ಸಿನಿಮಾ ಸುದ್ದಿ

ಪೈರಸಿಗೆ ಬಲಿಯಾಯ್ತು ಕಬಾಲಿ: 12 ಗಂಟೆಗಳಲ್ಲಿ 2 ಮಿಲಿಯನ್ ಜನರಿಂದ ವೀಕ್ಷಣೆ

ಕಬಾಲಿ ಮೊದಲ ಶೋ ಮುಗಿದ 70 ನಿಮಿಷಗಳಲ್ಲೇ ಪೂರ್ತಿ ಚಿತ್ರ ಆನ್ ಲೈನ್ ನಲ್ಲಿ ಅಪ್ ಲೋಡ್ ಆಗಿದೆ...

ಪೈರಸಿಗೆ ಬಲಿಯಾಯ್ತು ಕಬಾಲಿ: 12 ಗಂಟೆಗಳಲ್ಲಿ 2 ಮಿಲಿಯನ್ ಜನರಿಂದ ವೀಕ್ಷಣೆ
ಕಬಾಲಿ ಚಿತ್ರಪ ವೀಕ್ಷಿಸುತ್ತಿರುವ ಐಟಿ ಉದ್ಯೋಗಿ
Published On :

ಚೆನ್ನೈ: ಯಾವುದೇ ಚಿತ್ರ ಬಿಡುಗಡೆಯಾದ 24 ಗಂಟೆಗಳಲ್ಲಿ ಪೈರಸಿಗೆ ಒಳಗಾಗುವುದು ಸಾಮಾನ್ಯ, ಆದರೆ ಶುಕ್ರವಾರ ಬಿಡುಗಡೆಯಾದ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಚಿತ್ರ ಕಬಾಲಿ ಮೊದಲ ಶೋ ಮುಗಿದ 70 ನಿಮಿಷಗಳಲ್ಲೇ ಪೂರ್ತಿ ಚಿತ್ರ ಆನ್ ಲೈನ್ ನಲ್ಲಿ ಅಪ್ ಲೋಡ್ ಆಗಿದೆ.

ಜುಲೈ 22 ರಂದು ಬೆಳಗ್ಗೆ 4 ಗಂಟೆಗೆ ವಿಮಿಯೋ ವೆಬ್ ಸೈಟ್ ನಲ್ಲಿ ಸಂಪೂರ್ಣವಾಗಿ ಕಬಾಲಿ ಚಿತ್ರ ಇಂಟರ್ನೆಟ್ ನಲ್ಲಿ ಅಪ್ ಲೋಡ್ ಆಗಿದೆ. ವಿಡಿಯೋ ಅಪ್ ಲೋಡ್ ಮಾಡುವುದಕ್ಕೂ ಮುನ್ನ ಕೆಲವೇ ನಿಮಿಷಗಳಲ್ಲಿ ಪೀಟರ್ ಎಂಬ ಹೆಸರಿನಲ್ಲಿ ಅಕೌಂಟ್ ತೆರೆದು ಬೆಳಗ್ಗೆ 5.10ರ ವೇಳೆಗೆ ಇಂಟರ್ ನೆಟ್ ನಲ್ಲಿ ಅಪ್ ಲೋಡ್ ಮಾಡಿದ್ದಾನೆ.

ಪೀಟರ್ ಮೊದಲು ಕಬಾಲಿ ಚಿತ್ರ ಅಪ್ ಲೋಡ್ ಮಾಡಿದ್ದ. ತಮಿಳುನಾಡಿನ ಪೈರಸಿ ಧೈತ್ಯ Tamilcrockers.com ಕೆಲವೇ ಕ್ಷಣಗಳಲ್ಲಿ ಮತ್ತೊಂದು ವಿಡಿಯೋ ಅಪ್ ಲೋಡ್ ಮಾಡಿದೆ.

ಮೊದಲ ಶೋ ನೋಡಲು ಟಿಕೆಟ್ ಸಿಗದೇ ನಿರಾಶೆಯಾದವರಿಗೆ ಈ ಪೈರಸಿ ವಿಡಿಯೋ ವರವಾಯ್ತು. ವಿಡಿಯೋ ಲಿಂಕ್ ಎಲ್ಲೆಡೆ ಹರಡಿ ತಮ್ಮ ತಮ್ಮ ಮೊಬೈಲ್ ನಲ್ಲಿ ಕಬಾಲಿ ಚಿತ್ರ ವೀಕ್ಷಣೆ ಮಾಡಿದರು.

ಅಪ್ ಲೋಡ್ ಮಾಡಿದ 12 ಗಂಟೆಗಳಲ್ಲಿ ವಿಮಿಯೋ ಲಿಂಕ್ ಗೆ  1.85 ಮಿಲಿಯನ್ ಜನ ವಿಸಿಟ್ ಮಾಡಿದ್ದಾರೆ. ವಿಡಿಯೋ ಲಿಂಕ್ ವಾಟ್ಸಾಪ್ ನಲ್ಲಿ ಹಲವು ಬಾರಿ ಹರಿದಾಡಿತ್ತು.

ಅಮೆರಿಕ, ಇಂಡೋನೇಷ್ಯಾ, ಮಲೇಷ್ಯಾ, ಚೈನಾ, ಥೈಲ್ಯಾಂಡ್, ಜಪಾನ್ ಮುಂತಾದ ದೇಶಗಳಲ್ಲಿ ಏಕಕಾಲಕ್ಕೆ 10 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ತೀವ್ರ ಕುತೂಹಲ ಕೆರಳಿಸಿದ್ದ ಚಿತ್ರ ಮೊಬೈಲ್‍ನಲ್ಲಿ ಸೆರೆಯಾಗಿದೆ.

ಕಬಾಲಿ ಚಿತ್ರ ಲೀಕ್ ಆಗಿದೆ ಎಂಜು ಈಗಾಗಲೇ ನಿರ್ಮಾಪಕ ಎಸ್ ತನು ಮದ್ರಾಸ್ ಹೈಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದರು. ಚಿತ್ರ ಲೀಕ್ ಆಗಿರುವ ಸಂಬಂಧ ಪೈರಸಿ ವಿರೋಧಿ ಸಂಸ್ಥೆಗೆ ದೂರು ನೀಡಿದ್ದು, ಅಪರಾಧಿಗಳನ್ನು ಶೀಘ್ರವೇ ಬಂಧಿಸುವುದಾಗಿ ನಿರ್ಮಾಪಕರ ಆಪ್ತರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಮಲೇಶಿಯಾದಲ್ಲಿ ನಡೆದ ಪ್ರೀಮಿಯರ್ ಶೋನಲ್ಲೇ ಕಬಾಲಿ ಚಿತ್ರ ಲೀಕ್ ಆಗಿದೆ ಎಂದುಹೇಳಿರುವ ಅವರು, ತಪ್ಪು ಮಾಡಿದ್ದರೂ ಆ ಸೈಟ್ ಗಳನ್ನು ಇನ್ನೂ ಯಾಕೆ ಬ್ಲಾಕ್ ಮಾಡಿಲ್ಲ ಎಂದು ಅರ್ಥವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.