ಶೀಘ್ರದಲ್ಲೇ ಮುಂಗಾರು ಮಳೆ-2 ಆಡಿಯೋ ಟೀಸರ್
ಕನ್ನಡದ ಸೂಪರ್ ಹಿಟ್ ಸಿನೆಮಾ ಯೋಗರಾಜ್ ಭಟ್ ನಿರ್ದೇಶನದ 'ಮುಂಗಾರು ಮಳೆ' ಯಶಸ್ಸಿಗೆ ಪೂರಕವಾಗಿದ್ದು ಸಿನೆಮಾದಲ್ಲಿದ್ದ ಮನೋಮೂರ್ತಿ ಅವರ ಸಂಗೀತ. 'ಮುಂಗಾರು ಮಳೆಯೇ

Published On :
ಬೆಂಗಳೂರು: ಕನ್ನಡದ ಸೂಪರ್ ಹಿಟ್ ಸಿನೆಮಾ ಯೋಗರಾಜ್ ಭಟ್ ನಿರ್ದೇಶನದ 'ಮುಂಗಾರು ಮಳೆ' ಯಶಸ್ಸಿಗೆ ಪೂರಕವಾಗಿದ್ದು ಸಿನೆಮಾದಲ್ಲಿದ್ದ ಮನೋಮೂರ್ತಿ ಅವರ ಸಂಗೀತ. 'ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ/ ಕುಣಿದು ಕುಣಿದು ಬಾರೆ/ ಅನಿಸುತಿದೆ ಯಾಕೋ ಇಂದು' ಹಾಡುಗಳು ಪ್ರೇಕ್ಷಕರು ಸದಾ ಉಲಿಯುವಂತೆ ಮಾಡಿದ್ದವು. 'ಮುಂಗಾರು ಮಳೆ-2' ಸಿನೆಮಾ ಈಗ ಶಶಾಂಕ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.
ಈ ಸಿನೆಮಾಗೂ ಸಂಗೀತದ ಮೇಲೆ ಅಪಾರ ನಿರೀಕ್ಷೆ ಮೂಡಿದ್ದು ಈ ಭಾನುವಾರ 'ಮುಂಗಾರು ಮಳೆ-2' ಸಿನೆಮಾದ ಆಡಿಯೋ ಬಿಡುಗಡೆ ಮಾಡಲು ಶಶಾಂಕ್ ಮುಂದಾಗಿದ್ದಾರೆ. "ನನಗೆ ಹಲವಾರು ಹೊಳಹುಗಳು ಮೂಡಿವೆ. ಸಿನೆಮಾದ ಆಲ್ಬಮ್ ಹೆಚ್ಚಿನ ಜನಕ್ಕೆ ತಲುಪುವಂತೆ ಯೋಜನೆ ರೂಪಿಸುತ್ತಿದ್ದೇನೆ. ಆಲ್ಬಮ್ ನ ವಿವರಗಳುಳ್ಳ ಮೂರು ನಿಮಿಷದ ಟೀಸರ್ ಬಿಡುಗಡೆ ಮಾಡಲಿದ್ದು ಅದರಲ್ಲಿ ಗೀತರಚನಕಾರರ, ಹಾಡುಗಾರರ ಬಗ್ಗೆ ವಿವರಣೆ ಇರಲಿದೆ" ಎಂದು ವಿವರಿಸುತ್ತಾರೆ ಶಶಾಂಕ್.
ಆಡಿಯೋ ಸಂಸ್ಥೆಯ ಜೊತೆಗೆ ಒಪ್ಪಂದ ಕೂಡ ಅಂತಿಮ ಹಂತಕ್ಕೆ ಬಂದಿದ್ದು ಆಡಿಯೋ ಟೀಸರ್ ಬಿಡುಗಡೆ ದಿನ ಆಡಿಯೋ ಆಲ್ಬಮ್ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗುವುದಂತೆ.
"ನಮ್ಮ ಸಿನೆಮಾ ಟೀಸರ್ ಅನ್ನು ನೀರಿಕ್ಷೆಗೂ ಮೀರಿ ಜನ ಸಂಭ್ರಮಿಸಿದ್ದಾರೆ ಮತ್ತು ಆಡಿಯೋ ಟೀಸರ್ ಮತ್ತು ಹಾಡುಗಳಿಗೂ ಅದೇ ಪ್ರತಿಕ್ರಿಯೆ ಬರಲಿದೆಯೆಂದು ನಂಬಿದ್ದೇನೆ" ಎನ್ನುತ್ತಾರೆ ಶಶಾಂಕ್.
ಗಣೇಶ್ ಮತ್ತು ನೇಹಾ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ರವಿಚಂದ್ರನ್ ಗಣೇಶ್ ತಂದೆಯ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಜಿ ಗಂಗಾಧರ್ ನಿರ್ಮಿಸಿರುವ ಮುಂಗಾರು ಮಳೆ-2 ಸಿನೆಮಾದಲ್ಲಿ ಐಂದ್ರಿತಾ ರೇ, ರವಿಶಂಕರ್ ಮತ್ತು ಸಾಧು ಕೋಕಿಲಾ ಕೂಡ ನಟಿಸಿದ್ದು, ಶೇಖರ್ ಚಂದ್ರ ಸಿನೆಮ್ಯಾಟೋಗ್ರಾಫರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


