

'ರನ್ ಆಂಟನಿ' ಮೂಲಕ ಜೊತೆಜೊತೆಗೇ ಓಡುತ್ತಿರುವ ಸಹೋದರರು

ವರನಟ ಡಾ. ರಾಜಕುಮಾರ್ ಕುಟುಂಬದ ಕುಡಿಯೊಬ್ಬರು ನಟನಾಗದೇ ನಿರ್ಮಾಪಕನಾಗಿ ತಮ್ಮ ಸಿನೆಮಾ ವೃತ್ತಿಜೀವನ ಆರಂಭಿಸಿದ್ದಾರೆ. ರಾಜಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜಕುಮಾರ್

'ರನ್ ಆಂಟನಿ' ಮೂಲಕ ಜೊತೆಜೊತೆಗೇ ಓಡುತ್ತಿರುವ ಸಹೋದರರು
ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಗುರು ರಾಜಕುಮಾರ್
Published On :

ಬೆಂಗಳೂರು: ವರನಟ ಡಾ. ರಾಜಕುಮಾರ್ ಕುಟುಂಬದ ಕುಡಿಯೊಬ್ಬರು ನಟನಾಗದೇ ನಿರ್ಮಾಪಕನಾಗಿ ತಮ್ಮ ಸಿನೆಮಾ ವೃತ್ತಿಜೀವನ ಆರಂಭಿಸಿದ್ದಾರೆ. ರಾಜಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಗುರು ರಾಜಕುಮಾರ್, ತಮ್ಮ ಸಹೋದರ ವಿನಯ್ ರಾಜಕುಮಾರ್ ನಟಿಸಿರುವ 'ರನ್ ಆಂಟನಿ' ಸಿನೆಮಾದ ನಿರ್ಮಾಪಕ.

"ಸಿನೆಮಾದ ಎಲ್ಲ ವಿಭಾಗಗಳಲ್ಲೂ ನಮ್ಮ ಕುಟುಂಬ ತೊಡಗಿಸಿಕೊಂಡಿದೆ. ನನ್ನ ಬಾಲ್ಯವನ್ನೆಲ್ಲ ನನ್ನ ತಾತ, ನನ್ನ ತಂದೆ ಮತ್ತು ನನ್ನ ಚಿಕ್ಕಪ್ಪ (ಪುನೀತ್ ರಾಜಕುಮಾರ್ ) ಅವರ ಚಿತ್ರೀಕರಣದದಲ್ಲಿ ಕಳೆದಿದ್ದೇನೆ. ನನಗೆ ಈ ಸಿನೆಮ ಮಾಡುವ ಯೋಜನೆಯ ಚಕ್ರ ಅರ್ಥವಾಗಿದೆ. ಆದುದರಿಂದ ನಾನು ನಿರ್ಮಾಪಕನ ಜವಾಬ್ದಾರಿ ಹೊತ್ತಿದ್ದೇನೆ" ಎನ್ನುತ್ತಾರೆ ಗುರು.

'ರನ್ ಆಂಟನಿ', 'ಸಿದ್ಧಾರ್ಥ' ನಂತರ ವಿನಯ್ ರಾಜಕುಮಾರ್ ಅವರಿಗೆ ಎರಡನೇ ಸಿನೆಮಾ. ಎಂ ಎಸ್ ರಾಮಯ್ಯ ಕಾಲೇಜಿನಿಂದ ಇತ್ತಿಚೆಗಷ್ಟೇ ಆರ್ಕಿಟೆಕ್ಚರ್ ನಲ್ಲಿ ಪದವಿ ಪಡೆದಿರುವ ಗುರು "ಇದು ನನಗೆ ಸರಿಯಾದ ಯೋಜನೆ ಎಂದೆನಿಸಿ, ಇದರಲ್ಲಿ ತೊಡಗಿಸಿಕೊಂಡೆ" ಎನ್ನುತ್ತಾರೆ.

ರಘು ಶಾಸ್ತ್ರಿ ನಿರ್ದೇಶನದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸುವ ಗುರು ನಟನಾಗುವ ಬಗ್ಗೆ "ಶೀಘ್ರದಲ್ಲೇ ನಟನಾಗುವುದಕ್ಕೆ ಆಸಕ್ತಿಯೇನಿಲ್ಲ. ಸಿನೆಮಾದ ಎಲ್ಲ ವಿಭಾಗಗಳನ್ನು ನಿಖರತೆಯಿಂದ ಕಲಿತು ಆಲ್ ರೌಂಡರ್ ಆಗುವಾಸೆ" ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.