ಸಿನಿಮಾ ಸುದ್ದಿ

ಅಮೆರಿಕಾದಲ್ಲಿ 400 ತೆರೆಗಳಲ್ಲಿ 'ಕಬಾಲಿ' ಬಿಡುಗಡೆ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ತಮಿಳು ಚಿತ್ರ 'ಕಬಾಲಿ' ವಿಶ್ವದಾದ್ಯಂತ ಜುಲೈ 22 ಕ್ಕೆ ಬಿಡುಗಡೆಯಾಗಲಿದ್ದು, ಅಮೆರಿಕಾದಲ್ಲೇ 400 ತೆರಗಳಲ್ಲಿ ಬಿಡುಗಡೆ ಕಾಣಲಿದೆ.

ಅಮೆರಿಕಾದಲ್ಲಿ 400 ತೆರೆಗಳಲ್ಲಿ 'ಕಬಾಲಿ' ಬಿಡುಗಡೆ
'ಕಬಾಲಿ' ಚಿತ್ರದಲ್ಲಿ ರಜನಿಕಾಂತ್
Published On :
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ತಮಿಳು ಚಿತ್ರ 'ಕಬಾಲಿ' ವಿಶ್ವದಾದ್ಯಂತ ಜುಲೈ 22 ಕ್ಕೆ ಬಿಡುಗಡೆಯಾಗಲಿದ್ದು, ಅಮೆರಿಕಾದಲ್ಲೇ 400 ತೆರಗಳಲ್ಲಿ ಬಿಡುಗಡೆ ಕಾಣಲಿದೆ. ಒಂದು ದಿನ ಮುಂಚಿತವಾಗಿಯೇ ಹಲವಾರು ವಿಶೇಷ ಪ್ರದರ್ಶನಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ. 
ಈ ವರ್ಷ 'ಥೇರಿ' ಮತ್ತು '24' ಸಿನೆಮಾಗಳನ್ನು ಅಮೆರಿಕಾದಲ್ಲಿ ವಿತರಿಸಿದ್ದ ಸಿನೆಗ್ಯಾಲಕ್ಸಿ ಸಂಸ್ಥೆ 'ಕಬಾಲಿ' ಸಿನೆಮಾ ಕೂಡ ಅಲ್ಲಿ ಬಿಡುಗಡೆ ಮಾಡಲಿದೆ. 
"ರಜನಿಕಾಂತ್ ಅಭಿನಯದ ಸಿನೆಮಾಗೆ ಅಮೆರಿಕಾದಲ್ಲಿ ಅತಿ ದೊಡ್ಡ ಬಿಡುಗಡೆ ಇದು. ತಮಿಳು ಮತ್ತು ತೆಲುಗು ಅವತರಿಣಿಕೆಗಳೆರಡನ್ನು ಸೇರಿಸಿ 400 ತೆರೆಗಳಲ್ಲಿ 'ಕಬಾಲಿ' ಬಿಡುಗಡೆ ಕಾಣಲಿದೆ" ಎಂದು ಸಿನೆಗ್ಯಾಲಕ್ಸಿಯ ಮಧು ಗಾರ್ಲಪಾತಿ ಹೇಳಿದ್ದಾರೆ. 
ಮಧು ಅವರ ಪ್ರಕಾರ ಬಿಡುಗಡೆಗೂ ಮುಂಚಿತವಾಗಿ ಹಿಂದೆಂದೂ ಕಾಣದ ವಿಶೇಷ ಕುತೂಹಲ ಏರ್ಪಟ್ಟಿದೆ ಎಂದಿದ್ದಾರೆ. 
"ನಾವು ಮಂಗಳವಾರ ಟಿಕೆಟ್ ಮುಂಗಡ ಕಾಯ್ದಿರಿಸುವುದಕ್ಕೆ ಅವಕಾಶ ನೀಡಿದ್ದೆವು ಮತ್ತು ಕೇವಲ ಎರಡು ಘಂಟೆಗಳಲ್ಲಿ ಟೌನೆ 3 ಸಿನೆಮಾಸ್, ಸ್ಯಾನೊಯೇ ನಲ್ಲಿ ಎಲ್ಲ ಟಿಕೆಟ್ ಗಳು ಮಾರಾಟವಾದವು. ಟಿಕೆಟ್ ಗಳ ಬೆಲೆ 25 ಡಾಲರ್ ಇದ್ದು ಅಭೂತಪೂರ್ವ ಬೇಡಿಕೆ ಇದೆ" ಎಂದು ಅವರು ಹೇಳಿದ್ದಾರೆ. 
ಪ. ರಂಜಿತ್ ನಿರ್ದೇಶನದ 'ಕಬಾಲಿ' ಚಿತ್ರದಲ್ಲಿ ರಾಧಿಕಾ ಆಪ್ಟೆ, ಕಿಶೋರ್, ಕಲೈ ದರ್ಶನ್, ದಿನೇಶ್, ದಾನಿಷ್ಕಾ ಮತ್ತು ತೈವಾನಿಸ್ ನಟ ವಿನ್ಸ್ಟನ್ ಚಾಕೋ ಕೂಡ ನಟಿಸಿದ್ದಾರೆ. 
'ಕಬಾಲಿ'ಯಲ್ಲಿ ಡಾನ್ ಅವತಾರದಲ್ಲಿ ಕಾಣಿಸಿಕೊಂಡಿರುವ ರಜನಿಕಾಂತ್ ಮಲೇಷಿಯಾದಲ್ಲಿ ತಮಿಳರ ಪರವಾಗಿ ಹೋರಾಡಲಿದ್ದಾರೆ. ಈ ಸಿನೆಮಾ ಹಿಂದಿ, ತೆಲುಗು ಮತ್ತು ಮಲಯ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.