ಸಿನಿಮಾ ಸುದ್ದಿ

ಮರಾಠಿ ಬ್ಲಾಕ್ ಬಸ್ಟರ್ 'ಸೈರಾತ್' ದಕ್ಷಿಣದ ಭಾಷೆಗಳಿಗೆ; ರಾಕ್ಲೈನ್ ಗೆ ರಿಮೇಕ್ ಹಕ್ಕು

ನಾಗರಾಜ್ ಮಂಜುಳೆ ನಿರ್ದೇಶನದ ಮರಾಠಿ ಬ್ಲಾಕ್ ಬಸ್ಟರ್ ಸಿನೆಮಾ 'ಸೈರಾತ್' ಈಗ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ರಿಮೇಕ್ ಆಗಲಿದೆ. ಇವೆಲ್ಲದರ ರಿಮೇಕ್ ಹಕ್ಕುಗಳನ್ನು

ಮರಾಠಿ ಬ್ಲಾಕ್ ಬಸ್ಟರ್ 'ಸೈರಾತ್' ದಕ್ಷಿಣದ ಭಾಷೆಗಳಿಗೆ; ರಾಕ್ಲೈನ್ ಗೆ ರಿಮೇಕ್ ಹಕ್ಕು
ಮರಾಠಿ ಬ್ಲಾಕ್ ಬಸ್ಟರ್ 'ಸೈರಾತ್' ನಲ್ಲಿ ನಟಿ ರಿಂಕು ರಾಜಗುರು ಮತ್ತು ನಟ ಆಕಾಶ್ ತೋಮರ್
Published On :

ಚೆನ್ನೈ: ನಾಗರಾಜ್ ಮಂಜುಳೆ ನಿರ್ದೇಶನದ ಮರಾಠಿ ಬ್ಲಾಕ್ ಬಸ್ಟರ್ ಸಿನೆಮಾ 'ಸೈರಾತ್' ಈಗ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ರಿಮೇಕ್ ಆಗಲಿದೆ. ಇವೆಲ್ಲದರ ರಿಮೇಕ್ ಹಕ್ಕುಗಳನ್ನು ಕೊಂಡವರು ಮತ್ಯಾರು ಅಲ್ಲ, ಕರ್ನಾಟಕದ ನಿರ್ಮಾಪಕ 'ಲಿಂಗಾ' ಖ್ಯಾತಿಯ ರಾಕ್ಲೈನ್ ವೆಂಕಟೇಶ್.

"ಮೂಲ ಸಿನೆಮಾದ ನಿರ್ಮಾಪಕರ ಜೊತೆಗೆ ದಕ್ಷಿಣ ಭಾರತದ ಭಾಷೆಗಳ ರಿಮೇಕ್ ಚಿತ್ರಗಳಿಗೆ ರಾಕ್ಲೈನ್ ಸಹ ನಿರ್ಮಾಪಕರಾಗಲಿದ್ದಾರೆ. ಶೀಘ್ರದಲ್ಲೇ ತಾರಾಗಣದ ಆಯ್ಕೆ ಪ್ರಕ್ರಿಯೆ ಮುಗಿಯಲಿದ್ದು ಆಗಸ್ಟ್ ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ" ಎಂದು ರಾಕ್ಲೈನ್ ವೆಂಕಟೇಶ್ ಅವರ ಆಪ್ತರೊಬ್ಬರು ತಿಳಿಸಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಾಗರಾಜ್ ಮಂಜುಳೆ ನಿರ್ದೇಶಿಸಿದ್ದ ಈ ಸಿನೆಮಾದ ಬಜೆಟ್ ೫ ಕೋಟಿಗೂ ಕಡಿಮೆ ಆದರೆ ಗಳಿಗೆ ೬೦ ಕೋಟಿಗೂ ಮೀರಿತ್ತು! ಈಗ ತೆಲುಗು ಅವತರಿಣೆಕೆಯನ್ನು ನಾಗರಾಜ್ ಅವರೇ ನಿರ್ದೇಶಿಸಲಿದ್ದಾರೆ ಎಂದು ತಿಳಿದುಬಂದಿದೆ.  

ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದ ರಿಂಕು ರಾಜಗುರು ಮತ್ತು ಆಕಾಶ್ ತೋಮರ್ ಪ್ರೇಕ್ಷಕರ ಮತ್ತು ವಿಮರ್ಶಕರ ಮನಗೆದ್ದಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.